MSDC ಕೊಡುತ್ತಿದೆ ಸೃಜನಶೀಲ ಪ್ರತಿಭೆಗೆ ವೇದಿಕೆ: ಸೆ.19 ರಂದು ‘ದಿ ಸ್ಕಿಲ್ ಫೆಸ್ಟ್–ಕೌಶಲ್ 2026: ವಿವಿಧ ಸ್ಪರ್ಧೆಗಳ ಸುರಿಮಳೆ

ಮಣಿಪಾಲ: ಯುವಜನರಲ್ಲಿರುವ ಸೃಜನಶೀಲತೆ ಹಾಗೂ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ MSDC–School of Fashion & Interior ವತಿಯಿಂದ ‘ದಿ ಸ್ಕಿಲ್ ಫೆಸ್ಟ್–ಕೌಶಲ್ 2026’ ಒಂದು ದಿನದ ಕಾರ್ಯಕ್ರಮವನ್ನು ಸೆಪ್ಟೆಂಬರ್ 19ರಂದು ಆಯೋಜಿಸಲಾಗಿದೆ.

15 ವರ್ಷ ಮೇಲ್ಪಟ್ಟವರಿಗೆ ಮುಕ್ತವಾಗಿರುವ ಕಾರ್ಯಕ್ರಮದಲ್ಲಿ ಪರ್ಲ್ ನೆಕ್ಲೇಸ್ ಮೇಕಿಂಗ್, ಹ್ಯಾಂಡ್ ಎಂಬ್ರಾಯ್ಡರಿ, ಫ್ಯಾಬ್ರಿಕ್ ಪೇಂಟಿಂಗ್, ಫ್ಯಾಬ್ರಿಕ್ ರಂಗೋಲಿ, ಬೆಸ್ಟ್ ಔಟ್ ಆಫ್ ವೇಸ್ಟ್ ಹಾಗೂ ನ್ಯೂಟ್ರಿಷಿಯಸ್ ಸಲಾಡ್ ಮೇಕಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಭಾಗವಹಿಸುವವರು ತಮ್ಮ ಕಲಾತ್ಮಕತೆ, ಸೃಜನಶೀಲತೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಪ್ರತಿ ಸ್ಪರ್ಧೆಗೆ ₹100 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ವಿಜೇತರಿಗೆ ಬಹುಮಾನ, ಮೆಮೆಂಟೋ ಹಾಗೂ ಕೋರ್ಸ್ ಫೀ ವೋಚರ್‌ಗಳನ್ನು ನೀಡಲಾಗುತ್ತದೆ.

ಸ್ಪರ್ಧೆಗಳಿಗೆ ನೋಂದಣಿ ಮಾಡಿಕೊಳ್ಳಲು ಸೆಪ್ಟೆಂಬರ್ 8 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ www.msdskills.org ಸಂಪರ್ಕಿಸಬಹುದು. ನೋಂದಣಿಗಾಗಿ 8123163932 ಸಂಖ್ಯೆಗೆ ಕರೆ ಮಾಡಬಹುದಾಗಿದೆ.