ಮಾರುತಿ ಸುಜುಕಿ ಕಾರು ಪ್ರಿಯರಿಗೆ ಶಾಕ್, ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ ಕಂಪೆನಿ!

ನವದೆಹಲಿ: ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಇಂಡಿಯಾ ತನ್ನ ಆಯ್ದ ಕಾರು ಮಾದರಿಗಳ ಬೆಲೆಯನ್ನು ಗರಿಷ್ಠ ₹20,000ವರೆಗೆ ಹೆಚ್ಚಿಸಿದೆ. ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 2026ರಿಂದಲೇ ಜಾರಿಗೆ ಬಂದಿವೆ. ಮೇ ತಿಂಗಳಿನಿಂದ ಕಂಪನಿ ಬೆಲೆ ಹೆಚ್ಚಿಸುತ್ತಿರುವುದು ಇದು ಮೂರನೇ ಬಾರಿ. ಈ ಬಾರಿ ಎಲ್ಲ ಮಾದರಿಗಳ ಬದಲಿಗೆ ಆಯ್ದ ಕಾರುಗಳಿಗೆ ಮಾತ್ರ ಬೆಲೆ ಏರಿಕೆ ಅನ್ವಯವಾಗಲಿದೆ. ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ […]
ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇಂದ್ರಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ₹1.38 ಕೋಟಿ ಮೌಲ್ಯದ ಆಹಾರ ವಶ

ಬೆಂಗಳೂರು: ಅವಧಿ ಮೀರಿದ ಹಾಗೂ ಸರಿಯಾಗಿ ಲೇಬಲ್ ಮಾಡದ ಆಹಾರ ಉತ್ಪನ್ನಗಳ ಮಾರಾಟ ಮತ್ತು ಸಂಗ್ರಹದ ವಿರುದ್ಧ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವಿಶೇಷ ಜಾರಿ ಕಾರ್ಯಾಚರಣೆ ನಡೆಸಿದೆ. ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿರುವ ಅಮೆಜಾನ್ ಹಾಗೂ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇಂದ್ರಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಒಟ್ಟು ₹1.38 ಕೋಟಿ ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ-1940ರ ಅಡಿಯಲ್ಲಿ ನೇಮಕಗೊಂಡ ಅಧಿಕಾರಿಗಳು […]
ಇಂದು ದೆಹಲಿಯಲ್ಲಿ ಕಾವೇರಿ ಹೈವೋಲ್ಟೇಜ್ ಸಭೆ – ರಾಜ್ಯದ ವಾಸ್ತವ ಸ್ಥಿತಿ ಮಂಡಿಸಲು ಮಂಡ್ಯ ರೈತರ ಆಗ್ರಹ

ನವದೆಹಲಿ/ಮಂಡ್ಯ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು (ಸೆ.8) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮಹತ್ವದ ಹೈವೋಲ್ಟೇಜ್ ಸಭೆ ನಡೆಯಲಿದೆ. ಈ ಹಿಂದಿನ ಸಭೆಗಳಲ್ಲಿ ಸತತ ಮೂರು ಬಾರಿ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿದ್ದು, ಈ ಬಾರಿಯಾದರೂ ಪ್ರಾಧಿಕಾರಗಳು ವಾಸ್ತವ ಪರಿಸ್ಥಿತಿಯನ್ನು ಅರಿತು ನಿರ್ಧಾರ ಕೈಗೊಳ್ಳುತ್ತವೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ 40 ಟಿಎಂಸಿ ನೀರು ಖಾಲಿ:ಈಗಾಗಲೇ ಪ್ರಾಧಿಕಾರಗಳ ಆದೇಶಕ್ಕೆ ಮಣಿದು ರಾಜ್ಯ ಸರ್ಕಾರ […]
Onion Price: ಸೆಂಚುರಿಯತ್ತ ಈರುಳ್ಳಿ, ₹300ರತ್ತ ಬೆಳ್ಳುಳ್ಳಿ; ಇನ್ನು ಈ ತರಕಾರಿಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ತರಾಕರಿ ಖರೀದಿಸಲು ಮಾರುಕಟ್ಟೆಗೆ ಹೋದ ಜನರು ಬೆಲೆ ಕೇಳಿ ಶಾಕ್ ಆಗ್ತಿದ್ದಾರೆ. ನಿಂಬೆಹಣ್ಣು, ಈರುಳ್ಳಿ, ಬೆಳ್ಳುಳ್ಳಿ ಸೇರಿ ಎಲ್ಲಾ ತರಕಾರಿಗಳ ದರ ಏರಿಕೆ ಆಗಿದ್ದು, ಕ್ಯಾರೆಟ್ ಬೆಲೆ ಗಗನಕ್ಕೇರಿದರೆ ನೆಲ್ಲಿಕಾಯಿ ಬೆಲೆ ಕೇಳೋದೆ ಬೇಡ. ಬೆಂಗಳೂರು (ನ.08): ಅಕಾಲಿಕ ಮಳೆಯಿಂದ (Rain) ಬೆಳೆ ಹಾನಿಯಾಗಿ ದೇಶಾದ್ಯಂತ ಈರುಳ್ಳಿ ದರ (Onion Rate) ಗಣನೀಯವಾಗಿ ಏರಿಕೆಯಾಗಿದೆ. ಇನ್ನು ಕೆಲ ಭಾಗಗಳಲ್ಲಿ ಸರಿಯಾಗಿ ಮಳೆ ಇಲ್ಲದೆ ಬೆಳೆ ಇಲ್ಲವಾಗಿದ್ದು, ತರಕಾರಿಗಳ ಬೆಲೆ ಕೂಡ ಗಗನಕ್ಕೇರಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ (Market) ಈರುಳ್ಳಿ […]
ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್: ಇನ್ನು ಗ್ರಾಮೀಣ ಪ್ರದೇಶದಲ್ಲಿ 25 ದಿನಕ್ಕೊಮ್ಮೆ ಸಿಲಿಂಡರ್!

ನವದೆಹಲಿ: ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸೌಲಭ್ಯ ಘೋಷಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ರಿಫಿಲ್ ಬುಕ್ಕಿಂಗ್ ನಡುವಿನ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಲಾಗಿದೆ ಎಂದು ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಸೋಮವಾರ ತಿಳಿಸಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲಾ ಗೃಹಬಳಕೆ ಎಲ್‌ಪಿಜಿ ಗ್ರಾಹಕರು ಇನ್ನು ಮುಂದೆ 25 ದಿನಗಳಿಗೊಮ್ಮೆ ರಿಫಿಲ್ ಬುಕ್ ಮಾಡಬಹುದಾಗಿದೆ. ಈ ವ್ಯವಸ್ಥೆಯನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಕೇಂದ್ರ […]