ಜಗತ್ತಿಗೆ ಸಮಾನತೆ ಎಂಬ ಜ್ಞಾನದ ಬೆಳಕನ್ನು ಚೆಲ್ಲಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು: ಶಾಸಕ ಯಶ್ಪಾಲ್ ಎ ಸುವರ್ಣ

ಉಡುಪಿ: ದೇಶ ಕಂಡ ಮಹಾನ್ ಸಂತರಲ್ಲಿ ಒಬ್ಬರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಸುಧಾರಣೆಯಲ್ಲಿ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುವ ಮೂಲಕ ಹಿಂದುಳಿದ ಸಮಾಜದವರು ಮುಖ್ಯ ವಾಹಿನಿಗೆ ಬರಲು ದಾರಿ ಮಾಡಿಕೊಟ್ಟಿದ್ದಾರೆ. ಸಾಮಾಜಿಕ ಕಳಕಳಿಯ ಚಟುವಟಿಕೆಗಳ ಮೂಲಕ ದೇಶದೆಲ್ಲೆಡೆ ಸಂಚರಿಸಿ, ಜಗತ್ತಿಗೆ ಸಮಾನತೆ ಎಂಬ ಜ್ಞಾನದ ಬೆಳಕನ್ನು ಹರಿಸಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ಹೇಳಿದರು. ಅವರು ಇಂದು ನಗರದ ಬನ್ನಂಜೆ ನಾರಾಯಣ ಗುರು ಆಡಿಟೋರಿಯಂ ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು […]
TDF – ದಿ ಡೈಮಂಡ್ ಫ್ಯಾಕ್ಟರಿ ವಿಶೇಷ ಜ್ಯುವೆಲ್ಲರಿ ಎಕ್ಸಿಬಿಷನ್ ಗೆ ಚಾಲನೆ

ಬ್ರಹ್ಮಾವರ: ಆಭರಣ ಪ್ರಿಯರ ಮನಸೂರೆಗೊಳ್ಳುವ ವಿಶೇಷ ಜ್ಯುವೆಲ್ಲರಿ ಎಕ್ಸಿಬಿಷನ್ಗೆ ಗಣ್ಯ ಅತಿಥಿಗಳಾದ ಲತಾ ಸತೀಶ್ ಚಂದ್ರ ಹೆಗ್ಡೆ ,ಗೀತಾ ಜಯಚಂದ್ರ ಹೆಗ್ಡೆ, ಸಹನ ಶೆಟ್ಟಿ,ಶ್ರೀವಲ್ಲಿ ಶೆಟ್ಟಿ, ದಿವ್ಯ ಹೆಗ್ಡೆ, ಡಾ. ಶಕೀಲಾ ಸಚಿನ್ , ನೀತಾ ಶೆಟ್ಟಿ ,ಸೌಮ್ಯ ಶೆಟ್ಟಿ ಇವರಿಂದ ಉದ್ಘಾಟನೆಗೊಂಡಿತು . TDF – ದಿ ಡೈಮಂಡ್ ಫ್ಯಾಕ್ಟರಿ ವತಿಯಿಂದ ಆಗಸ್ಟ್ 28, 29 ಮತ್ತು 30ರಂದು ಮೂರು ದಿನಗಳ ಕಾಲ ವಿಶೇಷ ಆಭರಣ ಪ್ರದರ್ಶನ ಬ್ರಹ್ಮಾವರದ ಫಾರ್ಚೂನ್ ಪ್ಲಾಜಾ ಹೋಟೆಲ್ನಲ್ಲಿ ಬೆಳಿಗ್ಗೆ 10 […]
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಯುವತಿಯನ್ನು ಭೇಟಿ ಮಾಡಲು ಹೋದವನಿಗೆ ಕಾದಿತ್ತು ಶಾಕ್! ಕಳೆದು ಕೊಂಡದ್ದು ₹3.75 ಲಕ್ಷ

ಬೆಂಗಳೂರು: ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ತೆರಳಿದ್ದ ಕೇರಳ ಮೂಲದ 33 ವರ್ಷದ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಅವರ ಬ್ಯಾಂಕ್ ಖಾತೆಗಳಿಂದ ಸುಮಾರು ₹3.75 ಲಕ್ಷ ಹಣ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸೂರು ಮುಖ್ಯರಸ್ತೆಯ ಟೆರಾಕಾನ್ ಲೇಔಟ್ ನಿವಾಸಿ ಪ್ರಣವ್ (ಹೆಸರು ಬದಲಿಸಲಾಗಿದೆ) ಎಂಬ ಖಾಸಗಿ ಕಂಪನಿ ಉದ್ಯೋಗಿ ಘಟನೆಗೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಬ್ಗೆ ಕರೆಸಿ ಅಪಹರಣ ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿ ಎಂದು ಪರಿಚಯಿಸಿಕೊಂಡಿದ್ದ ಪೂನಮ್ ಎಂಬ ಯುವತಿ ಡೇಟಿಂಗ್ […]
ಹೆಬ್ರಿ ತಾಲೂಕು ಮಟ್ಟದ 10ನೇ ವರ್ಷದ ಚಿತ್ರಕಲಾ ಸ್ಪರ್ಧೆ; ಕಲಾ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ – ರವೀಂದ್ರ ಹೆಗ್ಡೆ

ಹೆಬ್ರಿ: ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿ ಚಾಣಕ್ಯ ಶಿಕ್ಷಣ ಸಂಸ್ಥೆ ಕಳೆದ 12 ವರ್ಷಗಳಿಂದ ಗುಣಮಟ್ಟದ ವಿವಿಧ ಕಲಾಪ್ರಕಾರಗಳ ತರಬೇತಿ ಜೊತೆಗೆ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತ ಚಿತ್ರಕಲಾ ತರಬೇತಿ ನೀಡಿ ಅವರಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿರುತ್ತಿರುವುದು ಶ್ಲಾಘನೀಯ ಎಂದು ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಹೇಳಿದರು. ಅವರು ಚಾಣಕ್ಯ ಚಿತ್ರಕಲಾ ತರಬೇತಿ ಕೇಂದ್ರ ಹೆಬ್ರಿ ಇದರ ನೇತೃತ್ವದಲ್ಲಿ ನೇತಾಜಿ ಫ್ರೆಂಡ್ಸ್ ಕ್ಲಬ್ ಮುದ್ರಾಡಿ ,ಲಯನ್ಸ್ ಕ್ಲಬ್ ಹೆಬ್ರಿ […]
ಕಣ್ಣೀರಿಟ್ಟು ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ;

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಮೊದಲ ರಾಜೀನಾಮೆ ಹೊರಬಿದ್ದಿದೆ. ಮಾಜಿ ಸಚಿವ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಮರಳಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣ್ಣೀರಿಡುತ್ತಲೇ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು. ವಿಪಕ್ಷಗಳು ವಿಧಾನಸಭೆಯ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದ ನಾಗೇಂದ್ರ, “ಸದನ ನಡೆಯಲು ವಿಪಕ್ಷಗಳು ಬಿಡಲಿಲ್ಲ. ಅಜೆಂಡಾ ಇಲ್ಲದೆ, ವಿಷಯವಿಲ್ಲದೆ ಹೋರಾಟ ನಡೆಸಿದರು” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿನ ಬರ […]