ಆನಂದ್ ಡೆಂಟಲ್ & ಆರ್ಥೋ ಅಲೈನರ್ಸ್ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ಉಡುಪಿಯಲ್ಲಿ ನೂತನ ಶಾಖೆ ಶುಭಾರಂಭ

ಸುದ್ದಿಮನೆ, ಕುಂದಾಪುರ: 18 ವರ್ಷಗಳ ವಾತ್ಸಲ್ಯಮಯ ಆರೈಕೆ ಮತ್ತು ನಗುಮೊಗದ ಚಿಕಿತ್ಸೆಯಿಂದ ಜನರ ನಂಬಿಕೆ ಗಳಿಸಿರುವ ಆನಂದ್ ಡೆಂಟಲ್ & ಆರ್ಥೋ ಅಲೈನರ್ಸ್ ಅವರ ನೂತನ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಆಗಸ್ಟ್ 23ರ ಭಾನುವಾರದಂದು ಉಡುಪಿ ಜಿಲ್ಲಾ ನ್ಯಾಯಾಲಯದ ಹಿಂಭಾಗದ ರಸ್ತೆ ಬಳಿ ಉದ್ಘಾಟನೆಗೊಂಡಿತು.
ಹಿರಿಯ ದಂತ ಶಸ್ತ್ರಚಿಕಿತ್ಸಕ ಡಾ.ಯು. ವೆಂಕಟರಾಜ್ ಉದ್ಘಾಟನೆ ನೆರವೇರಿಸಿ, “ಈಗಾಗಲೇ ಈ ವೃತ್ತಿಯಲ್ಲಿ ಸಾಕಷ್ಟು ಹೆಸರುಗಳಿಸಿರುವ ಈ ವೈದ್ಯ ದಂಪತಿಗಳಿಗೆ ಮತ್ತಷ್ಟು ಯಶಸ್ಸು ಸಿಗಲಿ, ರೋಗಿಗಳೊಂದಿಗಿನ ಅವರ ಆತ್ಮೀಯ ಒಡನಾಟ, ತಾಳ್ಮೆಯ ಆರೈಕೆ ಮೆಚ್ಚುವಂತದ್ದು ” ಹಿತನುಡಿಗಳನ್ನಾಡಿದರು. ಎಂಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ವಕೀಲ ದಿವಾಕರ್ ಎಂ.ಶೆಟ್ಟಿ, ಜನರಲ್ ಸರ್ಜನ್ ಹಾಗೂ ನ್ಯೂ ಸಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ರಮೇಶ್ ನಾಯಕ್, ಹಿರಿಯ ದಂತ ಶಸ್ತ್ರಚಿಕಿತ್ಸಕ ಹಾಗೂ ಕಾಶಿ ಮಠ ಮಹಾಲಸ ನಾರಾಯಣಿ ದೇವಸ್ಥಾನದ ಅಧ್ಯಕ್ಷ ಡಾ.ಬಿ. ದಾಮೋದರ ಪೈ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಶುಭ ಕೋರಿದರು. ದಂತವೈದ್ಯರಾದ ಡಾ. ಪ್ರವೀಣ್ ಶೆಟ್ಟಿ ಕೊಡ್ಲಾಡಿ, ದಂತ ಶಸ್ತ್ರಚಿಕಿತ್ಸಕಿ ಡಾ. ರಮಾ ಪ್ರವೀಣ್ ಶೆಟ್ಟಿ, ಎಮ್. ಆನಂದ ಶೆಟ್ಟಿ, ಎಚ್. ನಾರಾಯಣ ಶೆಟ್ಟಿ, ಸುಶೀಲಾ ಎ. ಶೆಟ್ಟಿ ಮತ್ತು ಕುಟುಂಬ ಕೊಡ್ಲಾಡಿ, ಚೇತನಾ ಎನ್. ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಸುಬ್ಬಣ್ಣ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ ಕೊಡ್ಲಾಡಿ ಉಪಸ್ಥಿತರಿದ್ದರು
ಹಿರಿಯ ನಾಗರಿಕರಿಗೆ ಉಪಯೋಗವಾಗುವ ಹಿನ್ನೆಲೆಯಲ್ಲಿ ನೆಲಮಹಡಿಯಲ್ಲೇ ಈ ಕ್ಲಿನಿಕ್ ಪ್ರಾರಂಭಿಸಿದ್ದು, ರೂಟ್‌ಕ್ಯಾನಲ್ ಥೆರಪಿ, ಇಂಪ್ಲಾಂಟ್, ಅಲೈರ್ನ ಮಕ್ಕಳ ದಂತ ಚಿಕಿತ್ಸೆ ಇತ್ಯಾದಿ ಚಿಕಿತ್ಸೆಗಳನ್ನು ಪರಿಣತ ವೈದ್ಯರಿಂದ ಮಾಡಲು ತಯಾರಿ ಮಾಡಿಕೊಂಡಿದ್ದೇವೆ. ಸಾರ್ವಜನಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.