ಮಣಿಪಾಲದ MSDC ಯಲ್ಲಿ ರಕ್ಷಾಬಂಧನಕ್ಕೆ ವಿಶೇಷ ಕೊಡುಗೆ: ಕಾಸ್ಮೆಟಾಲಜಿ ಕೋರ್ಸ್ಗಳಿಗೆ ಭರ್ಜರಿ ರಿಯಾಯಿತಿ

ಮಣಿಪಾಲ: ರಕ್ಷಾಬಂಧನ ಹಬ್ಬದ ಅಂಗವಾಗಿ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಸಹಯೋಗದಲ್ಲಿ ಒರೇನ್ ಇಂಟರ್ನ್ಯಾಷನಲ್ ವತಿಯಿಂದ ಕಾಸ್ಮೆಟಾಲಜಿ ಕೌಶಲಾಭಿವೃದ್ಧಿ ಕೋರ್ಸ್ಗಳಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ‘ಈ ರಕ್ಷಾಬಂಧನಕ್ಕೆ ಆಕೆಗೆ ಕಾಸ್ಮೆಟಾಲಜಿ ಕೌಶಲ ನೀಡಿ’ ಎಂಬ ಆಶಯದೊಂದಿಗೆ ಈ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ಎಲ್ಲಾ ಕೋರ್ಸ್ಗಳ ಶುಲ್ಕದಲ್ಲಿ ಗರಿಷ್ಠ ಶೇ.30ರವರೆಗೆ ರಿಯಾಯಿತಿ ಲಭ್ಯವಿದೆ. ಈ ಕೊಡುಗೆ ಆಗಸ್ಟ್ 31ರವರೆಗೆ ಮಾತ್ರ ಮಾನ್ಯವಾಗಿರಲಿದೆ. ಕಾಸ್ಮೆಟಾಲಜಿ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿ ಪಡೆದು ಉದ್ಯೋಗಾವಕಾಶಗಳನ್ನು ಪಡೆಯಲು ಹಾಗೂ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ […]
ಕಾರ್ಕಳದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ರಕ್ಷಾಬಂಧನ ಕಾರ್ಯಕ್ರಮ

ಕಾರ್ಕಳ: ನಗರದ ಆರಾಮ್ ಇಂಡಸ್ಟ್ರೀಸ್ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವಾಕೇಂದ್ರದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾಸರಗೋಡು ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿ.ಕೆ. ವಿಜಯಾಜಿ ಅವರು ರಕ್ಷಾಬಂಧನ ಹಬ್ಬದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದರು. ಪ್ರಪಂಚದ ಎಲ್ಲ ಮಾನವ ಆತ್ಮರೂ ಒಬ್ಬ ಪರಮಾತ್ಮನ ಸಂತಾನರು. ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ನೈತಿಕ ಹಾಗೂ ಆಧ್ಯಾತ್ಮಿಕ ಶಕ್ತಿಯ ಕೊರತೆ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಪರಮಾತ್ಮನ ಅವತರಣೆಯಾಗಿದೆ ಎಂದು ಅವರು ಹೇಳಿದರು. […]
ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಗ್ಯಾಂಗ್ಗೆ ಮತ್ತಷ್ಟು ಸಂಕಷ್ಟ; ಪ್ರದೋಷ್ ಸಾಕ್ಷ್ಯಕ್ಕೆ ಕೋರ್ಟ್ ದಿನಾಂಕ ನಿಗದಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೋಷ್ ಮಾಫಿ ಸಾಕ್ಷಿ (ಅಪ್ರೂವರ್) ಆಗಲು ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಇದೀಗ ಅವರ ಸಾಕ್ಷ್ಯ ದಾಖಲಿಸಲು ನ್ಯಾಯಾಲಯ ಮುಂದಾಗಿದೆ. ಪ್ರದೋಷ್ ಅವರನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಲು 59ನೇ ಸಿಸಿಹೆಚ್ ನ್ಯಾಯಾಲಯ ವಿಟ್ನೆಸ್ ಸಮನ್ಸ್ ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಪ್ರದೋಷ್ಗೆ ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ […]
ಜಿಯೋ–ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL–Vi ಜೊತೆಯಾಟ, ನೆಟ್ವರ್ಕ್ ಹಂಚಿಕೆಗೆ ಮಹತ್ವದ ಹೆಜ್ಜೆ:ಸದ್ದು ಮಾಡಲಿದೆ BSNL ಮತ್ತು ವೊಡಾಫೋನ್ ಐಡಿಯಾ!

ಬೆಂಗಳೂರು: ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮತ್ತು ಏರ್ಟೆಲ್ಗಳ ಪಾರುಪತ್ಯಕ್ಕೆ ಸವಾಲು ಹಾಕಲು ಬಿಎಸ್ಎನ್ಎಲ್ ಹಾಗೂ ವೊಡಾಫೋನ್ ಐಡಿಯಾ (Vi) ಹೊಸ ತಂತ್ರ ರೂಪಿಸಿವೆ. ಎರಡೂ ಸಂಸ್ಥೆಗಳು ತಮ್ಮ ನೆಟ್ವರ್ಕ್ ಹಾಗೂ ಮೂಲಸೌಕರ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಮುಂದಾಗಿದ್ದು, ಈ ಒಪ್ಪಂದ ಜಾರಿಯಾದರೆ ಗ್ರಾಹಕರಿಗೆ ನೆಟ್ವರ್ಕ್ ವ್ಯಾಪ್ತಿ ಹೆಚ್ಚುವ ಜತೆಗೆ ಎರಡೂ ಕಂಪನಿಗಳ ವೆಚ್ಚವೂ ತಗ್ಗಲಿದೆ. ವೊಡಾಫೋನ್ ಐಡಿಯಾ ಸಿಇಒ ಅಭಿಜಿತ್ ಕಿಶೋರ್ ಮತ್ತು ಬಿಎಸ್ಎನ್ಎಲ್ ಸಿಎಂಡಿ ರಾಬರ್ಟ್ ಜೆ. ರವಿ ನಡುವೆ ನಡೆದ ಸಭೆಯಲ್ಲಿ ಈ ಕುರಿತು […]
ಮಲ್ಪೆಯಲ್ಲಿ ಸಮುದ್ರ ಪೂಜೆ; ಉತ್ತಮ ಮೀನುಗಾರಿಕೆಗೆ ಪ್ರಾರ್ಥನೆ

ಉಡುಪಿ: ಮಳೆಗಾಲದ ಎರಡು ತಿಂಗಳ ಮೀನುಗಾರಿಕೆ ರಜೆ ಪೂರ್ಣಗೊಂಡಿದ್ದು, ಪಶ್ಚಿಮ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಚುರುಕುಗೊಂಡಿದೆ. ಬೃಹತ್ ಗಾತ್ರದ ಯಾಂತ್ರಿಕೃತ ಮೀನುಗಾರಿಕಾ ಬೋಟುಗಳು ಕಡಲಿಗಿಳಿದಿರುವ ಹಿನ್ನೆಲೆಯಲ್ಲಿ ಉತ್ತಮ ಮೀನುಗಾರಿಕೆ ಹಾಗೂ ಮೀನುಗಾರರ ಸುರಕ್ಷತೆಗಾಗಿ ಮಲ್ಪೆಯಲ್ಲಿ ಶ್ರಾವಣ ಹುಣ್ಣಿಮೆಯಂದು ಸಮುದ್ರ ಪೂಜೆ ನೆರವೇರಿಸಲಾಯಿತು. ಮಲ್ಪೆಯ ವಡಭಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೀನುಗಾರ ಮುಖಂಡರು ಹಾಗೂ ಮೀನುಗಾರರು ಮೆರವಣಿಗೆಯಲ್ಲಿ ಸಮುದ್ರ ತೀರಕ್ಕೆ ತೆರಳಿದರು. ಅಲ್ಲಿ ಸಮುದ್ರರಾಜನಿಗೆ ಆರತಿ ಬೆಳಗಿಸಿ, ಉತ್ತಮ ಮೀನುಗಾರಿಕೆ ಹಾಗೂ ಯಾವುದೇ ಅನಾಹುತ […]