ಪ.ಜಾತಿ/ಪ.ಪಂಗಡದ ಜಿಲ್ಲಾ ಮಟ್ಟದ ಜಾಗೃತ ಸಮಿತಿ: ಅರ್ಜಿ ಆಹ್ವಾನ

ಉಡುಪಿ: ಸರ್ಕಾರದ ಸುತ್ತೋಲೆಯಂತೆ ಪಿಒವಿ ಕಾಯ್ದೆಯ ಅನುಷ್ಠಾನ, ಕಾಯ್ದೆಯಡಿ ನೋಂದಾಯಿಸಲಾದ ಪ್ರಕರಣಗಳ ವಿಚಾರಣೆ, ದೌರ್ಜನ್ಯ ಪ್ರಕರಣಗಳಲ್ಲಿ ನೀಡಬೇಕಾದ/ ನೀಡಲಾದ ಪರಿಹಾರ, ಸಂತ್ರಸ್ತರ ಪುನರ್ವಸತಿ ಇತ್ಯಾದಿಗಳ ಬಗ್ಗೆ ಕ್ರಮವಹಿಸಲು ಜಿಲ್ಲಾ ಮಟ್ಟದ ಜಾಗೃತಿ ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿoದ (ಪ.ಜಾತಿ-3, ಪ.ಪಂ-2, ಒಟ್ಟು-5) ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸೇರಿರದ ಇತರ ಪ್ರವರ್ಗಗಳಿಂದ 3 ಜನರನ್ನು 3 ವರ್ಷಗಳ ಅವಧಿಗೆ ನಾಮ ನಿರ್ದೇಶನ ಮಾಡಲು ಜಿಲ್ಲೆಯ ಆಸಕ್ತ ಸರ್ಕಾರಿ ನೌಕರರೇತರ ಪರಿಶಿಷ್ಟ […]
ಆ.14 ರಂದು ನೇರ ಸಂದರ್ಶನ

ಉಡುಪಿ: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್ ಪ್ರೈವೇಟ್ ಲಿ.ನಲ್ಲಿ ಆಗಸ್ಟ್ 14 ರಂದು ಬೆಳಗ್ಗೆ 10.30 ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ ಮತ್ತು ಡಿಪ್ಲೋಮಾ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತೀರ್ಣರಾದ ಆಭ್ಯರ್ಥಿಗಳು ತಮ್ಮ ಸ್ವ-ವಿವರವುಳ್ಳ ರೆಸ್ಯೂಮ್ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಗಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 8105618291, […]
ನವಿಮುಂಬೈಗೆ ಪುತ್ತಿಗೆ ಶ್ರೀಪಾದರ ವೈಭವದ ಚಾತುರ್ಮಾಸ್ಯ ಪುರಪ್ರವೇಶ

ಉಡುಪಿ: ಚಾತುರ್ಮಾಸ್ಯ ವ್ರತಾಚರಣೆಗಾಗಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಂಗಳವಾರ ನವಿಮುಂಬೈ ಮಹಾನಗರಕ್ಕೆ ಆಗಮಿಸಿದರು. ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶ್ರೀಪಾದರಿಗೆ ಭವ್ಯ ಸ್ವಾಗತ ನೀಡಲಾಯಿತು. ಗುರುವಾಯೂರಪ್ಪ ದೇವಾಲಯದಿಂದ ಆರಂಭಗೊಂಡ ಪುರಪ್ರವೇಶ ಮೆರವಣಿಗೆಯಲ್ಲಿ ವೇದಘೋಷ, ಭಜನೆ, ಯಕ್ಷಗಾನ, ನೃತ್ಯ, ಕೊಂಬು–ಕಹಳೆ, ನಾಗಸ್ವರ ಸೇರಿದಂತೆ ವಿವಿಧ ವಾದ್ಯಗೋಷ್ಠಿಗಳು ಮೆರುಗು ನೀಡಿದವು. ದೇವಾಲಯದ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಭಕ್ತರು ಶ್ರೀಪಾದರನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡರು. ತಮ್ಮ ಆರಾಧ್ಯಮೂರ್ತಿ ಶ್ರೀ ವಿಠಲ ದೇವರೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಶ್ರೀಪಾದರು, […]
ಸರ್ಕಾರೇತರ ವಸತಿ ನಿಲಯಗಳ ಶಾಲೆ/ಕಾಲೇಜುಗಳ ನೋಂದಣಿ: ಅರ್ಜಿ ಆಹ್ವಾನ

ಉಡುಪಿ: ಬಾಲ ನ್ಯಾಯ ಕಾಯ್ದೆಯನ್ವಯ ನೋಂದಣಿಯಾಗಿರುವ ಸಂಸ್ಥೆ/ವಸತಿ ನಿಲಯಗಳನ್ನು ಹೊರತುಪಡಿಸಿ 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರೇತರ ಸಂಸ್ಥೆಗಳು, ನಾಗರಿಕ ಸಮಾಜ ಸಂಸ್ಥೆಗಳು, ಟ್ರಸ್ಟ್, ಧಾರ್ಮಿಕ, ಖಾಸಗಿ, ವೈಯಕ್ತಿಕವಾಗಿ ನಡೆಸಲ್ಪಡುವ ಯಾವುದೇ ಔಪಚಾರಿಕ, ಅನೌಪಚಾರಿಕ ಶೈಕ್ಷಣಿಕ ವಸತಿ ನಿಲಯ, ವಸತಿ ಶಾಲೆ, ಕಾಲೇಜುಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗಿದ್ದು, ಅರ್ಜಿ ನಮೂನೆಗಳನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಇವರಿಂದ ಪಡೆದು ಸೆಪ್ಟೆಂಬರ್ 4 ರ ಒಳಗಾಗಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಅರ್ಜಿ […]
AI ಬಳಸಿ ರೀಲ್ಸ್, ವಿಡಿಯೋ ಕಟೆಂಟ್ ಗಳನ್ನು ಇನ್ನಷ್ಟು ರೀಚ್ ಮಾಡೋದು ಹೇಗೆ? ಮಂಗಳೂರಿನಲ್ಲಿ ಆ.15 ರಂದು ‘AI Reels Making’ ಕಾರ್ಯಾಗಾರದಲ್ಲಿ ಭಾಗವಹಿಸಿ ಎಲ್ಲವನ್ನೂ ಕಲೀರಿ

ಮಣಿಪಾಲ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಆಕರ್ಷಕ ಹಾಗೂ ವೈರಲ್ ರೀಲ್ಸ್‌ಗಳನ್ನು ರಚಿಸುವ ಕುರಿತು ಒಂದು ದಿನದ ‘AI Reels Making’ ಹ್ಯಾಂಡ್ಸ್‌ಆನ್ ವರ್ಕ್‌ಶಾಪ್ ಅನ್ನು ಕೌಶಲ್ ಮಣಿಪಾಲ ಹಾಗೂ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಆಯೋಜಿಸಲಾಗಿದೆ. ಆಗಸ್ಟ್ 15ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಾರ್ಯಾಗಾರ ನಡೆಯಲಿದ್ದು, ಭಾಗವಹಿಸುವವರಿಗೆ AI ಆಧಾರಿತ ವಿವಿಧ ಟೂಲ್ಸ್‌ಗಳ ಬಳಕೆ, ರೀಲ್ಸ್ ರಚನೆ, ಎಡಿಟಿಂಗ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್‌ಗಳನ್ನು ಪರಿಣಾಮಕಾರಿಯಾಗಿ ಪ್ರಕಟಿಸುವ ಕುರಿತು ಪ್ರಾಯೋಗಿಕ […]