ಉಡುಪಿ: ಸರ್ಕಾರದ ಸುತ್ತೋಲೆಯಂತೆ ಪಿಒವಿ ಕಾಯ್ದೆಯ ಅನುಷ್ಠಾನ, ಕಾಯ್ದೆಯಡಿ ನೋಂದಾಯಿಸಲಾದ ಪ್ರಕರಣಗಳ ವಿಚಾರಣೆ, ದೌರ್ಜನ್ಯ ಪ್ರಕರಣಗಳಲ್ಲಿ ನೀಡಬೇಕಾದ/ ನೀಡಲಾದ ಪರಿಹಾರ, ಸಂತ್ರಸ್ತರ ಪುನರ್ವಸತಿ ಇತ್ಯಾದಿಗಳ ಬಗ್ಗೆ ಕ್ರಮವಹಿಸಲು ಜಿಲ್ಲಾ ಮಟ್ಟದ ಜಾಗೃತಿ ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿoದ (ಪ.ಜಾತಿ-3, ಪ.ಪಂ-2, ಒಟ್ಟು-5) ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸೇರಿರದ ಇತರ ಪ್ರವರ್ಗಗಳಿಂದ 3 ಜನರನ್ನು 3 ವರ್ಷಗಳ ಅವಧಿಗೆ ನಾಮ ನಿರ್ದೇಶನ ಮಾಡಲು ಜಿಲ್ಲೆಯ ಆಸಕ್ತ ಸರ್ಕಾರಿ ನೌಕರರೇತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರದ ವ್ಯಕ್ತಿಗಳು ಸಮಿತಿ ಸಭೆಯ ಸದಸ್ಯರಾಗಬಯಸುವವರು ತಮ್ಮ ಸ್ವವಿವರವುಳ್ಳ ಅರ್ಜಿಯನ್ನು ಜಾತಿ ಪತ್ರ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದ್ದಲ್ಲಿ ಅಂತಹ ವಿವರಗಳನ್ನೊಳಗೊಂಡ ದಾಖಲಾತಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಸ್ಟ್ 21 ರೊಳಗಾಗಿ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, 2ನೇ ಮಹಡಿ, ಬಿ ಬ್ಲಾಕ್ ಮಣಿಪಾಲ ಅನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.















