AI ಬಳಸಿ ರೀಲ್ಸ್, ವಿಡಿಯೋ ಕಟೆಂಟ್ ಗಳನ್ನು ಇನ್ನಷ್ಟು ರೀಚ್ ಮಾಡೋದು ಹೇಗೆ?  ಮಂಗಳೂರಿನಲ್ಲಿ ಆ.15 ರಂದು ‘AI Reels Making’ ಕಾರ್ಯಾಗಾರದಲ್ಲಿ ಭಾಗವಹಿಸಿ ಎಲ್ಲವನ್ನೂ ಕಲೀರಿ

ಮಣಿಪಾಲ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಆಕರ್ಷಕ ಹಾಗೂ ವೈರಲ್ ರೀಲ್ಸ್‌ಗಳನ್ನು ರಚಿಸುವ ಕುರಿತು ಒಂದು ದಿನದ ‘AI Reels Making’ ಹ್ಯಾಂಡ್ಸ್‌ಆನ್ ವರ್ಕ್‌ಶಾಪ್ ಅನ್ನು ಕೌಶಲ್ ಮಣಿಪಾಲ ಹಾಗೂ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ಆಯೋಜಿಸಲಾಗಿದೆ.

ಆಗಸ್ಟ್ 15ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಾರ್ಯಾಗಾರ ನಡೆಯಲಿದ್ದು, ಭಾಗವಹಿಸುವವರಿಗೆ AI ಆಧಾರಿತ ವಿವಿಧ ಟೂಲ್ಸ್‌ಗಳ ಬಳಕೆ, ರೀಲ್ಸ್ ರಚನೆ, ಎಡಿಟಿಂಗ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್‌ಗಳನ್ನು ಪರಿಣಾಮಕಾರಿಯಾಗಿ ಪ್ರಕಟಿಸುವ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಕಾರ್ಯಾಗಾರದಲ್ಲಿ AI Tools Mastery, Reels Creation Step-by-Step, Trending Effects & Editing, AI ಬಳಸಿ Content Ideas ಹಾಗೂ ಕಂಟೆಂಟ್‌ಗಳನ್ನು ಪ್ರಕಟಿಸಿ ರೀಚ್ ಹೆಚ್ಚಿಸುವ ತಂತ್ರಗಳ ಕುರಿತು ತರಬೇತಿ ನೀಡಲಾಗುತ್ತದೆ.

ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಇ-ಸರ್ಟಿಫಿಕೇಟ್ ಹಾಗೂ ರಿಫ್ರೆಶ್‌ಮೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 50 ಸೀಟುಗಳಿಗೆ ಮಾತ್ರ ಅವಕಾಶವಿದ್ದು, ನೋಂದಣಿ ಶುಲ್ಕ ₹999 ನಿಗದಿಪಡಿಸಲಾಗಿದೆ.

AI ತಂತ್ರಜ್ಞಾನ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಗುಣಮಟ್ಟದ ವಿಡಿಯೋ ಕಂಟೆಂಟ್ ಸಿದ್ಧಪಡಿಸಲು ಆಸಕ್ತಿ ಹೊಂದಿರುವವರಿಗೆ ಈ ಕಾರ್ಯಾಗಾರ ಉಪಯುಕ್ತವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ www.kaushalmanipal.com ಸಂಪರ್ಕಿಸಬಹುದು. ನೋಂದಣಿ ಹಾಗೂ ಇತರ ವಿವರಗಳಿಗಾಗಿ 8296615560 / 7975078498 ಸಂಖ್ಯೆಗೆ ಕರೆ ಮಾಡಬಹುದು.