ಆಗಸ್ಟ್ 10ರಿಂದ 15ರವರೆಗೆ ಮುನಿಯಲ್ ಆಯುರ್ವೇದ ಆಸ್ಪತ್ರೆಯಲ್ಲಿ ‘ಕುತ್ತಿಗೆ ನೋವಿಗೆ ಆಯುರ್ವೇದ ಉಚಿತ ಚಿಕಿತ್ಸಾ ತಪಾಸಣೆ ಮತ್ತು ಚಿಕಿತ್ಸಾ’ ಶಿಬಿರ

ಮಣಿಪಾಲ: ಕುತ್ತಿಗೆ ನೋವು, ಕುತ್ತಿಗೆಯ ಬಿಗಿತ ಹಾಗೂ ಕುತ್ತಿಗೆಯ ಚಲನೆಗೆ ತೊಂದರೆ ಅನುಭವಿಸುತ್ತಿರುವವರಿಗಾಗಿ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದ ವತಿಯಿಂದ ಆಗಸ್ಟ್10ರಿಂದ 15ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಲ್ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಉಚಿತ ತಪಾಸಣೆ ಮತ್ತು ಸಲಹಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಕುತ್ತಿಗೆ ನೋವು ಹಾಗೂ ಸರ್ವೈಕಲ್ ಸ್ಪಾಂಡಿಲೋಸಿಸ್ (Cervical Spondylosis)) ಸಮಸ್ಯೆಗಳಿಗೆ ವಿಶೇಷ ಆಯುರ್ವೇದ ತಪಾಸಣೆ, ವೈದ್ಯಕೀಯ […]

ಪಬ್‌ಗಳ ಮೇಲೆ ಆಹಾರ ಇಲಾಖೆ ದಾಳಿ: ಫಂಗಸ್ ಹಿಡಿದ ಮಶ್ರೂಮ್‌, ಜಿರಳೆ ಪತ್ತೆ, ರಾಜ್ಯದ ಎಲ್ಲಾ ಹೊಟೇಲ್ ಗಳಿಗೂ ಎಚ್ಚರಿಕೆ!

ಬೆಂಗಳೂರು : ರಾಜಧಾನಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಹಾಗೂ ನೈಟ್‌ಲೈಫ್ ತಾಣಗಳಾದ ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನ ಪಬ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದೆ. ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 10 ತಂಡಗಳು ವಿವಿಧ ಹೋಟೆಲ್‌ಗಳು ಮತ್ತು ಪಬ್‌ಗಳಲ್ಲಿ ಆಹಾರ ಗುಣಮಟ್ಟ ಹಾಗೂ ಅಡುಗೆಮನೆಯ ಸ್ವಚ್ಛತೆಯನ್ನು ಪರಿಶೀಲಿಸಿವೆ. ರಾಜ್ಯಾದ್ಯಂತ ಆಹಾರ ಇಲಾಖೆ ಹೊಟೇಲ್ ಗಳೀಗೆ ಭೇಟಿ ನೀಡಲಿದೆ. ಯುಬಿ ಸಿಟಿಯ ಸ್ಕೈ ಲಾಂಜ್ ಬಳಿಕ ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ನ […]

ದೇಶದಲ್ಲೇ ಟ್ರಾಫಿಕ್ ಸಮಸ್ಯೆಯಲ್ಲಿ ಬೆಂಗಳೂರು ಫಸ್ಟ್!

ನವದೆಹಲಿ/ಬೆಂಗಳೂರು: ಟ್ರಾಫಿಕ್ ಜಾಮ್‌ಗೆ ಕುಖ್ಯಾತಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಮತ್ತೊಮ್ಮೆ ಸಂಚಾರ ದಟ್ಟಣೆ ವಿಚಾರವಾಗಿ ಸುದ್ದಿಯಾಗಿದೆ. ದೇಶದಲ್ಲೇ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂಬ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ನ್ಯಾವಿಗೇಷನ್ ಟೆಕ್ನಾಲಜಿ ಕಂಪನಿಯಾದ ಟಾಮ್‌ಟಾಮ್ ಪ್ರಕಟಿಸಿರುವ 2025ರ ಟ್ರಾಫಿಕ್ ಇಂಡೆಕ್ಸ್‌ನಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆಯ ಕುರಿತು ಆಘಾತಕಾರಿ ಅಂಶಗಳು ಬಹಿರಂಗವಾಗಿವೆ. ವರದಿ ಪ್ರಕಾರ, ಬೆಂಗಳೂರಿನಲ್ಲಿ ಕೇವಲ 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ […]

ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನೆ: ವೃಂದಾವನಕ್ಕೆ ವಿಶೇಷ ಪೂಜೆ

ಉಡುಪಿ: ಆಷಾಢ ಕೃಷ್ಣ ಪಕ್ಷದ ದ್ವಾದಶಿಯಂದು ಶ್ರೀಕೃಷ್ಣ ಮಠದಲ್ಲಿ ಶ್ರೀ ಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದರ ಆರಾಧನೆ ಭಕ್ತಿಪೂರ್ವಕವಾಗಿ ನಡೆಯಿತು. ಆರಾಧನೆಯ ಪ್ರಯುಕ್ತ ಕೃಷ್ಣ ಮಠದ ಸಮುಚ್ಚಯದಲ್ಲಿರುವ ಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದರ ವೃಂದಾವನಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗೋ ಪೂಜೆಯನ್ನು ನೆರವೇರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಆರಾಧನಾ ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ಮಠದ ಸಿಬ್ಬಂದಿ ಉಪಸ್ಥಿತರಿದ್ದರು.

ನೀಟ್ 2027 ಪರೀಕ್ಷೆಗೆ ತರಬೇತಿ ಪಡೆಯಿರಿ: ಉಡುಪಿಯ ಆಕಾಶ್ ಇನ್ಸ್ಟಿಟ್ಯೂಟ್ ನಲ್ಲಿ ಲಭ್ಯವಿದೆ ದೀರ್ಘಾವಧಿ ಬ್ಯಾಚ್,ಪ್ರವೇಶ ಶುರು

ಉಡುಪಿ: ವೈದ್ಯರಾಗುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಆಕಾಶ್ ಇನ್ಸ್ಟಿಟ್ಯೂಟ್, ಉಡುಪಿ ಶಾಖೆ (ಕುಂಜಿಬೆಟ್ಟು) ಸುವರ್ಣಾವಕಾಶ ನೀಡಿದೆ. NEET 2027 ಲಾಂಗ್ ಟರ್ಮ್ ಬ್ಯಾಚ್ಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಮಗ್ರ ತರಬೇತಿ ನೀಡುವ ಉದ್ದೇಶದಿಂದ ಅನುಭವಿ ಬೋಧಕ ವರ್ಗ, ವೈಯಕ್ತಿಕ ಮಾರ್ಗದರ್ಶನ ಹಾಗೂ ಫಲಿತಾಂಶ ಕೇಂದ್ರೀಕೃತ ಕಲಿಕಾ ವಿಧಾನವನ್ನು ಸಂಸ್ಥೆ ಒದಗಿಸುತ್ತಿದೆ. ವಿದ್ಯಾರ್ಥಿಗಳಿಗೆ ಒನ್-ಟು-ಒನ್ ಫ್ಯಾಕಲ್ಟಿ ಗೈಡನ್ಸ್, ಸಮಗ್ರ ಅಧ್ಯಯನ ಸಾಮಗ್ರಿ, ನಿಯಮಿತ ಪರೀಕ್ಷೆಗಳು ಹಾಗೂ ವಿಶೇಷ ಮಾರ್ಗದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.ಇದಲ್ಲದೆ, […]