ಉಡುಪಿ: ಸಾಯಿರಾಜ್ ಸೊಸೈಟಿಯ ಸಿಇಒ ಆತ್ಮಹತ್ಯೆ

ಉಡುಪಿ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಅಂಬಲಪಾಡಿ ಸಮೀಪದ ಬಿಆರ್ ಮೆಡೋಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.ಮೃತರನ್ನು ಉಡುಪಿಯ ಕಲ್ಪನಾ ಟಾಕೀಸ್ ಬಳಿಯ ಸಾಯಿರಾಜ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಶೆಟ್ಟಿ ( 44) ಎಂದು ಗುರುತಿಸಲಾಗಿದೆ. ಅವರು ಕಳೆದ ನಾಲ್ಕು ವರ್ಷಗಳಿಂದ ಸೊಸೈಟಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತು ಮಾಹಿತಿ ಪಡೆದ ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ […]
ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಗೆ

ಉಡುಪಿ: ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಉಡುಪಿ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಸೋಮವಾರ ಆದೇಶಿಸಿದೆ. ಉತ್ತರಾಖಂಡದ ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ಹಾಗೂ ಬಿಹಾರದ ಜಿಯಾವುಲ್ಲಾ ಅಲಿಯಾಸ್ ದೀಪಕ್ ನ್ಯಾಯಾಂಗ ಬಂಧನದಲ್ಲಿದ್ದರು. ಪ್ರಕರಣದ ತನಿಖಾಧಿಕಾರಿ ಹಾಗೂ ಕಾಪು ಪೊಲೀಸ್ ನಿರೀಕ್ಷಕ ಅಝ್ಮತ್ ಅಲಿ ನೇತೃತ್ವದಲ್ಲಿ ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ […]
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಆ ದಿನ ದರ್ಶನ್ ಮಾಡಿದ್ದೇನು? ನ್ಯಾಯಾಲಯದಲ್ಲಿ ದರ್ಶನ್ ಇನ್ನೊಂದು ಮುಖ ಬಯಲು ಮಾಡಿದ ಪ್ರದೋಷ್!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್ ಸಲ್ಲಿಸಿರುವ 11 ಪುಟಗಳ ಮಾಫಿ ಸಾಕ್ಷಿ (ಕ್ಷಮಾದಾನ) ಅರ್ಜಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಪ್ರದೋಷ್, ದರ್ಶನ್ ಪರಿಚಯವಾದ ದಿನದಿಂದ ಜೈಲು ಪಾಲಾಗುವವರೆಗಿನ ಘಟನೆಗಳನ್ನು ನ್ಯಾಯಾಲಯದ ಮುಂದೆ ವಿವರಿಸಿದ್ದಾನೆ. ಸಿಸಿಎಚ್-59 ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ಹಲವು ಪ್ರಮುಖ ಸಂಗತಿಗಳನ್ನು ಪ್ರದೋಷ್ ಉಲ್ಲೇಖಿಸಿದ್ದಾನೆ. 2003ರಿಂದ ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಸಂದರ್ಭ ದರ್ಶನ್ ಪರಿಚಯವಾಗಿತ್ತು ಎಂದು ಆತ […]
ಇನ್ನು LPG ಸಿಲಿಂಡರ್‌ಗಾಗಿ ದಿನಗಟ್ಟಲೆ ಕಾಯಬೇಕಿಲ್ಲ,3- 4 ಗಂಟೆಗಳೊಳಗೆ ಡೆಲಿವರಿಯಾಗುತ್ತೆ ಈ ಸಿಲಿಂಡರ್, ಇಂಡಿಯನ್ ಆಯಿಲ್‌ನಿಂದ ಹೊಸ ಸೇವೆ!

LPG ಸಿಲಿಂಡರ್ ಬುಕ್ ಮಾಡಿದ ಬಳಿಕ ಡೆಲಿವರಿಗಾಗಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಕೆಲ ಗ್ರಾಹಕರಿಗೆ ಎದುರಾಗುತ್ತದೆ. ಆದರೆ ಇದೀಗ ಅಂತಹ ಗ್ರಾಹಕರಿಗೆ ಉಪಯುಕ್ತವಾಗುವ ಹೊಸ ಸೇವೆಯನ್ನು ಇಂಡಿಯನ್ ಆಯಿಲ್ ಆರಂಭಿಸಿದೆ. ಇದರ ಮೂಲಕ ತುರ್ತಾಗಿ LPG ಅಗತ್ಯವಿರುವ ಗ್ರಾಹಕರು ಕೆಲವೇ ಗಂಟೆಗಳಲ್ಲಿ ಸಿಲಿಂಡರ್ ಪಡೆಯಬಹುದಾಗಿದೆ. ಇಂಡಿಯನ್ ಆಯಿಲ್ ತನ್ನ ‘ಇಂಡೇನ್ ಎಕ್ಸ್‌ಟ್ರಾ ಲೈಟ್ ನೌ’ ಸೇವೆಯನ್ನು ಪರಿಚಯಿಸಿದ್ದು, ಇದರಡಿ ಬುಕಿಂಗ್ ಮಾಡಿದ ಬಳಿಕ 3ರಿಂದ 4 ಗಂಟೆಗಳೊಳಗೆ LPG ಸಿಲಿಂಡರ್ ಅನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ […]
ಮಣಿಪಾಲ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್: ಡಿಪ್ಲೋಮಾ ಇನ್ ಮಾಂಟೆಸ್ಸರಿ ಚೆಲ್ಡ್ ಎಜ್ಯುಕೇಶನ್ ಪ್ರಮಾಣ ಪತ್ರ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

ಮಣಿಪಾಲ: ಮಣಿಪಾಲದ ಶ್ರೀ ಶಾರದಾ ಶಿಕ್ಷಕ ತರಬೇತಿ ಸಂಸ್ಥೆಯ ‘ಘಟಿಕೋತ್ಸವ 2025-26’ ಸಮಾರಂಭದಲ್ಲಿ ಶ್ರೀಮತಿ ಸುನಂದಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು. ಮಣಿಪಾಲದ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮೊಂಟೆಸ್ಸೋರಿ/ನರ್ಸರಿ ಟೀಚರ್ ಟ್ರೈನಿಂಗ್ (ಆ.ಒ.ಇಜ.) ಶಿಕ್ಷಕಿಯರ ತರಬೇತಿ ಪಡೆದ 2025-26 ಸಾಲಿನ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪ್ರಮಾಣ ಪಾತ್ರ ವಿತರಣೆ ಮತ್ತು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವು ಮಣಿಪಾಲದ ಕ್ರಿಸ್ಟಲ್ ಬಿಜ್ ಹಬ್ ನಲ್ಲಿ ಆ.8ರಂದು, ಶ್ರೀಮತಿ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ […]