‘ಪತಿಯ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು’: ಪ್ರಿಯಾ ಡೇವಿಡ್

ಉಡುಪಿ: ‘ಪತಿಯ ಸಾವು ನಮಗೆ ಆಕಸ್ಮಿಕ ಆಘಾತವಾಗಿದೆ. ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಅವರು ನಮ್ಮೊಂದಿಗೆ ಹೇಳಿಕೊಂಡಿರಲಿಲ್ಲ’ ಎಂದು ಹತ್ಯೆಗೀಡಾದ ಡೇವಿಡ್ ಡಿಸೋಜ ಅವರ ಪತ್ನಿ ಪ್ರಿಯಾ ಡೇವಿಡ್ ಹೇಳಿದರು. ‘ಪ್ರತಿದಿನದಂತೆ ಶುಕ್ರವಾರ ಊಟ ಮುಗಿಸಿ ಕಚೇರಿಗೆ ತೆರಳಿದ್ದರು. ಗುಂಡಿನ ದಾಳಿ ನಡೆದಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಪತಿ ಕುಟುಂಬಕ್ಕೆ ಯಾವುದೇ ಕೊರತೆ ಮಾಡಿರಲಿಲ್ಲ’ ಎಂದು ಅವರು ಹೇಳಿದರು. ‘ಪತಿಯ ಮೇಲೆ ಗುಂಡು ಹಾರಿಸಿ ರಕ್ತ ಚೆಲ್ಲಿದವರಿಗೂ […]

SSLC, PUC ಉತ್ತರ ಪತ್ರಿಕೆಗಳಿಗೆ ಆನ್‌ಲೈನ್ ಮೌಲ್ಯಮಾಪನ? ಶಿಕ್ಷಣ ಇಲಾಖೆ ಹೊಸ ಪ್ರಯೋಗಕ್ಕೆ ಸಜ್ಜು

ಬೆಂಗಳೂರು : ರಾಜ್ಯ ಶಿಕ್ಷಣ ಇಲಾಖೆ ಪರೀಕ್ಷಾ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಸಾಂಪ್ರದಾಯಿಕವಾಗಿ ನಡೆಯುತ್ತಿರುವ ಉತ್ತರ ಪತ್ರಿಕೆಗಳ ನೇರ ಮೌಲ್ಯಮಾಪನದ ಬದಲಿಗೆ, ಮುಂದಿನ ದಿನಗಳಲ್ಲಿ SSLC ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಆನ್‌ಲೈನ್ ಮೂಲಕ ಮೌಲ್ಯಮಾಪನ ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಸಂಖ್ಯೆಯ ಉತ್ತರ ಪತ್ರಿಕೆಗಳಿರುವುದರಿಂದ ಮೌಲ್ಯಮಾಪನ ಪ್ರಕ್ರಿಯೆಯನ್ನು ವೇಗಗೊಳಿಸಿ, ಶೀಘ್ರವಾಗಿ ಫಲಿತಾಂಶ ಪ್ರಕಟಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಯೋಜನೆಗೆ ಮುಂದಾಗಿದೆ ಎನ್ನಲಾಗಿದೆ. ಆದರೆ ಯೋಜನೆ ಆರಂಭಕ್ಕೂ […]

ಮಂಗಳೂರು ಏರ್‌ಪೋರ್ಟ್‌ನಲ್ಲಿ ಕಂಬಳದ ವೈಭವ: ತುಳುನಾಡಿನ ಜಾನಪದ ಕ್ರೀಡೆಯ ಮನಮೋಹಕ ಕಲಾಕೃತಿ ನೋಡಿ ಪ್ರಯಾಣಿಕರು ಖುಷ್!

ಮಂಗಳೂರು: ಕರಾವಳಿಯ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಜಾನಪದ ಸೊಗಡನ್ನು ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ವಿನೂತನ ಹೆಜ್ಜೆ ಇಟ್ಟಿದೆ. ತುಳುನಾಡಿನ ಹೆಮ್ಮೆಯ ವಿಶ್ವಪ್ರಸಿದ್ಧ ಜಾನಪದ ಕ್ರೀಡೆ ಕಂಬಳದ ವೈಭವವನ್ನು ಸಾರುವ ಬೃಹತ್ ಕಲಾಕೃತಿಯನ್ನು ವಿಮಾನ ನಿಲ್ದಾಣದ ಆಗಮನ ವಿಭಾಗದಲ್ಲಿ ಅಳವಡಿಸಲಾಗಿದ್ದು, ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಕಂಬಳದ ರೋಮಾಂಚಕಾರಿ ದೃಶ್ಯ ಅನಾವರಣ ಈಗಾಗಲೇ ದೇಶೀಯ ವಿಮಾನಗಳ ಬ್ಯಾಗೇಜ್ ಬೆಲ್ಟ್ ಬಳಿ ಮೊದಲ ಕಂಬಳ ಕಲಾಕೃತಿಯನ್ನು ಸ್ಥಾಪಿಸಲಾಗಿದ್ದು, ಅದು ಪ್ರಯಾಣಿಕರಿಂದ […]

ಎಚ್ಚರ, ದೇಶದಲ್ಲಿ ಹೆಚ್ಚಾಗುತ್ತಿದೆ ನಕಲಿ ನೋಟಿನ ಜಾಲ,₹10, ₹20, ₹50 ರ ನೋಟುಗಳನ್ನೂ ಪರಿಶೀಲಿಸಿ ವ್ಯವಹಾರ ಮಾಡಿ!

ನವದೆಹಲಿ: ನಿಮ್ಮ ಕೈಗೆ ₹10, ₹20 ಅಥವಾ ₹50 ಮುಖಬೆಲೆಯ ನೋಟು ಬಂದಾಗ ಇನ್ನು ಮುಂದೆ ಸ್ವಲ್ಪ ಎಚ್ಚರಿಕೆ ವಹಿಸುವುದು ಅಗತ್ಯ. ದೇಶದಲ್ಲಿ ನಕಲಿ ನೋಟು ಚಲಾವಣೆಯ ಜಾಲ ತನ್ನ ಕಾರ್ಯತಂತ್ರ ಬದಲಿಸಿಕೊಂಡಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ಕಲೆಹಾಕಿವೆ ಎಂದು ವರದಿಯಾಗಿದೆ. ಈ ಹಿಂದೆ ನಕಲಿ ನೋಟು ದಂಧೆಕೋರರು ಹೆಚ್ಚಾಗಿ ₹200 ಮತ್ತು ₹500 ಮುಖಬೆಲೆಯ ನೋಟುಗಳನ್ನು ಗುರಿಯಾಗಿಸಿಕೊಂಡಿದ್ದರು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ₹500ರ ಖೋಟಾ ನೋಟುಗಳ ಚಲಾವಣೆ ಕಡಿಮೆಯಾಗಿದ್ದು, ಇದೀಗ ₹10, ₹20 ಮತ್ತು […]