ಶಂಕರಪುರದಲ್ಲಿ ಬಾವಿಗೆ ಬಿದ್ದು ಐದು ಕಾಡುಹಂದಿಗಳ ಸಾವು

ಉಡುಪಿ: ಕಟಪಾಡಿ–ಶಿರ್ವ ಮುಖ್ಯ ರಸ್ತೆಯ ಶಂಕರಪುರ ಸಾಲ್ಮರ ಬಳಿ ಪೊದೆಗಳಿಂದ ಆವೃತವಾಗಿದ್ದ ಬಾವಿಗೆ ಬಿದ್ದು ಐದು ಕಾಡುಹಂದಿಗಳು ಮೃತಪಟ್ಟ ಘಟನೆ ನಡೆದಿದೆ. ರಸ್ತೆ ಬದಿಯ ವಾಸವಿಲ್ಲದ ಮನೆಯ ಆವರಣ ಗೋಡೆಗೆ ಹೊಂದಿಕೊಂಡಿರುವ ಸಣ್ಣ ಬಾವಿಗೆ ನಾಲ್ಕೈದು ದಿನಗಳ ಹಿಂದೆ ಕಾಡುಹಂದಿಗಳ ಹಿಂಡು ಬಿದ್ದಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ. ಮನೆಯ ಎದುರು ರಸ್ತೆಯ ಇನ್ನೊಂದು ಬದಿಯಲ್ಲಿ ಸೋದೆ ಮಠಕ್ಕೆ ಸೇರಿದ ಖಾಸಗಿ ಅರಣ್ಯ ಪ್ರದೇಶವಿದ್ದು, ರಾತ್ರಿ ವೇಳೆ ಆಹಾರ ಅರಸಿ ಬಂದ ಹಂದಿಗಳು ಬಾವಿಗೆ ಬಿದ್ದಿರುವ ಸಾಧ್ಯತೆ […]
ಆಳ್ವಾಸ್ ಪ್ರಗತಿ-2026: 2,394 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ಹಾಗೂ 5,935 ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ

ಮೂಡುಬಿದಿರೆ: ಭಾರತದ ಬೃಹತ್ ಉದ್ಯೋಗ ಮೇಳವಾಗಿರುವ ಆಳ್ವಾಸ್ ಪ್ರಗತಿ-2026ರ 16ನೇ ಆವೃತ್ತಿಯು ಶನಿವಾರ ವಿದ್ಯಾಗಿರಿ ಆವರಣದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು. ಭಾಗವಹಿಸಿದ 326 ಕಂಪೆನಿಗಳ ಪೈಕಿ 285 ಕಂಪೆನಿಗಳು 2,394 ಅಭ್ಯರ್ಥಿಗಳನ್ನು ಸ್ಥಳದಲ್ಲೇ ಉದ್ಯೋಗಾವಕಾಶ ನೀಡಿದರೆ, 5,935 ಅಭ್ಯರ್ಥಿಗಳನ್ನು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್ಲಿಸ್ಟ್ ಮಾಡಿವೆ. ಮೊದಲ ದಿನ 326 ಕಂಪೆನಿಗಳು ಹಾಗೂ ಎರಡನೇ ದಿನ 6 ಕಂಪೆನಿಗಳು ಸೇರಿದಂತೆ ಒಟ್ಟು 332 ಕಂಪೆನಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ದೇಶದ ವಿವಿಧ ಭಾಗಗಳಿಂದ ಒಟ್ಟು 15,539 ಉದ್ಯೋಗಾಕಾಂಕ್ಷಿಗಳು […]
ಕರಾವಳಿ, ಮಲೆನಾಡಿನಲ್ಲಿ ಇನ್ನು ಎರಡು ದಿನ ಭಾರೀ ಮಳೆಯ ಮುನ್ಸೂಚನೆ, 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಮಳೆ ಚುರುಕುಗೊಂಡಿದ್ದು, ಕಳೆದ ಕೆಲ ದಿನಗಳಿಂದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಈ ನಡುವೆ ರಾಜ್ಯ ಹವಾಮಾನ ಇಲಾಖೆ ಮತ್ತೆ ಮಳೆ ಮುನ್ಸೂಚನೆ ನೀಡಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕಂಗಾಲಾಗಿದ್ದ ರೈತರಿಗೆ ಇದೀಗ ವರುಣನ ಆಗಮನ ಕೊಂಚ ನೆಮ್ಮದಿ ತಂದಿದೆ. ರಾಜ್ಯದ ಹಲವು ಜಲಾಶಯಗಳಿಗೆ ಒಳಹರಿವು ಹೆಚ್ಚಾಗುತ್ತಿದ್ದು, ರೈತರಲ್ಲಿ ಆಶಾಭಾವನೆ ಮೂಡಿದೆ. 6 […]
ಉಡುಪಿ: ಯುಪಿಸಿಎಲ್ ಗುತ್ತಿಗೆ ಕಾಮಗಾರಿ ವಿಚಾರಕ್ಕೆ ಡೇವಿಡ್ ಡಿಸೋಜ ಹತ್ಯೆ- ಎಸ್ಪಿ ಹರಿರಾಮ್ ಶಂಕರ್

ಉಡುಪಿ: ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಹತ್ಯೆ ಯುಪಿಸಿಎಲ್ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದ ಆರ್ಥಿಕ ವ್ಯವಹಾರದ ವೈಮನಸ್ಸಿನಿಂದ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಮ್ ಶಂಕರ್ ತಿಳಿಸಿದರು. ಆರೋಪಿಗಳ ಬಂಧನದ ಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೇವಿಡ್ ಅವರನ್ನು ಹತ್ಯೆಗೈಯಲು ಉತ್ತರ ಭಾರತದ ವ್ಯಕ್ತಿಯೊಬ್ಬರು ಸುಪಾರಿ ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಸುಪಾರಿ ನೀಡಿದವರ ಪತ್ತೆಗಾಗಿ ಈಗಾಗಲೇ ವಿಶೇಷ ತಂಡವನ್ನು ಹೊರರಾಜ್ಯಕ್ಕೆ ಕಳುಹಿಸಲಾಗಿದೆ ಎಂದರು. ಹತ್ಯೆ ಪ್ರಕರಣದ […]
ಫಾರ್ಚ್ಯೂನ್ ಕಾಲೇಜು ವತಿಯಿಂದ ಆ.12ರಂದು ಬ್ರಹ್ಮಾವರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಬ್ರಹ್ಮಾವರ: ಬ್ರಹ್ಮಾವರದ Fortune College of Paramedical Sciences ವತಿಯಿಂದ ಆ.12ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕುಂದಾಪುರದ Indian Red Cross Society Blood Centre, ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಮೂಡಹಾಡು ಪಾಂಡೇಶ್ವರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಮಾಬುಕಳದ ಸಾಮ್ರಾಜ್ಞಿ ಆಟೋ ಚಾಲಕರ ಸಂಘದ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ಕಾಲೇಜಿನ ಆಡಿಟೋರಿಯಂನಲ್ಲಿ ಬೆಳಗ್ಗೆ 9 ಗಂಟೆಯಿಂದ ಶಿಬಿರ ಆರಂಭವಾಗಲಿದೆ. ಬಾಂಧವ್ಯ ಫೌಂಡೇಶನ್‌ನ ಸಂಸ್ಥಾಪಕ ಹಾಗೂ ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಹಸಿರು ಪ್ರಶಸ್ತಿ ಪುರಸ್ಕೃತ […]