ಬಿಗ್ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್: ಲಾಲ್‌ಬಾಗ್‌ನಲ್ಲಿ ‘ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್ ಝೋನ್’; ವಿಜೇತರಿಗೆ ಕಿಚ್ಚ ಸುದೀಪ್ ಜತೆ ವೀಕೆಂಡ್ ಎಪಿಸೋಡ್ ವೀಕ್ಷಣೆಗೆ ಅವಕಾಶ

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಆರಂಭಕ್ಕೂ ಮುನ್ನವೇ ಕಲರ್ಸ್ ಕನ್ನಡ ವಾಹಿನಿ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಘೋಷಿಸಿದೆ. ಆಗಸ್ಟ್ 6ರಿಂದ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್ ಬೋಟಾನಿಕಲ್ ಗಾರ್ಡನ್‌ನಲ್ಲಿ ‘Bigg Boss Agnipariksha Experience Zone’ ಆರಂಭವಾಗಲಿದೆ. ಈ ವಿಶೇಷ ವಲಯದಲ್ಲಿ ಬಿಗ್ ಬಾಸ್ ಅಭಿಮಾನಿಗಳು ಐಕಾನಿಕ್ ಬಿಗ್ ಬಾಸ್ ಚೇರ್ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳುವ ಅವಕಾಶದ ಜೊತೆಗೆ, ‘ಅಗ್ನಿಪರೀಕ್ಷೆ’ ಚಾಲೆಂಜ್‌ಗಳಲ್ಲಿ ಭಾಗವಹಿಸಿ ತಮ್ಮ ಸಾಹಸ ಪ್ರದರ್ಶಿಸಬಹುದು. ವಿಶೇಷ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು, ಲಾಲ್‌ಬಾಗ್‌ನ […]

ಉಡುಪಿಯ Inspiring Travellerz ವತಿಯಿಂದ ಚಾರ್ ಧಾಮ ಯಾತ್ರೆ, ಅದ್ಬುತ ಅಧ್ಯಾತ್ಮಿಕ ಪ್ರವಾಸದ ಅನುಭವ ಪಡೆಯಲು ಇಲ್ಲಿದೆ ಒಂದು ಅವಕಾಶ

ಉಡುಪಿ: ಇನ್ಸ್‌ಪೈರಿಂಗ್ ಟ್ರಾವೆಲರ್ಝ್ ವತಿಯಿಂದ 2026ನೇ ಸಾಲಿನ ಚಾರ್ ಧಾಮ ಯಾತ್ರೆ ಆಯೋಜಿಸಲಾಗಿದ್ದು, 9 ರಾತ್ರಿ ಹಾಗೂ 10 ದಿನಗಳ ಈ ಆಧ್ಯಾತ್ಮಿಕ ಪ್ರವಾಸಕ್ಕೆ ನೋಂದಣಿ ಆರಂಭಗೊಂಡಿದೆ. ಹರಿದ್ವಾರದಿಂದ ಆರಂಭವಾಗಿ ಮತ್ತೆ ಹರಿದ್ವಾರದಲ್ಲೇ ಅಂತ್ಯಗೊಳ್ಳುವ ಈ ಯಾತ್ರೆಯಲ್ಲಿ ಯಮುನೋತ್ರಿ, ಗಂಗೋತ್ರಿ, ಶ್ರೀ ಕೇದಾರನಾಥ ಹಾಗೂ ಶ್ರೀ ಬದ್ರಿನಾಥ ಸೇರಿದಂತೆ ಉತ್ತರಾಖಂಡದ ನಾಲ್ಕು ಪವಿತ್ರ ಧಾಮಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾತ್ರೆಯು ಹರಿದ್ವಾರ, ಮಸೂರಿ, ಬಾರ್ಕೋಟ್, ಉತ್ತರಕಾಶಿ, ಫಾಟಾ, ಶ್ರೀ ಕೇದಾರನಾಥ, ಪಿಪಲ್ಕೋಟಿ ಹಾಗೂ ಬದ್ರಿನಾಥ ಮಾರ್ಗವಾಗಿ ಸಾಗಲಿದೆ. […]

ಫೋಲ್ಡಿಂಗ್ ಬಾಗಿಲು ಅಳವಡಿಸದ ಬಸ್‌ಗಳಿಗೆ ದಂಡ

ಉಡುಪಿ: ಜಿಲ್ಲಾಡಳಿತವು ಉಡುಪಿ ನಗರದಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಬಸ್‌ಗಳಿಗೆ ಕಡ್ಡಾಯವಾಗಿ ಫೋಲ್ಡಿಂಗ್ ಮಾದರಿಯ ಬಾಗಿಲುಗಳನ್ನು ಅಳವಡಿಸಲು ನಿಗದಿಪಡಿಸಿದ್ದ ಜೂನ್‌ 1ರ ಅಂತಿಮ ಗಡುವು ಮುಗಿದು ತಿಂಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ನಿಯಮ ಪಾಲಿಸದ ಬಸ್‌ಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 15 ಬಸ್‌ಗಳಿಗೆ ದಂಡ ವಿಧಿಸಿದರು. ನಗರ ಬಸ್‌ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಫೋಲ್ಡಿಂಗ್ ಬಾಗಿಲು ಅಳವಡಿಸದೇ ಸಂಚರಿಸುತ್ತಿದ್ದ ಬಸ್‌ಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ದಂಡಾತ್ಮಕ ಕ್ರಮ ಕೈಗೊಂಡರು. ಜೊತೆಗೆ, ನಿಯಮ […]

ಆಗಸದಿಂದ 300 ಅಡಿ ಕುಸಿದ ಏರ್ ಇಂಡಿಯಾ ವಿಮಾನ,12 ಮಂದಿಗೆ ಗಾಯ, ಪ್ರಯಾಣಿಕರು ಪಾರು

ನವದೆಹಲಿ: ಫುಕೆಟ್‌ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ AI2379 ವಿಮಾನವು ಮಂಗಳವಾರ ಮಧ್ಯಾಕಾಶದಲ್ಲಿ ತೀವ್ರ ಟರ್ಬುಲೆನ್ಸ್‌ಗೆ ಸಿಲುಕಿದ ಪರಿಣಾಮ ಏಕಾಏಕಿ ಸುಮಾರು 300 ಅಡಿ ಕುಸಿದಿದ್ದು, ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು 12 ಮಂದಿ ಗಾಯಗೊಂಡಿದ್ದಾರೆ. ವಿಮಾನಕ್ಕೂ ಸಣ್ಣ ಪ್ರಮಾಣದ ಹಾನಿಯಾಗಿದೆ. ಬೆಳಿಗ್ಗೆ 8:25ಕ್ಕೆ ಫುಕೆಟ್‌ನಿಂದ ಹೊರಟಿದ್ದ ವಿಮಾನವು ನಿಗದಿಯಂತೆ ಮಧ್ಯಾಹ್ನ 11:50ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ಲಿಯರ್ ಏರ್ ಟರ್ಬುಲೆನ್ಸ್ (CAT) ಅಥವಾ […]

ತೆಕ್ಕಟ್ಟೆ: ಶಾರ್ಟ್ ಸರ್ಕ್ಯೂಟ್‌ನಿಂದ ಜನರಲ್ ಸ್ಟೋರ್‌ ಬೆಂಕಿಗಾಹುತಿ: ₹40 ಲಕ್ಷಕ್ಕೂ ಅಧಿಕ ನಷ್ಟ

ಉಡುಪಿ: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ – 66ರ ಕುವೆಂಪು ಶಾಲೆ ಸಮೀಪದಲ್ಲಿರುವ ಗುರು ಬ್ರಹ್ಮ ಜನರಲ್ ಸ್ಟೋರ್ ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿ ಸುಮಾರು ₹40 ಲಕ್ಷಕ್ಕೂ ಅಧಿಕ ನಷ್ಟ ಉಂಟಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಅಂಗಡಿ ಮಾಲೀಕ ಸಂತೋಷ್ ಅವರು ಎಂದಿನಂತೆ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ರಾತ್ರಿ ಸುಮಾರು 1.30ರ ವೇಳೆಗೆ ಅಂಗಡಿಯೊಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಅಂಗಡಿಗೆ ವ್ಯಾಪಿಸಿದೆ. ಅಗ್ನಿ […]