ಆಗಸ್ಟ್ 5 ರಂದು ಕಾಸರಗೋಡು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿರುವ ಕಾರಣ ಬುಧವಾರ (ಆಗಸ್ಟ್ 5) ಅಂಗನವಾಡಿ, ಮದ್ರಸ, ಶಾಲೆಗಳು ಮತ್ತು ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ರಜೆ ಘೋಷಿಸಿದ್ದಾರೆ. ಮುಂಚಿತವಾಗಿ ನಿಗದಿಪಡಿಸಲಾದ ವಿಶ್ವವಿದ್ಯಾಲಯ ಅಥವಾ ಸಾರ್ವಜನಿಕ ಪರೀಕ್ಷೆಗಳು ಹಾಗೂ ಸಂದರ್ಶನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಉದ್ಯಾವರದಲ್ಲಿ ಚರಂಡಿಗೆ ಬಿದ್ದ ಸಕ್ಕರೆ ಸಾಗಣೆ ಲಾರಿ; ಮದ್ಯದ ಅಮಲಿನಲ್ಲಿದ್ದ ಚಾಲಕ ವಶಕ್ಕೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ–66ರ ಉದ್ಯಾವರ ಸಮೀಪ ಸಕ್ಕರೆ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಚಾಲಕ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದ ಕಂಡುಬಂದಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಕೇರಳಕ್ಕೆ ಸಕ್ಕರೆ ಸಾಗಿಸುತ್ತಿದ್ದ ಲಾರಿಯನ್ನು ಉದ್ಯಾವರ ಸಮೀಪ ರಸ್ತೆ ಬದಿಯಲ್ಲಿ ನಿಲ್ಲಿಸಲು ಚಾಲಕ ಯತ್ನಿಸಿದ್ದಾನೆ. ಆದರೆ ಕಂಠಪೂರ್ತಿ ಕುಡಿದಿದ್ದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಚರಂಡಿಗೆ ನುಗ್ಗಿದೆ. ಲಾರಿಯ ಚಕ್ರ ಮಣ್ಣಿನಲ್ಲಿ ಹೂತುಹೋಗಿದ್ದರಿಂದ ಲಾರಿ […]

ಜವಾಹರ ನವೋದಯ ವಿದ್ಯಾಲಯ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಉಡುಪಿ: ಹೆಬ್ರಿಯ ಜವಾಹರ ನವೋದಯ ವಿದ್ಯಾಲಯದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ 6ನೇ ತರಗತಿಯ ಪ್ರವೇಶಾತಿಗಾಗಿ ಆನ್‌ಲೈನ್ https://navodaya.gov.in ಅಥವಾ https://cbseitms.rcil.gov.in/nvs ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ 7 ರವರೆಗೆ ವಿಸ್ತರಿಸಲಾಗಿದ್ದು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಶಾಲಾ ಕಚೇರಿ ದೂ.ಸಂ: 08253-251260 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾಂಶುಪಾಲರ ಕಚೇರಿ ಪ್ರಕಟಣೆ ತಿಳಿಸಿದೆ.

ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲ ವಾತಾವರಣ ಕಲ್ಪಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ

ಉಡುಪಿ: ಮಹಿಳೆಯರ ಸುರಕ್ಷತೆ, ಆರ್ಥಿಕ ಸಬಲೀಕರಣಕ್ಕೆ ಅನುಕೂಲ ವಾತಾವರಣ ಸೃಷ್ಠಿಸಿ ಅವರುಗಳ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಮಾಜದ ದುರ್ಬಲ, ಶೋಷಿತ ಹಾಗೂ ಅಸಹಾಯಕ ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಅವರುಗಳಿಗೆ ಅರಿವು […]

ಶಿಕ್ಷಕರಾಗಿ ಭವಿಷ್ಯ ಕಟ್ಟಿಕೊಳ್ಳಲು ಇಲ್ಲೊಂದು ಬೆಸ್ಟ್ ಆಯ್ಕೆ ನಿಮಗಿದೆ: ಉಡುಪಿಯ ಶಾರದ ಮಾಂಟೆಸ್ಸೋರಿ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ನಲ್ಲಿ ತರಬೇತಿ ಪಡೀರಿ, ಟೀಚರ್ ಆಗಿ

ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿಯರಾಗಲು ಇಂದು ಉತ್ತಮ ಅವಕಾಶಗಳಿವೆ. ಈ ಶಿಕ್ಷಕಿ ವೃತ್ತಿಯಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಆಸಕ್ತಿ ಹೊಂದಿರುವ ಮಹಿಳೆಯರು ಹಾಗೂ ಯುವತಿಯರಿಗೆ ಶಾರದ ಮಾಂಟೆಸ್ಸೋರಿ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ಅದ್ಬುತ ಅವಕಾಶವೊಂದನ್ನು ಕಲ್ಪಿಸಿದ್ದು, 2026ನೇ ಸಾಲಿನ ಮಾಂಟೆಸ್ಸೋರಿ ಹಾಗೂ ನರ್ಸರಿ ಶಿಕ್ಷಕಿರ ತರಬೇತಿ ಕೋರ್ಸ್‌ಗೆ ಪ್ರವೇಶಾತಿ ಪ್ರಕ್ರಿಯೆ ಶುರುವಾಗಿದೆ. ಯಾರು ಅರ್ಜಿ ಸಲ್ಲಿಸಬಹುದು? ಪಿಯುಸಿ (12ನೇ ತರಗತಿ) ಅಥವಾ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಕ್ಕಳ ಶಿಕ್ಷಣ ಮತ್ತು ಆರೈಕೆಯಲ್ಲಿ ವೃತ್ತಿ […]