ಉಡುಪಿಯ Inspiring Travellerz ವತಿಯಿಂದ ಚಾರ್ ಧಾಮ ಯಾತ್ರೆ, ಅದ್ಬುತ ಅಧ್ಯಾತ್ಮಿಕ ಪ್ರವಾಸದ ಅನುಭವ ಪಡೆಯಲು ಇಲ್ಲಿದೆ ಒಂದು ಅವಕಾಶ

ಉಡುಪಿ: ಇನ್ಸ್‌ಪೈರಿಂಗ್ ಟ್ರಾವೆಲರ್ಝ್ ವತಿಯಿಂದ 2026ನೇ ಸಾಲಿನ ಚಾರ್ ಧಾಮ ಯಾತ್ರೆ ಆಯೋಜಿಸಲಾಗಿದ್ದು, 9 ರಾತ್ರಿ ಹಾಗೂ 10 ದಿನಗಳ ಈ ಆಧ್ಯಾತ್ಮಿಕ ಪ್ರವಾಸಕ್ಕೆ ನೋಂದಣಿ ಆರಂಭಗೊಂಡಿದೆ.

ಹರಿದ್ವಾರದಿಂದ ಆರಂಭವಾಗಿ ಮತ್ತೆ ಹರಿದ್ವಾರದಲ್ಲೇ ಅಂತ್ಯಗೊಳ್ಳುವ ಈ ಯಾತ್ರೆಯಲ್ಲಿ ಯಮುನೋತ್ರಿ, ಗಂಗೋತ್ರಿ, ಶ್ರೀ ಕೇದಾರನಾಥ ಹಾಗೂ ಶ್ರೀ ಬದ್ರಿನಾಥ ಸೇರಿದಂತೆ ಉತ್ತರಾಖಂಡದ ನಾಲ್ಕು ಪವಿತ್ರ ಧಾಮಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಯಾತ್ರೆಯು ಹರಿದ್ವಾರ, ಮಸೂರಿ, ಬಾರ್ಕೋಟ್, ಉತ್ತರಕಾಶಿ, ಫಾಟಾ, ಶ್ರೀ ಕೇದಾರನಾಥ, ಪಿಪಲ್ಕೋಟಿ ಹಾಗೂ ಬದ್ರಿನಾಥ ಮಾರ್ಗವಾಗಿ ಸಾಗಲಿದೆ. ಯಾತ್ರೆಯ ಸಂಪೂರ್ಣ ಅವಧಿಯಲ್ಲಿ ಪ್ರತಿದಿನ ಬೆಳಗಿನ ಉಪಹಾರ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಯಾತ್ರೆಯ ಪ್ರಮುಖ ಆಕರ್ಷಣೆಯಾಗಿ ಶ್ರೀ ಕೇದಾರನಾಥ ಧಾಮದಲ್ಲಿ ಡಾರ್ಮಿಟರಿ ವಾಸ್ತವ್ಯ ಹಾಗೂ ಅಲ್ಲಿಯೇ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಭಕ್ತರಿಗೆ ದಿವ್ಯ ಹಾಗೂ ಆಧ್ಯಾತ್ಮಿಕ ಅನುಭವವನ್ನು ನೀಡುವ ಉದ್ದೇಶ ಹೊಂದಲಾಗಿದೆ.

ಹಿಮಾಲಯದ ನೈಸರ್ಗಿಕ ಸೌಂದರ್ಯ, ಪವಿತ್ರ ನದಿಗಳು, ಪ್ರಾಚೀನ ದೇವಾಲಯಗಳು ಹಾಗೂ ಆಧ್ಯಾತ್ಮಿಕ ವಾತಾವರಣವನ್ನು ಅನುಭವಿಸಲು ಈ ಯಾತ್ರೆ ಉತ್ತಮ ಅವಕಾಶವಾಗಿದ್ದು, ಆಸಕ್ತರು ಮುಂಗಡವಾಗಿ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಬುಕ್ಕಿಂಗ್‌ಗಾಗಿ ಶ್ರೀ ಪ್ರದ್ಯುಮ್ನ ಬಿ. ರಾವ್ ಅವರನ್ನು 7975492267 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ