ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಆರಂಭಕ್ಕೂ ಮುನ್ನವೇ ಕಲರ್ಸ್ ಕನ್ನಡ ವಾಹಿನಿ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಘೋಷಿಸಿದೆ. ಆಗಸ್ಟ್ 6ರಿಂದ ಬೆಂಗಳೂರಿನ ಐತಿಹಾಸಿಕ ಲಾಲ್ಬಾಗ್ ಬೋಟಾನಿಕಲ್ ಗಾರ್ಡನ್ನಲ್ಲಿ ‘Bigg Boss Agnipariksha Experience Zone’ ಆರಂಭವಾಗಲಿದೆ.
ಈ ವಿಶೇಷ ವಲಯದಲ್ಲಿ ಬಿಗ್ ಬಾಸ್ ಅಭಿಮಾನಿಗಳು ಐಕಾನಿಕ್ ಬಿಗ್ ಬಾಸ್ ಚೇರ್ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳುವ ಅವಕಾಶದ ಜೊತೆಗೆ, ‘ಅಗ್ನಿಪರೀಕ್ಷೆ’ ಚಾಲೆಂಜ್ಗಳಲ್ಲಿ ಭಾಗವಹಿಸಿ ತಮ್ಮ ಸಾಹಸ ಪ್ರದರ್ಶಿಸಬಹುದು.
ವಿಶೇಷ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು, ಲಾಲ್ಬಾಗ್ನ ಎಕ್ಸ್ಪೀರಿಯನ್ಸ್ ಝೋನ್ನಲ್ಲಿ ನಡೆಯುವ ಅಗ್ನಿಪರೀಕ್ಷೆ ಚಾಲೆಂಜ್ಗಳನ್ನು ಪೂರ್ಣಗೊಳಿಸಿ, ಅಲ್ಲಿಯೇ ಸೆಲ್ಫಿ ತೆಗೆದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ #BBKAGNIPARIKSHE ಹ್ಯಾಶ್ಟ್ಯಾಗ್ ಬಳಸಿ ಪೋಸ್ಟ್ ಮಾಡಬೇಕು. ಪೋಸ್ಟ್ನಲ್ಲಿ @ColorsKannada ಅಧಿಕೃತ ಖಾತೆಯನ್ನು ಟ್ಯಾಗ್ ಮಾಡುವುದರ ಜೊತೆಗೆ, ಇನ್ಸ್ಟಾಗ್ರಾಮ್ ಖಾತೆಯನ್ನು ‘ಪಬ್ಲಿಕ್’ ಮೋಡ್ನಲ್ಲಿ ಇರಿಸುವುದು ಕಡ್ಡಾಯವಾಗಿದೆ.
ಆಯ್ಕೆಯಾದ ಅದೃಷ್ಟಶಾಲಿ ಅಭಿಮಾನಿಗಳಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೊಂದಿಗೆ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಅನ್ನು ನೇರವಾಗಿ ವೀಕ್ಷಿಸುವ ಅವಕಾಶ ದೊರೆಯಲಿದ್ದು, ಜೊತೆಗೆ ಬಿಗ್ ಬಾಸ್ ವಿಶೇಷ ಉಡುಗೊರೆಗಳನ್ನೂ ಗೆಲ್ಲಬಹುದಾಗಿದೆ.
ಈ ಕಾರ್ಯಕ್ರಮವು ಆಗಸ್ಟ್ 6ರಂದು ಬೆಳಿಗ್ಗೆ 10.30ರಿಂದ ಬೆಂಗಳೂರಿನ ಲಾಲ್ಬಾಗ್ ಬೋಟಾನಿಕಲ್ ಗಾರ್ಡನ್ನಲ್ಲಿ ನಡೆಯಲಿದೆ.















