ಅರಿವು ಸಾಲ ಯೋಜನೆ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ(ನಿ) ಇವರ ವತಿಯಿಂದ ಸಿ.ಇ.ಟಿ, ಜೆ.ಇ.ಇ., ನೀಟ್, ಪಿ.ಜಿ.ಸಿ.ಇ.ಟಿ, ಸಿ.ಎಲ್.ಎ.ಟಿ ಹಾಗೂ ಐ.ಸಿ.ಎ.ಆರ್ ಮೂಲಕ ಆಯ್ಕೆಯಾಗುವ ಅಥವಾ ನ್ಯಾಕ್ ‘ಎ’ ಗ್ರೇಡ್ ಅಥವಾ ಅದಕ್ಕಿಂತ ಹೆಚ್ಚಿನ ಮಾನ್ಯತೆ ಹೊಂದಿರುವ ಅಥವಾ ಎನ್.ಐ.ಆರ್.ಎಫ್ ಶ್ರೇಯಾಂಕದ ಅಗ್ರ 100 ಸ್ಥಾನಗಳಲ್ಲಿರುವ ಕಾಲೇಜು, ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳು ನಡೆಸುವ ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆಯಾಗುವ ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್, ಬಿ.ಇ, ಬಿ.ಟೆಕ್, ಎಂ.ಇ., ಎಂ.ಟೆಕ್, ಬಿ.ಡಿ.ಎಸ್, ಎಂ.ಡಿ.ಎಸ್, ಬಿ.ಆಯುಷ್, ಎಂ.ಆಯುಷ್, ಎಂ.ಬಿ.ಎ, […]

ಜುಲೈ 28: ಶಿರ್ವದಲ್ಲಿ ಸಹಕಾರ ಭಾರತಿ ಮೈಸೂರು ವಿಭಾಗ ಕಾರ್ಯಕಾರಿಣಿ ಸಭೆ.

ಉಡುಪಿ: ಸಹಕಾರ ಭಾರತಿ ಮೈಸೂರು ವಿಭಾಗದ ಕಾರ್ಯಕಾರಿಣಿ ಸಭೆಯು ಜುಲೈ 28, ಮಂಗಳವಾರ, ಉಡುಪಿ ಜಿಲ್ಲೆಯ ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಸಹಕಾರ ಭಾರತಿ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಹಾಗೂ ಸಂಘಟನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸುವ ಉದ್ದೇಶದಿಂದ ಈ ವಿಭಾಗ ಮಟ್ಟದ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮೈಸೂರು ನಗರ, ಮೈಸೂರು, ಹಾಸನ, ಮಂಡ್ಯ, ಕೊಡಗು (ಮಡಿಕೇರಿ), ಚಿಕ್ಕಮಗಳೂರು, ಮಂಗಳೂರು ಮಹಾನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಸಹಿತ […]

ಉಡುಪಿ: ನಿಯಂತ್ರಣ ತಪ್ಪಿದ ಕಿಯಾ ಕಾರು ಫುಟ್‌ಪಾತ್‌ಗೆ ಡಿಕ್ಕಿ- ತಪ್ಪಿದ ಭಾರೀ ಅನಾಹುತ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಿಯಾ ಕಾರೊಂದು ಫುಟ್‌ಪಾತ್‌ಗೆ ಡಿಕ್ಕಿ ಹೊಡೆದ ಘಟನೆ ನಗರದ ಜಿಲ್ಲಾ ನ್ಯಾಯಾಲಯದ (ಕೋರ್ಟ್) ಮುಂಭಾಗದಲ್ಲಿ ಸೋಮವಾರ ಸಂಜೆ ನಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆ ಬದಿಯ ಸೂಚನಾ ಫಲಕ ಮುರಿದು ಬಿದ್ದಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರನ್ನು ಮಹಿಳೆಯೊಬ್ಬರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಡುಪಿ: ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ – 12ನೇ ವರ್ಷದ ವಾರ್ಷಿಕ ಮಹಾಸಭೆ

ಉಡುಪಿ: ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘವು 12ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ದಿನೇಶ್ ಸಿ . ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆಸಿತು. ಸಂಘವು 12ನೇ ವರ್ಷದಲ್ಲಿ 3,708 ಸದಸ್ಯರನ್ನು ಹೊಂದಿದ್ದು, ಸುಮಾರು ಪ್ರಸಕ್ತ ಸಾಲಿನಲ್ಲಿ ₹45 ಕೋಟಿ ವ್ಯವಹಾರ ನಡೆಸಿರುವ ಸಂಘವು ಸದಸ್ಯರಿಗೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಸುಮಾರು ₹50 ಲಕ್ಷ ಪಾಲು ಬಂಡವಾಳ ಹೊಂದುವ ಗುರಿ ಇದೆ. ಸಂಘದ ವ್ಯವಹಾರವನ್ನು ವಿಸ್ತರಿಸಿಕೊಂಡು ಸದಸ್ಯರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ […]

ಉಡುಪಿ ಜಿಲ್ಲಾ ಬೇಕರಿ ಸಂಘದ ದಶಮಾನೋತ್ಸವದ ಲೋಗೊ ಬಿಡುಗಡೆ

ಉಡುಪಿ: ಉಡುಪಿ ಜಿಲ್ಲಾ ಬೇಕರಿ ಹಾಗೂ ಖಾದ್ಯ ತಿನಿಸುಗಳ ತಯಾರಕರು ಮತ್ತು ಮಾರಾಟಗಾರರ ಸಂಘದ ದಶಮಾನೋತ್ಸವ ಹಾಗೂ ನವೆಂಬರ್‌ನಲ್ಲಿ ಆಯೋಜಿಸಿರುವ ಆಹಾರ ಉದ್ಯಮ ಮೇಳದ ಲೋಗೊ ಬಿಡುಗಡೆ ಸಮಾರಂಭ ಭಾನುವಾರ ಬ್ರಹ್ಮಾವರ ಸಿಟಿ ಸೆಂಟರ್‌ನ ಕುಂಕುಮ್ ಸಭಾಂಗಣದಲ್ಲಿ ನಡೆಯಿತು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸಂಘದ ಲೋಗೊ ಬಿಡುಗಡೆಗೊಳಿಸಿ ಮಾತನಾಡಿ, ಉಡುಪಿಯ ಸಿದ್ಧ ಆಹಾರ ಮತ್ತು ತಿಂಡಿ–ತಿನಿಸುಗಳು ವಿಶ್ವದಾದ್ಯಂತ ವಿಶೇಷ ಮನ್ನಣೆ ಪಡೆದಿವೆ. ಉಡುಪಿ ಹೋಟೆಲ್‌ಗಳ ಶುಚಿ ಮತ್ತು ರುಚಿಕರ ಆಹಾರಕ್ಕೆ ಎಲ್ಲೆಡೆ ಬೇಡಿಕೆ ಇದೆ. ಈ […]