ಕರಾವಳಿ- ಘಟ್ಟ ಪ್ರದೇಶಗಳಲ್ಲಿ ಭೂಕುಸಿತದ ಆತಂಕ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಜುಲೈ 17 ಮತ್ತು 18 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಭೂಕುಸಿತ (ಲ್ಯಾಂಡ್‌ಸೈಡ್) ಸಂಭವಿಸುವ ಆತಂಕ ಎದುರಾಗಿದೆ.ಈ ಕುರಿತು ಭಾರತೀಯ ಹವಾಮಾನ ಇಲಾಖೆ (IMD) ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

EMI ಬಗ್ಗೆ ಚಿಂತೆಯೇ ಬೇಡಹೆಚ್ಚುವರಿ ಆದಾಯದೊಂದಿಗೆ ನಿಮ್ಮ ಹಣಕಾಸನ್ನು ಸುಲಭವಾಗಿ ನಿರ್ವಹಿಸಿEMI ಬಗ್ಗೆ ಚಿಂತೆಯೇ ಬೇಡ

ಹೆಚ್ಚುವರಿ ಆದಾಯದೊಂದಿಗೆ ನಿಮ್ಮ ಹಣಕಾಸನ್ನು ಸುಲಭವಾಗಿ ನಿರ್ವಹಿಸಿ.ಎರಡನೇ ಆದಾಯ ಗಳಿಸಿ… ಆರ್ಥಿಕ ಸ್ವಾತಂತ್ರ್ಯದತ್ತ ಆತ್ಮವಿಶ್ವಾಸದ ಹೆಜ್ಜೆ ಇಡಿ!” ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ:📞 8861238509 / 9113644500 https://forms.gle/JWgvScd4R55Xmiic7

ಅಂಬಲಪಾಡಿ ಮಹಾಕಾಳಿ ಸನ್ನಿಧಿಯಲ್ಲಿ ಪುಷ್ಪ ವೈಭವ: ಭಕ್ತರನ್ನು ಸೆಳೆದ ಚಿಕ್ಕಬಳ್ಳಾಪುರದ ಭಕ್ತರ ಸೇವೆ

ಉಡುಪಿ: ಜಿಲ್ಲೆಯ ಪ್ರಸಿದ್ಧ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪುಷ್ಪಾಲಂಕಾರ ನೆರವೇರಿದ್ದು, ದೇವಾಲಯವು ವರ್ಣರಂಜಿತ ಹೂವಿನ ಅಲಂಕಾರದಿಂದ ಕಂಗೊಳಿಸಿತು. ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಗೆಯ ಹೂವುಗಳಿಂದ ದೇವಾಲಯದ ಒಳಾಂಗಣ ಹಾಗೂ ಹೊರಾಂಗಣವನ್ನು ಅಲಂಕರಿಸಲಾಗಿದ್ದು, ಸಾವಿರಾರು ಭಕ್ತರ ಗಮನ ಸೆಳೆಯಿತು. ಚಿಕ್ಕಬಳ್ಳಾಪುರದ ಭಕ್ತವೃಂದವು ಹಲವು ವರ್ಷಗಳಿಂದ ಪ್ರತಿವರ್ಷ ಭಕ್ತಿಭಾವದಿಂದ ಈ ವಿಶೇಷ ಪುಷ್ಪಾಲಂಕಾರ ಸೇವೆಯನ್ನು ಸಲ್ಲಿಸುತ್ತಿದ್ದು, ಈ ಬಾರಿಯೂ ತಮ್ಮ ಕೈಯಾರೆ ದೇವಾಲಯವನ್ನು ಅಲಂಕರಿಸಿದರು. ದೇವಿಯ ಅನುಗ್ರಹದಿಂದ ತಮ್ಮ ಬದುಕಿನಲ್ಲಿ ಶುಭ ಬದಲಾವಣೆಗಳಾಗಿವೆ […]

“ಏನೇ ಪರಿಸ್ಥಿತಿ ಬಂದರೂ ಜು. 20ರವರೆಗೆ ಬದುಕಿರುತ್ತೇನೆ” ಎಂದ ಸೊನಮ್ ವಾಂಗ್ಚುಕ್, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಮುಂದುವರಿದ ಸೊನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 20ನೇ ದಿನಕ್ಕೆ ಕಾಲಿಟ್ಟಿದೆ. ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, “ಏನೇ ಪರಿಸ್ಥಿತಿ ಬಂದರೂ ಜುಲೈ 20ರವರೆಗೆ ಬದುಕಿರುತ್ತೇನೆ. ಹೊರಗಿನಿಂದ ದುರ್ಬಲನಾಗಿ ಕಾಣಬಹುದು, ಆದರೆ ಒಳಗಿನಿಂದ ದೃಢವಾಗಿದ್ದೇನೆ” ಎಂದು ಹೇಳಿದರು. ಜುಲೈ 20ರಂದು ಸಂಸತ್ತಿನವರೆಗೆ […]

ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಚಾಲನೆ ನೀಡಿದ ಪ್ರಧಾನಿ

ಚಂಡೀಗಢ: ದೇಶದ ರೈಲ್ವೆ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ನೀಡುವಂತೆ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ರೈಲು ಉತ್ತರ ರೈಲ್ವೆಯ ಹರಿಯಾಣದ ಜಿಂದ್–ಸೋನಿಪತ್ ನಡುವಿನ 89 ಕಿ.ಮೀ. ಮಾರ್ಗದಲ್ಲಿ ಸಂಚರಿಸಲಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋಜನ್ ಇಂಧನ ಕೋಶ (Hydrogen Fuel Cell) ತಂತ್ರಜ್ಞಾನವನ್ನು ರೈಲ್ವೆಯಲ್ಲಿ ಅಳವಡಿಸಲಾಗಿದೆ. ಹೈಡ್ರೋಜನ್‌ನಿಂದ ವಿದ್ಯುತ್ ಉತ್ಪಾದಿಸಿ ರೈಲನ್ನು ಚಲಾಯಿಸುವ ಈ ತಂತ್ರಜ್ಞಾನವು ಡೀಸೆಲ್ ರೈಲುಗಳಿಗೆ ಪರಿಸರ ಸ್ನೇಹಿ ಪರ್ಯಾಯವಾಗಿದೆ. ಯೋಜನೆಯ […]