ತ್ರಿಶಾ ವಿದ್ಯಾ ಪಿ ಯು ಕಾಲೇಜಿನ ವಿದ್ಯಾರ್ಥಿ ಪರಿಷತ್ ಉದ್ಘಾಟನ ಸಮಾರಂಭ ಹಾಗು ಫ್ರೆಷೆರ್ಸ್ ಡೇ ಕಾರ್ಯಕ್ರಮ.

ಕಟಪಾಡಿಯ ಎಸ್. ವಿ. ಎಸ್ ಹಾಲ್ ನಲ್ಲಿ ತ್ರಿಶಾ ವಿದ್ಯಾ ಪಿ ಯು ಕಾಲೇಜಿನ ವತಿಯಿಂದ ವಿದ್ಯಾರ್ಥಿ ಪರಿಷತ್ ಉದ್ಘಾಟನ ಸಮಾರಂಭ ಹಾಗು ಫ್ರೆಷೆರ್ಸ್ ಡೇ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ, ಶಿಸ್ತು ಮತ್ತು ಉತ್ಸಾಹದಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ ಗೋಪಾಲ ಕೃಷ್ಣ ಭಟ್ ಇವರು ಅಧ್ಯಕ್ಷೀಯ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನಾಯಕತ್ವದ ಗುಣ, ಶಿಸ್ತು, ಸಮಯಪಾಲನೆ ಹಾಗು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳಸಿಕೊಳ್ಳುವ ಅಗತ್ಯವನ್ನು ಒತ್ತಿ […]

ಭೀಕರ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಕಳದ ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್ ನಿಧನ

ಕಾರ್ಕಳ: ನಗರದ ಶಿವತಿಕೆರೆ ಸಮೀಪ ಸಂಭವಿಸಿದ್ದ ಭೀಕರ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಕಳ ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್ ನಂದಳಿಕೆ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕಳೆದ ರವಿವಾರ ಸಂಜೆ ಸುಮಾರು 7.30ರ ವೇಳೆಗೆ ಕಾರ್ಕಳದಿಂದ ನಂದಳಿಕೆಯಲ್ಲಿರುವ ತಮ್ಮ ಮನೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ, ಶಿವತಿಕೆರೆ ಸಮೀಪದ ಪೆಟ್ರೋಲ್ ಬಂಕ್ ಬಳಿ ಇಂಡಿಕೇಟರ್ ನೀಡಿ ಯೂ-ಟರ್ನ್ ಪಡೆಯಲು ಮುಂದಾಗಿದ್ದರು. ಇದೇ ವೇಳೆ ಹಿಂದಿನಿಂದ ಅತಿ ವೇಗವಾಗಿ ಬಂದ ಬೈಕ್ ಸ್ಕೂಟಿಗೆ ಡಿಕ್ಕಿ ಹೊಡೆದ […]

ಉಡುಪಿಯಲ್ಲಿ ಧಾರಾಕಾರ ಮಳೆ; ಬಿಸಿಲಿನ ಬೇಗೆಯಿಂದ ಜನರಿಗೆ ನಿರಾಳತೆ

ಉಡುಪಿ: ಹಲವು ದಿನಗಳ ವಿರಾಮದ ಬಳಿಕ ಉಡುಪಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಆರಂಭವಾದ ಮಳೆ ಶುಕ್ರವಾರವೂ ಮುಂದುವರಿದಿದ್ದು, ಜನರಿಗೆ ಬಿಸಿಲಿನ ಬೇಗೆಯಿಂದ ನಿರಾಳತೆ ನೀಡಿದೆ. ಕಳೆದ ಸುಮಾರು ಹತ್ತು ದಿನಗಳಿಂದ ಜಿಲ್ಲೆಯಾದ್ಯಂತ ತೀವ್ರ ಬಿಸಿಲು ಆವರಿಸಿದ್ದರಿಂದ ಬೇಸಿಗೆ ಕಾಲದ ವಾತಾವರಣ ನಿರ್ಮಾಣವಾಗಿತ್ತು. ಉಷ್ಣಾಂಶ ಏರಿಕೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಕೃಷಿಕರು ಸಹ ಮಳೆಯ ನಿರೀಕ್ಷೆಯಲ್ಲಿದ್ದರು. ಗುರುವಾರ ರಾತ್ರಿ ಆರಂಭವಾದ ಧಾರಾಕಾರ ಮಳೆಯಿಂದ ವಾತಾವರಣ ತಂಪಾಗಿದ್ದು, ಭತ್ತ ನಾಟಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರಲ್ಲಿ ಹೊಸ ಉತ್ಸಾಹ ಮೂಡಿದೆ. […]

₹47.23 ಕೋಟಿಗೆ ಮಾರಾಟವಾಯ್ತು ಈ ಐತಿಹಾಸಿಕ ಟೀ ಶರ್ಟ್, ಬ್ರೆಜಿಲ್ ನ ಫುಟ್ಬಾಲ್ ದಂತಕಥೆ ಧರಿಸಿದ್ದ ಟೀ ಶರ್ಟ್ ಇದು!

ನ್ಯೂಯಾರ್ಕ್: ಬ್ರೆಜಿಲ್ ಫುಟ್ಬಾಲ್ ದಂತಕಥೆ ಪೀಲೆ ಅವರು 1958ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಧರಿಸಿದ್ದ ಐತಿಹಾಸಿಕ ನಂಬರ್ 10 ಟಿ-ಶರ್ಟ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಈ ಟಿ-ಶರ್ಟ್ ಬರೋಬ್ಬರಿ **4.9 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹47.23 ಕೋಟಿ)**ಗೆ ಸೇಲ್ ಆಗಿದೆ. 1958ರಲ್ಲಿ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಸ್ವೀಡನ್ ತಂಡವನ್ನು ಬ್ರೆಜಿಲ್ 5-2 ಗೋಲುಗಳಿಂದ ಮಣಿಸಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಆಗ ಕೇವಲ 17 ವರ್ಷದ ಪೀಲೆ ಧರಿಸಿದ್ದ […]

ಬಂಟ್ವಾಳ: ಬಿಸಿರೋಡ್‌ನಲ್ಲಿ ಯುವತಿ ಹತ್ಯೆ ಪ್ರಕರಣ; ಆರೋಪಿ ಚೇತನ್ ಬಂಧನ

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿರೋಡ್‌ನಲ್ಲಿ ಗುರುವಾರ ನಡೆದ ಯುವತಿ ಹತ್ಯೆ ಪ್ರಕರಣದ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದಾರೆ.ಲಾವಣ್ಯ ಎಂಬ ಯುವತಿಯನ್ನು ಹಾಡಹಗಲೇ ನಡುರಸ್ತೆಯಲ್ಲಿ ತಲವಾರಿನಿಂದ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ಚೇತನ್‌ನನ್ನು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.ಪ್ರಾಥಮಿಕ ಮಾಹಿತಿಯಂತೆ, ಚೇತನ್ ಮತ್ತು ಲಾವಣ್ಯ ದೂರದ ಸಂಬಂಧಿಕರಾಗಿದ್ದು, ಚೇತನ್ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಯುವತಿ ಪ್ರೀತಿಯನ್ನು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಆರೋಪಿ ಈ […]