ಆಳ್ವಾಸ್ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಕೃತ ಅನುಮತಿ: 150 ಎಂಬಿಬಿಎಸ್ ಸೀಟುಗಳಿಗೆ ಅವಕಾಶ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷೆಯ ವೈದ್ಯಕೀಯ ಶಿಕ್ಷಣ ಯೋಜನೆಗೆ ಮಹತ್ವದ ಮೈಲಿಗಲ್ಲು ದೊರೆತಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗ 2026–27ನೇ ಶೈಕ್ಷಣಿಕ ಸಾಲಿನಿಂದ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರಕ್ಕೆ 150 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಧಿಕೃತ ಅನುಮೋದನೆಯನ್ನು ನೀಡಿದೆ.ಮೂಡುಬಿದಿರೆಯ ಮಿಜಾರಿನಲ್ಲಿ ಸ್ಥಾಪನೆಯಾಗಿರುವ ಆಳ್ವಾಸ್ ವೈದ್ಯಕೀಯ ಕಾಲೇಜು, ವೈದ್ಯಕೀಯ ಶಿಕ್ಷಣ, ಅತ್ಯಾಧುನಿಕ ಆರೋಗ್ಯ ಸೇವೆ ಹಾಗೂ ಸಂಶೋಧನೆಯನ್ನು ಸಮನ್ವಯಗೊಳಿಸುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಲಿದೆ. ಅತ್ಯಾಧುನಿಕ ಮೂಲಸೌಕರ್ಯ, ಸುಸಜ್ಜಿತ ಪ್ರಯೋಗಾಲಯಗಳು, ಆಸ್ಪತ್ರೆ ಸೌಲಭ್ಯಗಳು ಹಾಗೂ ಅನುಭವಿ ಬೋಧಕ ವರ್ಗದೊಂದಿಗೆ […]
ಟೈ ಧರಿಸದಿದ್ದಕ್ಕೆ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ರು, ಇಂಡಿಗೋ ನಲ್ಲಾದ ಕಹಿ ಘಟನೆ ಬಿಚ್ಚಿಟ್ಟ ಮಾಜಿ ಉದ್ಯೋಗಿ, ಹೀಗೂ ದುಡಿಸಿಕೊಳ್ತಾರಾ ಎಂದು ಶಾಕ್ ಆದ ನೆಟ್ಟಿಗರು!

ಬೆಂಗಳೂರು: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಗ್ರೌಂಡ್ ಸ್ಟಾಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ಜಂಶೀದ್ ವೈ., ಸಂಸ್ಥೆಯಲ್ಲಿನ “ಮಾನವೀಯತೆ ಇಲ್ಲದ ಕೆಲಸದ ಸಂಸ್ಕೃತಿ”ಯಿಂದಲೇ ತಮ್ಮ ಕನಸಿನ ಉದ್ಯೋಗ ತೊರೆಯಬೇಕಾಯಿತು ಎಂದು ಆರೋಪಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಜಂಶೀದ್, ಕೇವಲ ಟೈ ಧರಿಸದೆ ಕೆಲಸಕ್ಕೆ ಬಂದಿದ್ದಕ್ಕಾಗಿ ತಮ್ಮನ್ನು ಸಾರ್ವಜನಿಕವಾಗಿ ಅವಮಾನ ಮಾಡಲಾಗಿದ್ದು, […]
ಕೋಟ ಮೂರ್ತೆದಾರರ ಸಹಕಾರಿ ಸಂಘ ನಿ. ಕೋಟ ಇವರ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣು ಇವರಿಗೆ ಪ್ರಾಜೆಕ್ಟರ್ ಕೊಡುಗೆ

ಕೋಟ ಮೂರ್ತೆದಾರರ ಸಹಕಾರಿ ಸಂಘ ನಿ. ಕೋಟ ಇವರ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣು ಇವರಿಗೆ ಪ್ರಾಜೆಕ್ಟರ್ ಕೊಡುಗೆಯನ್ನು ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀ ನಾರಾಯಣ, ಮುಖ್ಯ ಶಿಕ್ಷಕಿ ಗ್ರೇಸಿ ಬಾಂಜಿ, ಕೋಟ ಮೂರ್ತೆದಾರರ ಸಹಕಾರಿ ಸಂಘದ ಸಿಇಓ ಜಗದೀಶ್ ಕೆಮ್ಮಣ್ಣು, ಶಾಖಾ ವ್ಯವಸ್ಥಾಪಕರಾದ ಉದಯ ಪೂಜಾರಿ, ನಿರ್ದೇಶಕರಾದ ಪ್ರಭಾವತಿ ಡಿ ಬಿಲ್ಲವ, ಶಾಲಾ ಹಿತರಕ್ಷಣಾ ಸಮಿತಿಯ […]
ಮದ್ಯ ಸೇವನೆಯಲ್ಲಿ ಕರ್ನಾಟಕ ಟಾಪ್, ಕುಸಿಯುತ್ತಿದೆ ಯುವಜನರ ಆರೋಗ್ಯ, ಮಾನಸಿಕ ನೆಮ್ಮದಿ! ಅಧ್ಯಯನ ಬಿಚ್ಚಿಟ್ಟ ಆತಂಕಕಾರಿ ಸಂಗತಿ!

ಬೆಂಗಳೂರು: ದೇಶದಲ್ಲಿ ತಲಾ ಮದ್ಯ ಸೇವನೆ ಪ್ರಮಾಣ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಪ್ರಮುಖ ಸ್ಥಾನದಲ್ಲಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5) ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ 9.1 ಲೀಟರ್ ಮದ್ಯ ಸೇವಿಸುತ್ತಿದ್ದು, ಇದು ದೇಶದ ಸರಾಸರಿ 6.4 ಲೀಟರ್ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.ಆಸಕ್ತಿಕರ ಸಂಗತಿಯೆಂದರೆ, ರಾಜ್ಯದ ಕೇವಲ ಶೇ.11ರಷ್ಟು ಜನರು ಮಾತ್ರ ಮದ್ಯ ಸೇವಿಸುತ್ತಾರೆ. ಆದರೆ ಮದ್ಯಪಾನ ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿರುವುದು ತಜ್ಞರ ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ರಾಜ್ಯಗಳಲ್ಲೇ ಹೆಚ್ಚಿನ […]
ಕಲ್ಯಾಣಪುರ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ” ಕ್ರಿಯೇಟಿವ್ ಸಮಾಗಮ ” ಕಾರ್ಯಕ್ರಮ.

ಉಡುಪಿ – ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ‘ಕ್ರಿಯೇಟಿವ್ ಸಮಾಗಮ’ ಎಂಬ ಶೀರ್ಷಿಕೆಯಡಿ ದಿನಾಂಕ 15-07-2026 ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕ್ರಿಯೇಟಿವ್ ಸಂಸ್ಥೆ ಬರಿ ವಿದ್ಯೆ ಕಲಿಸುವುದು ಅಷ್ಟೇ ಅಲ್ಲ ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಸಂಸ್ಕಾರವನ್ನು ಕಲಿಸುತ್ತದೆ ಎಂದು ಕ್ರಿಯೇಟಿವ್ ಸಹ ಸಂಸ್ಥಾಪಕರಾದ ಗಣಪತಿ ಭಟ್ ಹೇಳಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಓದಿ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ […]