ನೀವು ಗಂಡು ಮಗುವಿನ ಪೋಷಕರೇ? ಜೀವನದಲ್ಲಿ ಗೆಲ್ಲಲು ಈ ವಿಷಯಗಳನ್ನು ತಪ್ಪದೇ ಕಲಿಸಿ!

ಗಂಡು ಮಗುವಿನ ತಂದೆ, ತಾಯಿಯಾಗಿ ಮಗನಿಗೆ ಉತ್ತಮ ಶಿಕ್ಷಣ, ಉತ್ತಮ ಉದ್ಯೋಗ ಕೊಡಿಸುವ ಕನಸು ಎಲ್ಲರಿಗೂ ಇರುತ್ತದೆ. ಆದರೆ ಅದಕ್ಕಿಂತ ಮುಖ್ಯವಾದದ್ದು ಮಹಿಳೆಯರನ್ನು ಗೌರವಿಸುವ, ಜವಾಬ್ದಾರಿಯುತ, ಸಂವೇದನಾಶೀಲ ಮತ್ತು ಉತ್ತಮ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಯಾಗಿ ಬೆಳೆಸುವುದು. ಇಂತಹ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಕಲಿಸಿದರೆ, ಮುಂದಿನ ಜೀವನದಲ್ಲಿ ಆತ ಉತ್ತಮ ಮಗ, ಸ್ನೇಹಿತ, ಪತಿ, ತಂದೆ ಮತ್ತು ನಾಗರಿಕನಾಗಬಹುದು. ಭಾವನೆಗಳನ್ನು ಮರೆಮಾಚಬಾರದು “ಗಂಡಸರು ಅಳಬಾರದು” ಎಂಬ ಕಲ್ಪನೆಯಿಂದ ದೂರವಿರಿ. ದುಃಖ, ಭಯ, ಆತಂಕ ಅಥವಾ ಒತ್ತಡವನ್ನು ಹಂಚಿಕೊಳ್ಳುವುದು ಸಹಜ. ಕೋಪ […]
ಈ ಬಾರಿ ಮಳೆ ಕೈಕೊಟ್ಟಿದ್ಯಾಕೆ? ಎಲ್ ನಿನೋ ರಹಸ್ಯ ಮತ್ತು ಅದರ ಪರಿಣಾಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಈ ಬಾರಿ ಮುಂಗಾರು ಆರಂಭವಾದರೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಉತ್ತಮ ಮಳೆಯಾಗಿದ್ದರೆ, ಒಳನಾಡಿನ ಅನೇಕ ಪ್ರದೇಶಗಳು ಮಳೆ ಕೊರತೆಯನ್ನು ಎದುರಿಸುತ್ತಿವೆ. ಹೀಗಾಗಿ ರೈತರು, ನೀರಾವರಿ ಹಾಗೂ ಕುಡಿಯುವ ನೀರಿನ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಈ ವರ್ಷ ಮಳೆ ಕಡಿಮೆಯಾಗಲು ಕಾರಣಗಳೇನು? ಎಲ್ ನಿನೋ (El Niño) ಎಂದರೇನು? ಅದರ ಪರಿಣಾಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಎಲ್ ನಿನೋ ಎಂದರೇನು? ಎಲ್ ನಿನೋ ಎಂಬುದು […]
ಟೈಮಿಂಗ್ ವಿಚಾರಕ್ಕೆ ಬಸ್‌ನಲ್ಲೇ ರಾಡ್ ಹಿಡಿದು ಮಾರಾಮಾರಿ; ಸುಮೋಟೋ ಪ್ರಕರಣ ದಾಖಲು

ಉಪ್ಪಿನಂಗಡಿ: ಖಾಸಗಿ ಬಸ್‌ಗಳ ಟೈಮಿಂಗ್ ವಿಚಾರದಲ್ಲಿ ಆರಂಭವಾದ ವಾಗ್ವಾದ, ಪ್ರಯಾಣಿಕರ ಸಮ್ಮುಖದಲ್ಲೇ ಬಸ್‌ನೊಳಗೆ ಮಾರಾಮಾರಿಗೆ ತಿರುಗಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ಇಬ್ಬರು ಖಾಸಗಿ ಬಸ್ ನಿರ್ವಾಹಕರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಜುಲೈ 14ರಂದು ಉಪ್ಪಿನಂಗಡಿಯಿಂದ ಮಂಗಳೂರಿಗೆ ಸಂಚರಿಸುವ ಅರಫಾ ಮತ್ತು ಲಕ್ಷ್ಮೀ ಬಸ್‌ಗಳ ನಿರ್ವಾಹಕರ ನಡುವೆ ಸಂಜೆ ವೇಳೆಯ ಟೈಮಿಂಗ್ ವಿಚಾರವಾಗಿ ಜಗಳ ಉಂಟಾಗಿದೆ. ಈ ವೇಳೆ ಅರಫಾ ಬಸ್‌ನ ನಿರ್ವಾಹಕ ನೌಶಾದ್ ಕಬ್ಬಿಣದ ರಾಡ್ ಹಿಡಿದು ಪ್ರಯಾಣಿಕರು ಕುಳಿತಿದ್ದ ಲಕ್ಷ್ಮೀ ಬಸ್‌ನೊಳಗೆ ನುಗ್ಗಿ, […]
ಶಿಕ್ಷಕರಾಗಲು ಬಯಸುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್, 15 ಸಾವಿರ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಚಾಲನೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಕರಡು ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಒಟ್ಟು 15,000 ಶಿಕ್ಷಕರ ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ ಭಾಗಕ್ಕೆ 6,905 ಹುದ್ದೆಗಳು ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ 8,095 ಹುದ್ದೆಗಳು ಮೀಸಲಿರಿಸಲಾಗಿದೆ. ಇತರೆ ಜಿಲ್ಲೆಗಳಲ್ಲಿನ ಹುದ್ದೆಗಳ ವಿವರ: ಕಲ್ಯಾಣ ಕರ್ನಾಟಕ […]
ರಂಗಭೂಮಿ ಉಡುಪಿ ವತಿಯಿಂದ ವಂದೇ ಮಾತರಂ 150 ನೇ ಸಂಭ್ರಮಾಚರಣೆ

ಉಡುಪಿ: ವಂದೇ ಮಾತರಂ ದೇಶದಲ್ಲಿ ನಡೆದು ಬಂದ ಕ್ಷಣಗಳನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ವಂದೇ ಮಾತರಂ ಗೆ ರಾಷ್ಟ್ರಗೀತೆ ಸಮನಾದ ಪ್ರಾಮುಖ್ಯತೆ ಸಿಕ್ಕಿರುವುದು ಸಂತೋಷ ತರೋ ವಿಚಾರ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬುಧವಾರ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜು ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಕಾರದಲ್ಲಿ ವಂದೇ ಮಾತರಂನ 150 ರ ಸಂಭ್ರಮಾಚರಣೆ ಸಂದರ್ಭದಲ್ಲಿ ಕವಿ ಚಕ್ರವರ್ತಿ ಕಾಳಿದಾಸ ಜಯಂತಿ ಮೂಲಕ ಹಮ್ಮಿಕೊಂಡ ಯುವ […]