ರಾಮಾಯಣ ಟ್ರೇಲರ್‌ಗೆ ದಿನಾಂಕ ಫಿಕ್ಸ್; ಜುಲೈ 24ಕ್ಕೆ ಗ್ರ್ಯಾಂಡ್ ರಿಲೀಸ್, ಯಶ್-ರಣಬೀರ್-ಸಾಯಿ ಪಲ್ಲವಿ ನಟನೆಗೆ ಅಭಿಮಾನಿಗಳ ಕಾತರ

ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ಜುಲೈ 24ರಂದು ವಿಶ್ವಾದ್ಯಂತ ಏಕಕಾಲಕ್ಕೆ ಟ್ರೇಲರ್ ಬಿಡುಗಡೆಯಾಗಲಿದ್ದು, ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಬಾಲಿವುಡ್ ನಟ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ದೇಶಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದೆ. ಟ್ರೇಲರ್ ಬಿಡುಗಡೆಯ ಕುರಿತ ಪೋಸ್ಟ್ ಹಂಚಿಕೊಂಡಿರುವ ಚಿತ್ರತಂಡ, ಜುಲೈ 24ರಂದು […]

ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್‌ ರಚನೆ ! ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ

ಉಡುಪಿ: ರಾಜ್ಯ ಸರ್ಕಾರ ರಚಿಸಿರುವ ಸ್ಪೆಷಲ್ ಆಕ್ಷನ್ ಫೋರ್ಸ್ (SAF) ಕುರಿತು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, “ಎಸ್‌ಎಎಫ್ ವಿಶೇಷ ಕಾರ್ಯಪಡೆ ಯಾಕೆ? ಈ ವಿಶೇಷ ಪೊಲೀಸ್ ಕಾರ್ಯಪಡೆಗೆ ಕಾನೂನಿನಲ್ಲಿ ಯಾವ ಮಾನ್ಯತೆ ಇದೆ?” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಕಳೆದ ವರ್ಷದ ಜೂನ್ ತಿಂಗಳಲ್ಲಿ ಸರ್ಕಾರ ಸ್ಪೆಷಲ್ ಆಕ್ಷನ್ ಫೋರ್ಸ್ (SAF) ಅನ್ನು ರಚಿಸಿತ್ತು. ನಕ್ಸಲ್ ನಿಗ್ರಹಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಎಎನ್‌ಎಫ್ (Anti Naxal Force) […]

ಪಿರಿಯಡ್ಸ್ ಸಮಯದಲ್ಲಿ ಪ್ಯಾಡ್ ಅಥವಾ ಮೆನಸ್ಟ್ರುವಲ್ ಕಪ್? ಯಾವುದು ಉತ್ತಮ?

ಪ್ರತಿ ಮಹಿಳೆಯೂ ಪಿರಿಯಡ್ಸ್ ಸಮಯದಲ್ಲಿ ಆರಾಮದಾಯಕ, ಸುರಕ್ಷಿತ ಮತ್ತು ಆರೋಗ್ಯಕರ ಆಯ್ಕೆಯನ್ನು ಹುಡುಕುತ್ತಾರೆ. ಬಹುತೇಕರು ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಮೆನಸ್ಟ್ರುವಲ್ ಕಪ್ ಬಳಕೆಯೂ ಹೆಚ್ಚುತ್ತಿದೆ. ಹಾಗಾದರೆ ಈ ಎರಡರಲ್ಲಿ ಯಾವುದು ಉತ್ತಮ? ಎರಡಕ್ಕೂ ತಮ್ಮದೇ ಆದ ಪ್ರಯೋಜನಗಳು ಮತ್ತು ಕೆಲವು ಮಿತಿಗಳಿವೆ. ನಿಮ್ಮ ಜೀವನಶೈಲಿ, ರಕ್ತಸ್ರಾವದ ಪ್ರಮಾಣ ಹಾಗೂ ವೈಯಕ್ತಿಕ ಅನುಕೂಲತೆಗೆ ತಕ್ಕಂತೆ ಸೂಕ್ತ ಆಯ್ಕೆಯನ್ನು ಮಾಡಬಹುದು. ಸ್ಯಾನಿಟರಿ ಪ್ಯಾಡ್ ಎಂದರೇನು? ಪಿರಿಯಡ್ಸ್ ವೇಳೆ ಹೊರಬರುವ ರಕ್ತವನ್ನು ಹೀರಿಕೊಳ್ಳಲು ಬಳಸುವ ಉತ್ಪನ್ನವೇ ಸ್ಯಾನಿಟರಿ ಪ್ಯಾಡ್. […]

ಮುಕ್ಕದಲ್ಲಿ ಅಕ್ರಮವಾಗಿ ನೆಲೆಸಿದ್ದ 8 ಬಾಂಗ್ಲಾದೇಶದ ಪ್ರಜೆಗಳ ಬಂಧನ

ಸುರತ್ಕಲ್: ಮುಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಂದಿ ಅಕ್ರಮ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಮುಹಮ್ಮದ್ ಮುಖಾರ್ ಅಲಿ (36), ಮುಹಮ್ಮದ್ ರಾಕಿಬುರ್ ಹುಸೈನ್ (44), ಮುಹಮ್ಮದ್ ಅಝರುಲ್ ಇಸ್ಲಾಂ (36), ಮುಹಮ್ಮದ್ ಝದ್ ಹುಸನ್ (18), ಮುಹಮ್ಮದ್ ಬಿಲಾಲ್ ಹುಸೈನ್ (36), ಮುಹಮ್ಮದ್ ಹಾಸಿಬುಲ್ ಹಸನ್ ಶನ್ನೊ (37), ಮುಹಮ್ಮದ್ ಸಮೀವುಲ್ ಹಸನ್ (23) ಹಾಗೂ ಮುಹಮ್ಮದ್ ಸೈಬುರಹ್ಮಾನ್ ಎಂದು ಗುರುತಿಸಲಾಗಿದೆ. ಮಂಗಳೂರು ನಗರ ಪೊಲೀಸ್ […]

ಕಾಪು: ನಿಸರ್ಗ ಫ್ರೆಶ್ ಕೋಲ್ಡ್ ಪ್ರೆಸ್ಡ್ ಆಯಿಲ್ ಮಿಲ್ ಫ್ಯಾಕ್ಟರಿ ಔಟ್‌ಲೆಟ್‌ ನಾಳೆ (ಜು.12) ಅದ್ದೂರಿ ಶುಭಾರಂಭ

ಉಡುಪಿ: ನಿಸರ್ಗ ಫ್ರೆಶ್ ಕೋಲ್ಡ್ ಪ್ರೆಸ್ಡ್ ಆಯಿಲ್ ಮಿಲ್ ಫ್ಯಾಕ್ಟರಿ ಔಟ್‌ಲೆಟ್‌ನ ಉದ್ಘಾಟನಾ ಸಮಾರಂಭವು ಜುಲೈ 12ರಂದು ಬೆಳಿಗ್ಗೆ 10.30ಕ್ಕೆ ಕಾಪು ದಂಡತೀರ್ಥ ಶಾಲೆ ಸಮೀಪದ ಪ್ರೆಸ್ಟೀಜ್ ಬಿಲ್ಡಿಂಗ್‌ನಲ್ಲಿ ನಡೆಯಲಿದೆ. ಶ್ರೀ ಹಳೆ ಮಾರಿಗುಡಿ ದೇವಸ್ಥಾನದ ಮಾಜಿ ವ್ಯವಸ್ಥಾಪಕ ಟ್ರಸ್ಟಿ ಕೆ. ಶ್ರೀಧರ್ ಶೆಣೈ ಅವರು ನೂತನ ಔಟ್‌ಲೆಟ್‌ನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಸಮಾಜಸೇವಕ ಸೂರಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿಸರ್ಗ ಫ್ರೆಶ್ ಆಯಿಲ್ಸ್ […]