ಉಡುಪಿ: ಅಂಬಲಪಾಡಿ ಶ್ರೀಹರೀ ನೇತ್ರಾಲಯದಲ್ಲಿ ಉದ್ಯೋಗಾವಕಾಶ

ಉಡುಪಿ: ಕಾರ್ತಿಕ್ ಎಸ್ಟೇಟ್ ಅಂಬಲಪಾಡಿಯಲ್ಲಿರುವ ಶ್ರೀಹರೀ ನೇತ್ರಾಲಯದಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ. Optometry ಹುದ್ದೆಗೆ ಎರಡು ಜನ ಬೇಕಾಗಿದ್ದಾರೆ. ಕಣ್ಣು ಟೆಸ್ಟ್ ಮಾಡುವ ಪರಿಣಿತರು ಸಂಪರ್ಕಿಸಬಹುದು. 9141699303
ಕಾರ್ಕಳ ಕ್ರೈಸ್ಟ್ ಕಿಂಗ್: ಪತ್ರಿಕಾ ದಿನಾಚರಣೆ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೂಡಬಿದ್ರೆಯ ಆಳ್ವಾಸ್ ಪದವಿ ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿಭಾಗ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ಅವರು ಆಗಮಿಸಿದ್ದರು. ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು “ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶ ಹಾಗೂ ಉನ್ನತ ಸಾಧನೆಗೆ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಅದನ್ನು ಬಳಸಿಕೊಂಡು ಸಮಾಜದಲ್ಲಿ ಉನ್ನತಿಗೇರಬೇಕು. ಪತ್ರಿಕೆಗಳಲ್ಲಿ ಬರುವ ಸುದ್ದಿಗಳು ಅತ್ಯಂತ ವಿಶ್ವಾಸಾರ್ಹವಾಗಿರುತ್ತವೆ. ಪತ್ರಿಕೆಗಳನ್ನು ಓದುವುದರಿಂದ […]
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಈ ವರ್ಷ ರೂ.3,06,30,000 ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ: ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್‍ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಕಳ, ಉಡುಪಿ, ಮಣಿಪಾಲ ಹಾಗೂ ಅಜೆಕಾರು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಂತದ ವಿದ್ಯಾರ್ಥಿ ವೇತನ ರೂ. 1 ಕೋಟಿ 44 ಲಕ್ಷವನ್ನು 29.05.2026 ರಂದು ಕಾರ್ಕಳ ಜ್ಞಾನಸುಧಾದಲ್ಲಿ ಹಾಗೂ ರೂ. 67 ಲಕ್ಷದ 80 ಸಾವಿರವನ್ನು 03.06.2026 ರಂದು ಅಜೆಕಾರು ಜ್ಞಾನಸುಧಾದಲ್ಲಿ ವಿತರಿಸಲಾಗಿದ್ದು, ಇದೀಗ ದ್ವಿತೀಯ ಹಂತದ ವಿದ್ಯಾರ್ಥಿವೇತನವಾಗಿ ರೂ.55 ಲಕ್ಷದ 30 ಸಾವಿರವನ್ನು 13.07.2026 ರಂದು ಮಣಿಪಾಲ ಜ್ಞಾನಸುಧಾದಲ್ಲಿ ಹಾಗೂ […]
ಹಾಡು ನಿಲ್ಲಿಸಿದ ಗಾನಕೋಗಿಲೆ ಎಸ್ ಜಾನಕಿ: ಕಳಚಿದ ಪರಂಪರೆಯ ಸಂಗೀತ ಕೊಂಡಿ

ಮೈಸೂರು: ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಖ್ಯಾತ ಗಾಯಕಿ ಎಸ್.ಜಾನಕಿ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಹಿನ್ನೆಲೆಯಲ್ಲಿ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಅವರು ಮೃತಪಟ್ಟಿರುವುದಾಗಿ ಮೂಲಗಳಿಂದ ತಿಳಿದುಂದಿದೆ. 1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದ ಎಸ್. ಜಾನಕಿ, ತಮ್ಮ ಮೂರನೆಯ ವಯಸ್ಸಿನಲ್ಲೇ ನಾದಸ್ವರ ವಿದ್ವಾನ್ ಶ್ರೀ ಪೈದಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ಬಳಿಕ ತೆಲುಗು, ತಮಿಳು, […]
ಮಧುಮೇಹ,ಬಿಪಿ ಸೇರಿದಂತೆ 39 ಅಗತ್ಯ ಔಷಧಿಗಳ ಬೆಲೆ ಇಳಿಕೆ, ಗ್ರಾಹಕರಿಗೆ ಕೊಂಚ ರಿಲೀಫ್

ನವದೆಹಲಿ: ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ವಿವಿಧ ದೀರ್ಘಕಾಲೀನ ಕಾಯಿಲೆಗಳ ಚಿಕಿತ್ಸೆಗೆ ಬಳಸುವ 39 ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ಆದೇಶ ಹೊರಡಿಸಿದೆ. ಈ ಕ್ರಮದಿಂದ ಅಗತ್ಯ ಔಷಧಿಗಳ ಬೆಲೆ ಕೆಲವು ಸಂದರ್ಭಗಳಲ್ಲಿ ಕಡಿಮೆಯಾಗುವ ಸಾಧ್ಯತೆ ಇದ್ದು, ಲಕ್ಷಾಂತರ ರೋಗಿಗಳಿಗೆ ಆರ್ಥಿಕ ನಿರಾಳತೆ ಸಿಗುವ ನಿರೀಕ್ಷೆಯಿದೆ. ಈ ನಿರ್ಧಾರವನ್ನು ಡ್ರಗ್ಸ್ (ಪ್ರೈಸ್ ಕಂಟ್ರೋಲ್) ಆದೇಶ–2013 (DPCO-2013) ಅಡಿಯಲ್ಲಿ ಜಾರಿಗೆ ತರಲಾಗಿದೆ. […]