ಊಟದ ಬಳಿಕ ಚಹಾ ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ರೆ ಈ ಮಾಹಿತಿ ನಿಮಗೆ ತಿಳಿದಿರಲಿ

ಭಾರತದಲ್ಲಿ ಹೆಚ್ಚಿನ ಜನರು ದಿನವನ್ನು ಒಂದು ಕಪ್ ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸುತ್ತಾರೆ. ಕೆಲವರಿಗೆ ಬೆಳಿಗ್ಗೆ ಟೀ ಕುಡಿಯದೇ ದಿನವೇ ಶುರುವಾಗುವುದಿಲ್ಲ. ಇದೇ ರೀತಿ, ಕೆಲವರು ಊಟದ ನಂತರವೂ ಒಂದು ಕಪ್ ಚಹಾ ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಊಟವಾದ ತಕ್ಷಣ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ. ಇಲ್ಲಿದೆ ಮಹಿತಿ. ಹಲವು ತಜ್ಞ ವೈದ್ಯರ ಪ್ರಕಾರ, ಊಟದ ತಕ್ಷಣ ಚಹಾ ಸೇವಿಸುವುದು ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು. ನಾವು […]
ಫಿಫಾ ವಿಶ್ವಕಪ್‌ನಲ್ಲಿ ಭಾರತ ತಂಡ ಇಲ್ಲದಿದ್ದರೇನಂತೆ: ಇಲ್ಲಿದ್ದಾರೆ ಆಟದಲ್ಲಿ ಮಿಂಚು ಹರಿಸುವ ಭಾರತೀಯ ಮೂಲದ ನಾಲ್ವರು ಆಟಗಾರರು!

ಫುಟ್ಬಾಲ್‌ನ ಅತ್ಯಂತ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ FIFA World Cup 2026 ಟೂರ್ನಿಯ ನಾಕೌಟ್ ಹಂತದ ಪಂದ್ಯಗಳು ಆರಂಭವಾಗುತ್ತಿದ್ದಂತೆ ಕುತೂಹಲ ಹೆಚ್ಚುತ್ತಿದೆ. ಭಾರತ ತಂಡ ಈ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆಯದಿದ್ದರೂ, ಭಾರತೀಯ ಮೂಲದ ಕೆಲವು ಆಟಗಾರರು ವಿವಿಧ ರಾಷ್ಟ್ರಗಳ ಪರ ಕಣಕ್ಕಿಳಿದಿರುವುದು ಭಾರತೀಯ ಫುಟ್ಬಾಲ್ ಅಭಿಮಾನಿಗಳಲ್ಲಿ ವಿಶೇಷ ಆಸಕ್ತಿ ಮೂಡಿಸಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಮೂಲ ಹೊಂದಿರುವ ನಾಲ್ವರು ಆಟಗಾರರು ವಿವಿಧ ದೇಶಗಳ ಪರ ಆಡುತ್ತಿದ್ದಾರೆ. ಅವರಲ್ಲಿ ಸರ್ಪ್ರೀತ್ ಸಿಂಗ್ (ನ್ಯೂಜಿಲೆಂಡ್): (ನ್ಯೂಜಿಲೆಂಡ್), ತಪ್ಪಿನ್ […]
ಹೈದರಾಬಾದ್ ರಸ್ತೆಗೆ ತನ್ನ ಹೆಸರು ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಟ್ರಂಪ್!

ನವದೆಹಲಿ: ಭಾರತದ ಹೈದರಾಬಾದ್‌ನಲ್ಲಿ ಅಮೆರಿಕ ಕಾನ್ಸುಲೇಟ್‌ಗೆ ಹೊಂದಿಕೊಂಡಿರುವ ರಸ್ತೆಗೆ ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಎಂದು ಹೆಸರಿಟ್ಟಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ Donald Trump ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, “ಭಾರತದ ಹೈದರಾಬಾದ್‌ನ ಹೊಸ ಡೊನಾಲ್ಡ್ ಟ್ರಂಪ್ ಅವೆನ್ಯೂ. ಈ ರೀತಿಯ ಗೌರವ ಪಡೆದ ಮೊದಲ ಅಮೆರಿಕದ ಅಧ್ಯಕ್ಷ ನಾನು. ಧನ್ಯವಾದಗಳು,” ಎಂದು ಬರೆದುಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ ಮಲ್ಲಿ ಭಟ್ಟಿ ಹಾಗೂ ಭಾರತದಲ್ಲಿನ ಅಮೆರಿಕದ ರಾಯಭಾರಿ ಅವರು ರಸ್ತೆ […]
ಪರ್ಕಳ: ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ- ತಪ್ಪಿದ ಭಾರೀ ಅನಾಹುತ

ಉಡುಪಿ: ಪರ್ಕಳದ ಕೆಳಪರ್ಕಕಳ ಹೆದ್ದಾರಿಯಲ್ಲಿ (NH169A) ಕೆನರಾ ಬ್ಯಾಂಕಿನ ತಿರುವಿನಲ್ಲಿ ಕಂಟೇನರ್ ಲಾರಿಯೊಂದು ಪಲ್ಟಿಯಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಆತ್ರಾಡಿಯಿಂದ ಪೇಪರ್ ಬಾಕ್ಸ್ ಗಳನ್ನು ತುಂಬಿ ಹುಬ್ಬಳ್ಳಿ ಕಡೆ ಪ್ರಯಾಣ ಬೆಳೆಸಿದ್ದ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಪರ್ಕಳದ ಈ ಪ್ರದೇಶದಲ್ಲಿ ಬೃಹತ್ ವಾಹನಗಳು ಕೆಟ್ಟು ನಿಲ್ಲುವುದು, ಅಪಘಾತಗಳು ನಡೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಲಾರಿಯಿಂದ ಡೀಸೆಲ್ ಸೋರಿಕೆಯಾಗಿದೆ. ತತ್ ಕ್ಷಣ ಕಾರ್ಯಾಚರಣೆ ನಡೆಸಿ ಲಾರಿಯನ್ನು ಮೇಲಕ್ಕೆತ್ತಲಾಗಿದೆ. ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ಎರಡು ದಿನಗಳ ಹಿಂದಷ್ಟೇ […]