ಉದ್ಯಾವರ ನದಿಯಲ್ಲಿ ಬ್ಯಾಂಕ್ ಉದ್ಯೋಗಿಯ ಶವ ಪತ್ತೆ

ಉಡುಪಿ: ಉದ್ಯಾವರ ನದಿಯಲ್ಲಿ ಶನಿವಾರ ಬ್ಯಾಂಕ್ ಉದ್ಯೋಗಿಯೊಬ್ಬರ ಶವ ಪತ್ತೆಯಾಗಿದ್ದು, ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಉಡುಪಿಯ ಕೆನರಾ ಬ್ಯಾಂಕ್‌ನ ಉದ್ಯೋಗಿ ರಿಯಾಜ್ (43) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ರಿಯಾಜ್ ಅವರು ನದಿಯ ಬಳಿ ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದು, ಮುಳುಗಿ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ಮಾಹಿತಿ ತಿಳಿದು ಕಾಪು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಶವವನ್ನು ಮರಣೋತ್ತರ […]
ಪೋಷಕರೇ ಮಕ್ಕಳಿಂದ ಎಲ್ ಇ ಡಿ ಬಲ್ಬ್ ದೂರವಿರಿಸಿ: ಆಟವಾಡುತ್ತಿದ್ದಾಗ ಎಲ್‌ಇಡಿ ಬಲ್ಬ್ ನುಂಗಿದ 8 ತಿಂಗಳ ಮಗು!

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಎಂಟು ತಿಂಗಳ ಮಗು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಎಲ್‌ಇಡಿ ಬಲ್ಬ್ ನುಂಗಿದ ಘಟನೆ ನಡೆದಿದ್ದು, ಪೋಷಕರ ಸಮಯೋಚಿತ ನಿರ್ಧಾರ ಮತ್ತು ವೈದ್ಯರ ತ್ವರಿತ ಚಿಕಿತ್ಸೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಮಾಹಿತಿಯ ಪ್ರಕಾರ, ಮನೆಯಲ್ಲೇ ಆಟವಾಡುತ್ತಿದ್ದ ವೇಳೆ ಮಗು ಸಣ್ಣ ಗಾತ್ರದ ಎಲ್‌ಇಡಿ ಬಲ್ಬ್ ಅನ್ನು ಬಾಯಿಗೆ ಹಾಕಿಕೊಂಡು ನುಂಗಿದೆ. ಬಳಿಕ ಮಗು ನಿರಂತರವಾಗಿ ಅಳಲಾರಂಭಿಸಿದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ಆರೋಗ್ಯ ಪರೀಕ್ಷಿಸಿ ಎಕ್ಸ್-ರೇ […]
ಹಿರಿಯರ ಮಾರ್ಗದರ್ಶನ, ಕಿರಿಯರ ಹೋರಾಟದಿಂದ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮರಾಟಿ ಸಮುದಾಯದ ಹಿರಿಯ ಪ್ರಭುದ್ಧ ಮುಖಂಡರ ಸಭೆ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದ ಕುಂಜಾಲಿನ ‘ಸ್ನೇಹ ಕುಂಜ’ದಲ್ಲಿ ಇಂದು ನಡೆಯಿತು. ಈ ಸಭೆಯಲ್ಲಿ ಸಮಾಜದ ಅಭಿವೃದ್ಧಿ, ಸಮಸ್ಯೆ ಹಾಗೂ ಪರಿಹಾರಗಳ ವಿಚಾರಗಳನ್ನು ಮುಕ್ತಾವಾಗಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಎ.ಸುವರ್ಣ ರವರೊಂದಿಗೆ ಮಾತನಾಡಿದರು. ಸಂಸದರು ಕೇಂದ್ರದ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿಸಿ, […]
ಉದ್ಯೋಗಿಗಳಿಗೆ ದೊಡ್ಡ ಶಾಕ್ ಕೊಟ್ಟ ವೋಕ್ಸ್‌ವ್ಯಾಗನ್ ಕಾರು ಕಂಪೆನಿ: ಒಟ್ಟು1 ಲಕ್ಷ ಉದ್ಯೋಗ ಕಡಿತ, ನಾಲ್ಕು ಪ್ರಮುಖ ಉತ್ಪಾದನಾ ಘಟಕ ಬಂದ್!

ಬರ್ಲಿನ್: ಜರ್ಮನಿಯ ವಾಹನ ತಯಾರಿಕಾ ದೈತ್ಯ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿರುವ ವೋಕ್ಸ್‌ವ್ಯಾಗನ್ Volkswagen ವೆಚ್ಚ ಕಡಿತ ಮತ್ತು ಆರ್ಥಿಕ ಒತ್ತಡದಿಂದ ಹೊರಬರಲು 1 ಲಕ್ಷ ಉದ್ಯೋಗಿಗಳನ್ನು ಹಂತಹಂತವಾಗಿ ವಜಾಗೊಳಿಸುವ ನಿರ್ಧಾರಕ್ಕೆ ಬಂದಿದ್ದು. ಉದ್ಯೋಗಿಗಳಿಗೆ ಇದೊಂದು ದೊಡ್ಡ ಶಾಕ್ ನೀಡಿದೆ. ಜರ್ಮನಿಯಲ್ಲಿರುವ ತನ್ನ ನಾಲ್ಕು ಪ್ರಮುಖ ಉತ್ಪಾದನಾ ಘಟಕಗಳನ್ನು ಮುಚ್ಚಲು ಸಂಸ್ಥೆ ನಿರ್ಧರಿಸಿದೆ. ಕಂಪನಿಯ ಮೇಲ್ವಿಚಾರಣಾ ಮಂಡಳಿಯ ಸದಸ್ಯರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಜುಲೈ 9ರಂದು ನಡೆಯಲಿರುವ ಸಭೆಯಲ್ಲಿ ಈ ಪ್ರಸ್ತಾವನೆ […]
ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಬೆದರಿಕೆ !

ಉಡುಪಿ: ಐದು ದಿನಗಳ ಹಿಂದೆಯಷ್ಟೇ ಹುಸಿ ಬಾಂಬ್ ಬೆದರಿಕೆಗೆ ಈಡಾಗಿದ್ದ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಇಂದು ಮತ್ತೆ ಈಮೇಲ್ ಮೂಲಕ ಬೆದರಿಕೆ ಕರೆ ಬಂದಿದೆ. ಕಳೆದ ಬಾರಿ ಬಂದಿದ್ದ ಕರೆಗೆ ವಕೀಲರು ಮತ್ತು ಸಿಬ್ಬಂದಿ ಆತಂಕಕ್ಕೆ ಈಡಾಗಿದ್ದರು. ಪೊಲೀಸರು ಮತ್ತು ಶ್ವಾನದಳ ತೀವ್ರ ತಪಾಸಣೆ ನಡೆಸಿದ ಬಳಿಕ ಅದೊಂದು ಹುಸಿ ಬೆದರಿಕೆ ಎಂದು ಗೊತ್ತಾಗಿತ್ತು. ಇಂದು ಮತ್ತೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ತಪಾಸಣೆ ನಡೆಸುತ್ತಿದ್ದಾರೆ. ಆದರೆ ನ್ಯಾಯಾಲಯದ ಒಳಗಿನ ಕಲಾಪ ಸುಸೂತ್ರವಾಗಿ […]