ಹೈದರಾಬಾದ್‌ ರಸ್ತೆಗೆ ತನ್ನ ಹೆಸರು ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಟ್ರಂಪ್!

ನವದೆಹಲಿ: ಭಾರತದ ಹೈದರಾಬಾದ್‌ನಲ್ಲಿ ಅಮೆರಿಕ ಕಾನ್ಸುಲೇಟ್‌ಗೆ ಹೊಂದಿಕೊಂಡಿರುವ ರಸ್ತೆಗೆ ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಎಂದು ಹೆಸರಿಟ್ಟಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ Donald Trump ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, “ಭಾರತದ ಹೈದರಾಬಾದ್‌ನ ಹೊಸ ಡೊನಾಲ್ಡ್ ಟ್ರಂಪ್ ಅವೆನ್ಯೂ. ಈ ರೀತಿಯ ಗೌರವ ಪಡೆದ ಮೊದಲ ಅಮೆರಿಕದ ಅಧ್ಯಕ್ಷ ನಾನು. ಧನ್ಯವಾದಗಳು,” ಎಂದು ಬರೆದುಕೊಂಡಿದ್ದಾರೆ.

ಈ ವಾರದ ಆರಂಭದಲ್ಲಿ ಮಲ್ಲಿ ಭಟ್ಟಿ ಹಾಗೂ ಭಾರತದಲ್ಲಿನ ಅಮೆರಿಕದ ರಾಯಭಾರಿ ಅವರು ರಸ್ತೆ ನಾಮಫಲಕವನ್ನು ಅನಾವರಣಗೊಳಿಸಿದ ಸಂದರ್ಭದ ಚಿತ್ರಗಳನ್ನು ಸಹ ಹಂಚಿಕೊಂಡಿದ್ದರು.

ಹೊಸದಾಗಿ ನಾಮಕರಣಗೊಂಡಿರುವ ಡೊನಾಲ್ಡ್ ಟ್ರಂಪ್ ಅವೆನ್ಯೂ ರಸ್ತೆ, ಹೈದರಾಬಾದ್‌ನಲ್ಲಿರುವ ಪ್ರಮುಖ ಅಮೆರಿಕದ ತಂತ್ರಜ್ಞಾನ ಕಂಪನಿಗಳಾದ Microsoft, Google ಹಾಗೂ Amazon ಕಚೇರಿಗಳ ಸಮೀಪದಲ್ಲಿದೆ.

ತೆಲಂಗಾಣ ಸರ್ಕಾರದ ಪ್ರಕಾರ, ಈ ನಾಮಕರಣವು ಅಮೆರಿಕದೊಂದಿಗಿನ ಸ್ನೇಹ ಸಂಬಂಧಕ್ಕೆ ಗೌರವ ಸೂಚಿಸುವುದರ ಜೊತೆಗೆ, ಭಾರತ–ಅಮೆರಿಕ ಸಂಬಂಧಗಳಲ್ಲಿ ಹೈದರಾಬಾದ್ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಪ್ರತಿಬಿಂಬಿಸುತ್ತದೆ.