ಉಡುಪಿ: ಐದು ದಿನಗಳ ಹಿಂದೆಯಷ್ಟೇ ಹುಸಿ ಬಾಂಬ್ ಬೆದರಿಕೆಗೆ ಈಡಾಗಿದ್ದ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಇಂದು ಮತ್ತೆ ಈಮೇಲ್ ಮೂಲಕ ಬೆದರಿಕೆ ಕರೆ ಬಂದಿದೆ. ಕಳೆದ ಬಾರಿ ಬಂದಿದ್ದ ಕರೆಗೆ ವಕೀಲರು ಮತ್ತು ಸಿಬ್ಬಂದಿ ಆತಂಕಕ್ಕೆ ಈಡಾಗಿದ್ದರು.
ಪೊಲೀಸರು ಮತ್ತು ಶ್ವಾನದಳ ತೀವ್ರ ತಪಾಸಣೆ ನಡೆಸಿದ ಬಳಿಕ ಅದೊಂದು ಹುಸಿ ಬೆದರಿಕೆ ಎಂದು ಗೊತ್ತಾಗಿತ್ತು. ಇಂದು ಮತ್ತೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ತಪಾಸಣೆ ನಡೆಸುತ್ತಿದ್ದಾರೆ.
ಆದರೆ ನ್ಯಾಯಾಲಯದ ಒಳಗಿನ ಕಲಾಪ ಸುಸೂತ್ರವಾಗಿ ನಡೆಯುತ್ತಿದ್ದು ವಕೀಲರು ಸಹಿತ ನ್ಯಾಯಾಲಯ ಸಿಬ್ಬಂದಿ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.

















