ಮಣಿಪಾಲದಲ್ಲಿ ಡ್ರೀಮ್‌ಝೋನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್‌ ಮತ್ತು ಎಂಎಸ್ ಡಿಸಿ ಯಿಂದ ಜೂ.27 ರಂದು ರೆಸಿನ್ ಆರ್ಟ್ ವರ್ಕ್‌ಶಾಪ್: ಕ್ರಿಯಾಶೀಲತೆಗೆ ಇಲ್ಲಿದೆ ವೇದಿಕೆ.

ಮಣಿಪಾಲ: ಯುವಜನರಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಡ್ರೀಮ್‌ಝೋನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್ ಹಾಗೂ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ರೆಸಿನ್ ಆರ್ಟ್ ವರ್ಕ್‌ಶಾಪ್ ನ್ನುಜೂ. 27, ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್‌ನ ಎರಡನೇ ಮಹಡಿಯಲ್ಲಿರುವ ಡ್ರೀಮ್‌ಝೋನ್, ಎಂಎಸ್‌ಡಿಸಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. “Unleash Your Creativity” ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ರೆಸಿನ್ ಬಳಸಿ […]

ತಮಿಳುನಾಡಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಪ್ರತಿ ಮಗುವಿಗೂ 1 ಗ್ರಾಂ ಚಿನ್ನದ ಉಂಗುರ: ಯೋಜನೆಯ ಷರತ್ತುಗಳೇನು?

ಚೆನ್ನೈ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ತಮಿಳುನಾಡು ಸರ್ಕಾರವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ನವಜಾತ ಶಿಶುವಿಗೂ 1 ಗ್ರಾಂ ಚಿನ್ನದ ಉಂಗುರವನ್ನು ಉಚಿತವಾಗಿ ನೀಡುವ ‘ತೈಮಾಮನ್ ತಂಗ ಮೋತಿರಾಂ ತಿಟ್ಟಂ’ (Thai Maman Gold Ring Scheme) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದೆ. ತಮಿಳುನಾಡಿನಲ್ಲಿ ಶಾಶ್ವತವಾಗಿ ವಾಸಿಸುವ ಕುಟುಂಬಗಳ ಮಕ್ಕಳಿಗೆ ಈ ಯೋಜನೆ ಅನ್ವಯವಾಗಲಿದ್ದು, ಮುಖ್ಯಮಂತ್ರಿ ವಿಜಯ್ ಅವರ ಜನ್ಮದಿನವಾದ ಜೂನ್ 22ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದುರೈ C. […]

ಫಿಶ್ ಲವರ್ಸ್ ಗಮನಿಸಿ! ಮಳೆಗಾಲದಲ್ಲಿ ಮೀನು ಖರೀದಿಸುವಾಗ ಈ ಟಿಪ್ಸ್ ಫಾಲೋ ಮಾಡಿ

ಮಳೆಗಾಲ ಬಂತು ಅಂದರೆ ಬಿಸಿ ಬಿಸಿ ಮೀನು ಸಾಂಬಾರು, ಸುಕ್ಕ, ಫ್ರೈ ನೆನಪಾಗುವುದು ಸಹಜ. ಆದರೆ ಈ ಸಮಯದಲ್ಲಿ ಮೀನುಗಾರಿಕೆ ಚಟುವಟಿಕೆ ಕಡಿಮೆಯಾಗುವುದರಿಂದ ಮಾರುಕಟ್ಟೆಯಲ್ಲಿ ತಾಜಾ ಮೀನು ಸಿಗುವುದು ಕೆಲವೊಮ್ಮೆ ಸವಾಲಾಗುತ್ತದೆ. ಕೆಲ ವ್ಯಾಪಾರಿಗಳು ಹಳೆಯ ಮೀನುಗಳನ್ನು ಐಸ್‌ನಲ್ಲಿ ಇಟ್ಟು ತಾಜಾ ಮೀನು ಎಂದು ಮಾರಾಟ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾದರೆ ಫ್ರೆಶ್ ಮೀನು ಮತ್ತು ಹಳಸಿದ ಮೀನು ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸುವುದು? ಇಲ್ಲಿವೆ ಕೆಲವು ಸರಳ ಟಿಪ್ಸ್. ಮೀನಿನ ಕಣ್ಣುಗಳನ್ನು ಗಮನಿಸಿ ತಾಜಾ ಮೀನಿನ […]

ಸಾಮರ್ಥ್ಯ ಅಭಿವೃದ್ಧಿಗೆ ಸಂಘಟನೆಯ ಕಾರ್ಯಗಳು ಪೂರಕವಾಗಿರಲಿ: ಸಿ.ಇ.ಓ ಪ್ರತೀಕ್ ಬಾಯಲ್

ಉಡುಪಿ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯು ಅತ್ಯಂತ ಸವಾಲಿನ ಕಾರ್ಯನಿರ್ವಹಣಾ ಶೈಲಿಯನ್ನು ಹೊಂದಿದ್ದು, ಹೆಚ್ಚಿನ ಒತ್ತಡವನ್ನು ಹೊಂದಿರುವುದರಿಂದ ನಿರ್ವಹಣಾ ಕೌಶಲ್ಯವನ್ನು ಬೆಳೆಸಿಕೊಳ್ಳುವುದರೊಂದಿಗೆ ಸಂಘಟಿತವಾಗಿ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಕರೆ ನೀಡಿದರು. ಅವರು ಮಣಿಪಾಲದ ಟಿ ಟ್ರೀ ಹೋಟೆಲ್‌ನ ಸಭಾಂಗಣದಲ್ಲಿ ಜರುಗಿದ ಉಡುಪಿ ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಶಕ್ತಿಯುತ ಸಂಘಟನೆಯನ್ನು ಹೊಂದಿದ್ದಲ್ಲಿ ಕಾರ್ಯನಿರ್ವಹಣೆಯು ಸುಲಭವಾಗಿರುವುದರಿಂದ, ನಾಗರೀಕರ ನಾಡಿಮಿಡಿತವನ್ನು […]

ಜಿಲ್ಲೆಯ 0-5 ವರ್ಷದೊಳಗಿನ ಪ್ರತಿಯೊಬ್ಬ ಮಕ್ಕಳಿಗೂ ಪಲ್ಸ್ ಪೋಲಿಯೋ ಲಸಿಕೆ ನೀಡಿ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ಉಡುಪಿ: ಜಿಲ್ಲೆಯಾದ್ಯಂತ ಜೂನ್ 28 ರ ಭಾನುವಾರದಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಅಭಿಯಾನದಡಿ 0-5 ವರ್ಷದೊಳಗಿನ ಪ್ರತಿಯೊಬ್ಬ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಕರೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜೂನ್ 28 ರ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ […]