ಮಣಿಪಾಲದಲ್ಲಿ ಡ್ರೀಮ್‌ಝೋನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್‌ ಮತ್ತು ಎಂಎಸ್ ಡಿಸಿ ಯಿಂದ ಜೂ.27 ರಂದು ರೆಸಿನ್ ಆರ್ಟ್ ವರ್ಕ್‌ಶಾಪ್: ಕ್ರಿಯಾಶೀಲತೆಗೆ ಇಲ್ಲಿದೆ ವೇದಿಕೆ.

ಮಣಿಪಾಲ: ಯುವಜನರಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಡ್ರೀಮ್‌ಝೋನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್ ಹಾಗೂ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ ರೆಸಿನ್ ಆರ್ಟ್ ವರ್ಕ್‌ಶಾಪ್ ನ್ನುಜೂ. 27, ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್‌ನ ಎರಡನೇ ಮಹಡಿಯಲ್ಲಿರುವ ಡ್ರೀಮ್‌ಝೋನ್, ಎಂಎಸ್‌ಡಿಸಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.

“Unleash Your Creativity” ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ರೆಸಿನ್ ಬಳಸಿ ಕೋಸ್ಟರ್‌ಗಳು, ಕೀಚೈನ್‌ಗಳು, ಬುಕ್‌ಮಾರ್ಕ್‌ಗಳು ಹಾಗೂ ಅಲಂಕಾರಿಕ ವಸ್ತುಗಳ ತಯಾರಿಕೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ರೆಸಿನ್ ಆರ್ಟ್‌ನ ಮೂಲ ತಂತ್ರಗಳು, ವಿನ್ಯಾಸ ರೂಪಿಸುವ ವಿಧಾನಗಳು ಹಾಗೂ ಕೈಚಳಕದ ಮೂಲಕ ಕಲಾಕೃತಿಗಳನ್ನು ಸೃಷ್ಟಿಸುವ ಅನುಭವವನ್ನು ಭಾಗವಹಿಸುವವರು ಪಡೆಯಲಿದ್ದಾರೆ.

ಕಾರ್ಯಾಗಾರದ ನೋಂದಣಿ ಶುಲ್ಕವನ್ನು ₹1,280ರಿಂದ ₹800ಕ್ಕೆ ಇಳಿಕೆ ಮಾಡಲಾಗಿದ್ದು, ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಆಯೋಜಕರು ಒದಗಿಸಲಿದ್ದಾರೆ.

ಆಸಕ್ತರು ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.