ಮಣಿಪಾಲ: ಮದ್ಯಪಾನ ಮಾಡಿ ಕಾರು ಚಲಾಯಿಸಿ ಅಪಘಾತ: ಆರೋಪಿಗೆ ನ್ಯಾಯಾಂಗ ಬಂಧನ

ಉಡುಪಿ: ಮಣಿಪಾಲದ ಈಶ್ವರನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯಪಾನ ಮಾಡಿ ಕಾರು ಚಲಾಯಿಸಿ ಸ್ಕೂಟಿಗೆ ಡಿಕ್ಕಿ ಹೊಡೆದು ಯುವಕನಿಗೆ ಗಂಭೀರ ಗಾಯವಾಗುವಂತೆ ಮಾಡಿದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಜೂನ್ 19ರಂದು ರಾತ್ರಿ 10.08ರ ಸುಮಾರಿಗೆ ಮಣಿಪಾಲದ ಸಾಯಿಸಾಗರ್ ಹೋಟೆಲ್ ಎದುರಿನ ಯು-ಟರ್ನ್ ಬಳಿ ಈ ಅಪಘಾತ ಸಂಭವಿಸಿತ್ತು. ಕರ್ವಾಲು ಅಲೆವೂರು ಗ್ರಾಮದ ಅಭಿಷೇಕ್ ನಾಯಕ್ (21) ಅವರು ತಮ್ಮ ಸ್ಕೂಟಿಯಲ್ಲಿ ಕೆಳಪರ್ಕಳದಲ್ಲಿರುವ ಮನೆಗೆ ತೆರಳುತ್ತಿದ್ದ ವೇಳೆ, ಎಂಐಟಿ ಕಡೆಯಿಂದ ಬಂದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ […]

ಗೃಹಲಕ್ಷ್ಮಿ ಯೋಜನೆ: ₹225 ಕೋಟಿ ಅಕ್ರಮ, ವಿವರಣೆ ಕೇಳಿದ ಸಿಎಜಿ.

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆ ಜಾರಿಯಾದ ಮೊದಲ ಎರಡು ವರ್ಷದಲ್ಲೇ ₹225 ಕೋಟಿಯಷ್ಟು ಅಕ್ರಮ ನಡೆದಿದೆ ಎಂದು ಮಹಾಲೇಖಪಾಲರು (ಸಿಎಜಿ) ಲೆಕ್ಕಪರಿಶೋಧನೆ ವೇಳೆ ಗುರುತಿಸಿದ್ದಾರೆ.

ಮಣಿಪಾಲದಲ್ಲಿ ಶಾಲಾ ಬಸ್ ಅಪಘಾತ; ಡಿವೈಡರ್ ಮೇಲೇರಿದ ಬಸ್

ಉಡುಪಿ: ಅಲ್-ಇಬಾದಾದ್ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ವೊಂದು ಗುರುವಾರ ಬೆಳಿಗ್ಗೆ ಮಣಿಪಾಲದ ಐನಾಕ್ಸ್ (ಸಿನಿಗ್ಯಾಲಕ್ಸಿ) ಮುಂಭಾಗ ಅಪಘಾತಕ್ಕೀಡಾಗಿ ಡಿವೈಡರ್ ಮೇಲೇರಿ ನಿಂತ ಘಟನೆ ನಡೆದಿದೆ. ಮಣಿಪಾಲ ಟ್ರಾಫಿಕ್ ಸಿಗ್ನಲ್‌ನಿಂದ ಲಕ್ಷ್ಮೀಂದ್ರನಗರ ಕಡೆಗೆ ಸಾಗುವ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಬಸ್ ಹೆದ್ದಾರಿಯ ಡಿವೈಡರ್ ಮೇಲೇರಿ ನಿಂತಿದ್ದು, ಅಪಘಾತದ ರಭಸಕ್ಕೆ ತಡೆಬೇಲಿ ಹಾಗೂ ಬಸ್‌ನ ಮುಂಭಾಗ ಹಾನಿಗೊಳಗಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ. ಇದರಿಂದ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ […]

ನಾಯಿಗಳ ಮೇಲಿನ ಕ್ರೌರ್ಯ ಸಹಿಸುವುದಿಲ್ಲ: ಕರ್ನಾಟಕ ಹೈಕೋರ್ಟ್ ಸ್ಪಷ್ಟ ಸಂದೇಶ

ಬೆಂಗಳೂರು: ಪ್ರಾಣಿಗಳಿಗೂ ಹಿಂಸೆಯಿಲ್ಲದೆ ಬದುಕುವ ಹಕ್ಕಿದೆ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ Karnataka High Court, ಕ್ರೌರ್ಯ ಮತ್ತು ಲೈಂಗಿಕ ದುರ್ಬಳಕೆಯ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ 9 ನಾಯಿಗಳ ಕಸ್ಟಡಿಯನ್ನು ಮರಳಿ ನೀಡಬಾರದು ಎಂದು ಆದೇಶಿಸಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ M. Nagaprasanna ಅವರಿದ್ದ ಪೀಠ, ನಾಯಿಗಳನ್ನು ಮಾಲೀಕನಿಗೆ ಹಿಂತಿರುಗಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು “ಆಘಾತಕಾರಿ” ಎಂದು ಕಟುವಾಗಿ ಟೀಕಿಸಿದೆ. ಬೆಂಗಳೂರಿನ ನಾಗಸಂದ್ರ ನಿವಾಸಿ ಕೆ.ಇ. ರಮೇಶ್ ಅವರ ಬಳಿ ವಿವಿಧ ತಳಿಯ […]

ಮೆಲಿಂಡಾ ಜೊತೆಗಿನ ವಿವಾಹದ ವೇಳೆ ಮೂರು ಅಕ್ರಮ ಸಂಬಂಧವಿತ್ತು! ಕೊನೆಗೂ ಸತ್ಯ ಬಹಿರಂಗಪಡಿಸಿದ ಬಿಲ್ ಗೇಟ್ಸ್

ವಾಷಿಂಗ್ಟನ್: ಬಿಲ್ ಗೇಟ್ಸ್ Bill Gates ಅವರು ಅಮೆರಿಕ ಸಂಸತ್ತಿನ ಹೌಸ್ ಓವರ್‌ಸೈಟ್ ಸಮಿತಿಯ ಮುಚ್ಚಿದ ಬಾಗಿಲಿನ (closed-door) ವಿಚಾರಣೆಯಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಮಾಜಿ ಪತ್ನಿ ಮೆಲಿಂಡಾ Melinda French Gates ಅವರೊಂದಿಗೆ ವೈವಾಹಿಕ ಜೀವನದಲ್ಲಿದ್ದ ವೇಳೆ ಮೂರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದುದಾಗಿ ಅವರು ಒಪ್ಪಿಕೊಂಡಿದ್ದಾರೆ. ಗೇಟ್ಸ್ ಅವರ ಹೇಳಿಕೆಯ ಪ್ರಕಾರ, ಬ್ರಿಡ್ಜ್ ಆಟಗಾರ್ತಿ ಮಿಲಾ ಆಂಟೋನೊವಾ, ಪರಮಾಣು ವಿಜ್ಞಾನಿ ಕರಿಮಾ ನಿಗ್ಮಾತುಲಿನಾ ಹಾಗೂ ವೈದ್ಯಕೀಯ ಉದ್ಯಮಿ ಆಲಿಸ್ ಜಾಕೋಬ್ಸ್ […]