ಬೆಳೆ ವಿಮೆ ಯೋಜನೆ: ನೋಂದಣಿಗೆ ಜೂ. 30 ಕೊನೆ ದಿನ

ಉಡುಪಿ: ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರಿತ್ಯದಿಂದಾಗಿ ಉಂಟಾಗುವ ಬೆಳೆ ನಷ್ಟಕ್ಕೆ ಪ್ರಸಕ್ತ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಕಾರ್ಯಕ್ರಮದಡಿ ನೊಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು, ಬೆಳೆ ಸಮೀಕ್ಷೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ನಮೂದಾಗಿರುವ ಬೆಳೆ ವಿಸ್ತೀರ್ಣಕ್ಕೆ ಅನುಗುಣವಾಗಿ ವಿಮಾ ಮೊತ್ತವನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಯೋಜನೆಯಡಿ ನೊಂದಣಿ ಮಾಡಿಸಲು ಜೂನ್ 30 ಕೊನೆಯ ದಿನವಾಗಿದ್ದು, ರೈತರು ವಿಮಾ ಕಂತುಗಳನ್ನು ಪಾವತಿಸಲು ನಿಗದಿತ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್, ವ್ಯವಸಾಯ ಸೇವಾ […]

ಕುಂದಾಪುರ – ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಪ್ರಕಟ: ಆಕ್ಷೇಪಣೆ ಅಹ್ವಾನ

ಉಡುಪಿ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ, 1993 ರ 5 ನೇ ಪ್ರಕರಣದ ಉಪ ಪ್ರಕರಣ (5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲೆಯ ಕುಂದಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ, ಕ್ಷೇತ್ರದ ಸಂಖ್ಯೆ, ಪ್ರತಿ ಕ್ಷೇತ್ರದ ಹೆಸರು, ಕ್ಷೇತ್ರ ವ್ಯಾಪ್ತಿ ಹಾಗೂ ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಗಳ ವಿವರವನ್ನು ಪ್ರಕಟಿಸಲಾಗಿರುತ್ತದೆ. ಹೊಸಾಡು – 1: ಕಂಚಗೋಡು, […]

ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ: ನೋಂದಣಿಗೆ ಸೂಚನೆ

ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಮಳೆಯಾಶ್ರಿತ ಭತ್ತವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಾಗೂ ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ 75,600 ರೂ. ಗಳಂತೆ ವಿಮಾ ಕಂತಿನ ದರವನ್ನು ಪ್ರತಿ ಹೆ.ಗೆ 1512 (2%) ರೂ. ಗಳಂತೆ ನಿಗಧಿಪಡಿಸಿದ್ದು, ನೋಂದಣಿಗಾಗಿ ಅಧಿಸೂಚಿಸಲಾಗಿರುತ್ತದೆ. ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆ ದಿನವಾಗಿರುತ್ತದೆ. […]

ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಗೆ ಹಸಿರು ಇಂಧನ ದಕ್ಷತೆಗಾಗಿ ರಾಷ್ಟ್ರೀಯ ಪ್ರಶಸ್ತಿ

ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಸುಸ್ಥಿರ ಆರೋಗ್ಯ ಸೇವೆಗಳನ್ನು ಉತ್ತೇಜಿಸುವಲ್ಲಿ ನೀಡಿದ ಕೊಡುಗೆಗಾಗಿ ಆರೋಗ್ಯ ಮತ್ತು ಪರಿಸರ ನಾಯಕತ್ವ ವೇದಿಕೆ (ಹೆಲ್ಸ್ ಸಂಸ್ಥೆ) ವತಿಯಿಂದ ಪ್ರದಾನಗೊಳ್ಳುವ 2026ರ ಹೆಲ್ಸ್ ಸುಸ್ಥಿರತಾ ಶ್ರೇಷ್ಠತಾ ಪ್ರಶಸ್ತಿಯ ‘ಅತ್ಯುತ್ತಮ ಹಸಿರು ಇಂಧನ ದಕ್ಷತಾ ಕ್ರಮಗಳು’ ವಿಭಾಗದ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ.ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಶಿಲ್ ಜತನ್ನಾ ಅವರು 2026ರ ಜೂನ್ 20ರಂದು ಶನಿವಾರ ಹೈದರಾಬಾದ್‌ನ ಹೈಟೆಕ್ ಸಿಟಿಯ ಯಶೋದ ಆಸ್ಪತ್ರೆಯಲ್ಲಿ ನಡೆದ ಹೆಲ್ಸ್ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.ಜಾಗತಿಕ […]

ಉಡುಪಿ :ಸಿಟಿ ಗೇಟ್ ವೇ ಅಪಾರ್ಟ್ಮೆಂಟ್ ಕಟ್ಟಡ ಸಂಕಿರ್ಣದ ವಾರ್ಷಿಕ ಮಹಾಸಭೆ – ನೂತನ ಸದಸ್ಯರ ನೇಮಕ.

ಉಡುಪಿ: ನಗರದ ಮಿಷನ್ ಕಂಪೌಂಡ್ ಬಳಿ ಇರುವ ಸಿಟಿ ಗೇಟ್ ವೇ ಅಪಾರ್ಟ್ಮೆಂಟ್ ಕಟ್ಟಡ ಸಂಕೀರ್ಣ ಸಂಘದ ಮಹಾಸಭೆಯು ರವಿವಾರ ಜೂನ್ 21 ರಂದು ಕಟ್ಟಡದ ಸಭಾಗ್ರಹದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಇಕ್ಬಾಲ್ ಹಮ್ಮಾಜಿ ವಹಿಸಿದ್ದರು. ಸಂಘದ ಕಾರ್ಯದರ್ಶಿ ಪ್ರಮೀಳಾ ಜತ್ತನ್ನ ಮಹಾಸಭೆಯ ವರದಿ ಮಂಡಿಸಿದರು. ಬಳಿಕ ಸಂಘದ ಖಜಾಂಚಿ ರೇಷ್ಮಾ ತೋಟ ಆಯವ್ಯ ಯಗಳ ವರದಿಯನ್ನು ಮಂಡಿಸಿದರು ಈ ಸಂದರ್ಭದಲ್ಲಿ 2026 – 27 ನೇ ಸಾಲೀನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಕ್ಬಾಲ್ […]