ಉಡುಪಿ :ಸಿಟಿ ಗೇಟ್ ವೇ ಅಪಾರ್ಟ್ಮೆಂಟ್ ಕಟ್ಟಡ ಸಂಕಿರ್ಣದ ವಾರ್ಷಿಕ ಮಹಾಸಭೆ – ನೂತನ ಸದಸ್ಯರ ನೇಮಕ.

ಉಡುಪಿ: ನಗರದ ಮಿಷನ್ ಕಂಪೌಂಡ್ ಬಳಿ ಇರುವ ಸಿಟಿ ಗೇಟ್ ವೇ ಅಪಾರ್ಟ್ಮೆಂಟ್ ಕಟ್ಟಡ ಸಂಕೀರ್ಣ ಸಂಘದ ಮಹಾಸಭೆಯು ರವಿವಾರ ಜೂನ್ 21 ರಂದು ಕಟ್ಟಡದ ಸಭಾಗ್ರಹದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಇಕ್ಬಾಲ್ ಹಮ್ಮಾಜಿ ವಹಿಸಿದ್ದರು. ಸಂಘದ ಕಾರ್ಯದರ್ಶಿ ಪ್ರಮೀಳಾ ಜತ್ತನ್ನ ಮಹಾಸಭೆಯ ವರದಿ ಮಂಡಿಸಿದರು. ಬಳಿಕ ಸಂಘದ ಖಜಾಂಚಿ ರೇಷ್ಮಾ ತೋಟ ಆಯವ್ಯ ಯಗಳ ವರದಿಯನ್ನು ಮಂಡಿಸಿದರು

ಈ ಸಂದರ್ಭದಲ್ಲಿ 2026 – 27 ನೇ ಸಾಲೀನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಕ್ಬಾಲ್ ಹಮ್ಮಾಜಿ,ಕಾರ್ಯದರ್ಶಿಯಾಗಿ ಪ್ರಮೀಳಾ ಜತ್ತನ್ನ ಹಾಗೂ ಖಜಾಂಚಿ ಯಾಗಿ ರೇಷ್ಮಾ ತೋಟ ಆಯ್ಕೆಯಾದರು. ಸದಸ್ಯರಾಗಿ ಸ್ಟ್ಯಾಂಲಿ ಮಾರ್ಟೀಸ್, ಅಭಿಷೇಕ್ ಶ್ರೀವಾಸ್ತವ್, ಮುಹಮ್ಮದ್ C. A., ಶಾಲಿನಿ ಅಮ್ಮನ್ನ, ಸಂಚಿತಾ ಮೇಸ್ತ, ವಿಜಯ್ ಜತ್ತನ್ನ, ಆಯ್ಕೆಯಾದರು.