ಕುಂದಾಪುರ – ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ ಪ್ರಕಟ: ಆಕ್ಷೇಪಣೆ ಅಹ್ವಾನ

ಉಡುಪಿ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ, 1993 ರ 5 ನೇ ಪ್ರಕರಣದ ಉಪ ಪ್ರಕರಣ (5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲೆಯ ಕುಂದಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ, ಕ್ಷೇತ್ರದ ಸಂಖ್ಯೆ, ಪ್ರತಿ ಕ್ಷೇತ್ರದ ಹೆಸರು, ಕ್ಷೇತ್ರ ವ್ಯಾಪ್ತಿ ಹಾಗೂ ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಗಳ ವಿವರವನ್ನು ಪ್ರಕಟಿಸಲಾಗಿರುತ್ತದೆ.

ಹೊಸಾಡು – 1: ಕಂಚಗೋಡು, ಜನತಾ ಕಾಲೋನಿ-1, ಜನತಾ ಕಾಲೋನಿ-11, ಖಾರ್ವಿಕೇರಿ. ಹೊಸಾಡು ಗ್ರಾಮದ ವಾರ್ಡ್ 1 ರಲ್ಲಿ ಮನೆ ನಂಬ್ರ 1 ರಿಂದ 201 ರ ತನಕ (ಪೂ : ಕೆ ಸಿ ಡಿ ಸಿ ಗೇರು ತೋಟ, ಪ : ಅರಬ್ಬಿ ಸಮುದ್ರ, ಉ : ತ್ರಾಸಿ ಕಂಚುಗೋಡು ರಸ್ತೆ ಹಾಗೂ ದ : ಗುಜ್ಜಾಡಿ ಕಂಚುಗೋಡು ರಸ್ತೆ). ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ-3.

ಹೊಸಾಡು – 2: ಗಾಣದಮಕ್ಕಿ, ಕೇರಿಕೊಡ್ಲು, ಕಮ್ಮಾರಕೊಡ್ಲು, ಕಾಳುಮನೆ, ಕೋಟೆಮಕ್ಕಿ, ಮುಳ್ಳಿಕಟ್ಟಿ, ಕಡೇರಮನೆ, ಕೊಪ್ಪರಿ. ಹೊಸಾಡು ಗ್ರಾಮದ ವಾರ್ಡ್ 1 ರಲ್ಲಿ ಮನೆ ನಂಬ್ರ 202 ಮತ್ತು ಮೇಲ್ಪಟ್ಟು (ಪೂ : ಗುಜ್ಜಾಡಿ – ಆಲೂರು ಜಿಲ್ಲಾ ಪಂಚಾಯತ್ ರಸ್ತೆ, ಪ : ಕೆಸಿಡಿಸಿ ಗೇರು ತೋಟ, ಉ : ಗಾಣದಮಕ್ಕಿ ಕುಂಬಾರ ರಸ್ತೆ ಹಾಗೂ ದ : ಗುಜ್ಜಾಡಿ ಗ್ರಾಮ). ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ-2.

ಹೊಸಾಡು – 3: ಅರಾಟೆ, ಒಳನಾಡು, ಸೊಬ್ರಹಿಟ್ಟು. ಹೊಸಾಡು ಗ್ರಾಮದ ವಾರ್ಡ್ 2 (ಪೂ : ಸೌಪರ್ಣಿಕ ಹೊಳೆ, ಪ : ಗುಜ್ಜಾಡಿ – ಆಲೂರು ಜಿಲ್ಲಾ ಪಂಚಾಯತ್ ರಸ್ತೆ, ಉ : ಗುಜ್ಜಾಡಿ – ಆಲೂರು ಜಿಲ್ಲಾ ಪಂಚಾಯತ್ ರಸ್ತೆ ಹಾಗೂ ದ : ಗುಜ್ಜಾಡಿ ಗ್ರಾಮ). ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ- 3.

ಸೇನಾಪುರ – 1: ಗುಡ್ಡೆಯಂಗಡಿ, ಬೆಳ್ಳಾಡಿ, ರೈಲ್ವೆ ಸ್ಟೇಶನ್, ರಾಮನಗರ, ಶಿವಾನಗರ ಸೇನಾಪುರ ಗ್ರಾಮದ ವಾರ್ಡ್ 1 (ಪೂ : ಹರ್ಕೂರು ಗ್ರಾಮ, ಪ : ಸೌಪರ್ಣಿಕ ಹೊಳೆ, ಉ : ನಾಡ ಗ್ರಾಮ ಹಾಗೂ ದ : ಸೇನಾಪುರ – 2 ನೇ ಕ್ಷೇತ್ರ) ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ- 4.

ಸೇನಾಪುರ – 2: ಗುಡ್ಡಮ್ಮಾಡಿ, ಪರಂಕಳಿ, ಸಾಲಾಡಿ, ಒಳಬೈಲು ಸೇನಾಪುರ ಗ್ರಾಮದ ವಾರ್ಡ್ 2 ( ಪೂ : ಹಕ್ಲಾಡಿ ಗ್ರಾಮ, ಪ : ಸೌಪರ್ಣಿಕ ಹೊಳೆ, ಉ : ಸೇನಾಪುರ – 1 ನೇ ಕ್ಷೇತ್ರ ಹಾಗೂ ದ : ಹಕ್ಲಾಡಿ ಗ್ರಾಮ).ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ- 3.

ಈ ಕರಡು ಅಧಿಸೂಚನೆಯಿಂದ ಬಾಧಿತರಾಗಬಹುದಾದ ಸಾರ್ವಜನಿಕರ ತಿಳುವಳಿಕೆಗಾಗಿ ಸದ್ರಿ ಉಪ ಪ್ರಕರಣ ಹಾಗೂ ಸರ್ಕಾರದ ತಿದ್ದುಪಡಿ ಸುತ್ತೋಲೆ 2026 ರ ಜೂನ್ 10 ರಲ್ಲಿ ನಿರ್ದೇಶಿಸಿದಂತೆ ಈ ಮೂಲಕ ಪ್ರಕಟಿಸಲಾಗಿದ್ದು, ಸದರಿ ಕರಡು ಅಧಿಸೂಚನೆಗೆ ಆಕ್ಷೇಪಣೆಗಳಿದ್ದಲ್ಲಿ ಜೂನ್ 29 ರ ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಶೀಲ್ದಾರ ಕುಂದಾಪುರ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.

ಜೂನ್ 29 ರ ಸಂಜೆ 5 ಗಂಟೆ ನಂತರ ಬಂದoತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.