ಆದಿ ಉಡುಪಿ ಸಂತೆ ಮಾರ್ಕೆಟ್‌ನ ಹಣ್ಣು ಸಂಗ್ರಹ ಅಂಗಡಿಯಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ

ಉಡುಪಿ: ನಗರದ ಆದಿ ಉಡುಪಿ ಸಂತೆ ಮಾರ್ಕೆಟ್‌ನಲ್ಲಿರುವ ಹಣ್ಣು–ಹಂಪಲು ಸಂಗ್ರಹ ಅಂಗಡಿಗೆ ಭಾನುವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ. ಅಂಗಡಿಯಲ್ಲಿ ಸಂಗ್ರಹಿಸಲಾಗಿದ್ದ ಹಣ್ಣು–ಹಂಪಲುಗಳ ಬಾಕ್ಸ್‌ಗಳಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಅಂಗಡಿಯ ಒಳಭಾಗವನ್ನು ಆವರಿಸಿದ್ದರಿಂದ ಅಲ್ಲಿದ್ದ ಹಣ್ಣು–ಹಂಪಲು ಹಾಗೂ ಇತರೆ ಸಾಮಗ್ರಿಗಳು ಸುಟ್ಟು ಹಾನಿಗೊಳಗಾದವು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಸಿಬ್ಬಂದಿಯ […]

ಮೆಟಾ ಜಾಹೀರಾತುಗಳಲ್ಲಿ ಪರಿಣತಿ ಪಡೆಯಲು ಇಲ್ಲಿದೆ ಬೆಸ್ಟ್ ಚಾನ್ಸ್: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ಜೂ.22 ರಿಂದ ಮಾಸ್ಟರ್‌ಕ್ಲಾಸ್

ಮಂಗಳೂರು: ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಮೆಟಾ ಜಾಹೀರಾತುಗಳ (Meta Ads) ಕುರಿತಾಗಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗಾಗಿ ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (MSDC) ವಿಶೇಷ ‘ಮೆಟಾ ಆಡ್ಸ್ ಮಾಸ್ಟರ್‌ಕ್ಲಾಸ್’ ಅನ್ನು ಆಯೋಜಿಸಿದೆ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ವಾಟ್ಸ್ಆ್ಯಪ್ ಬಿಸಿನೆಸ್ ವೇದಿಕೆಗಳಲ್ಲಿ ಪರಿಣಾಮಕಾರಿ ಜಾಹೀರಾತು ಅಭಿಯಾನಗಳನ್ನು ರೂಪಿಸುವುದು ಮತ್ತು ನಿರ್ವಹಿಸುವ ಕುರಿತು ಈ ತರಬೇತಿಯಲ್ಲಿ ಪ್ರಾಯೋಗಿಕ ಜ್ಞಾನ ನೀಡಲಾಗುತ್ತದೆ. ಕೇವಲ ಆರು ಗಂಟೆಗಳ ಅವಧಿಯ ಈ ಪ್ರಮಾಣೀಕೃತ ಆನ್‌ಲೈನ್ ಕೋರ್ಸ್‌ನಲ್ಲಿ ಭಾಗವಹಿಸುವವರು ಮೆಟಾ ಜಾಹೀರಾತುಗಳ […]

ಸಂಚಾರ ನಿಯಮ ಉಲ್ಲಂಘನೆ, ಇಂದಿನಿಂದ ಶೇ.50 ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಸಬಹುದು,ಆ್ಯಪ್‌ ಮೂಲಕವೂ ದಂಡ ಕಟ್ಟಲು ಅವಕಾಶ!

ಬೆಂಗಳೂರು : ರಾಜ್ಯಾದ್ಯಂತ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಾಜ್ಯ ಸರ್ಕಾರ ಶೇ.50 ರಷ್ಟು ರಿಯಾಯಿತಿ ಘೋಷಿಸಿದೆ. ಜೂನ್ 21ರಿಂದ ಜುಲೈ 10ರವರೆಗೆ ಮಾತ್ರ ಈ ಸೌಲಭ್ಯ ಲಭ್ಯವಿದ್ದು, ವಾಹನ ಸವಾರರು ಬಾಕಿ ದಂಡವನ್ನು ಕಡಿಮೆ ಮೊತ್ತದಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಇದೇ ರೀತಿಯ ಶೇ.50 ರಿಯಾಯಿತಿ ನೀಡಲಾಗಿದ್ದು, ಆ ಅವಧಿಯಲ್ಲಿ 10.02 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದಂತೆ ₹28.35 ಕೋಟಿ ದಂಡ ಸಂಗ್ರಹವಾಗಿತ್ತು. […]

ಎಚ್ಚರ, ಬ್ಯಾಂಕ್ ಮ್ಯಾನೇಜರ್ ಗಳೂ ಹೀಗೆಲ್ಲಾ ವಂಚನೆ ಮಾಡ್ತಾರೆ, ಉದ್ಯಮಿಯಿಂದ ₹2.66 ಕೋಟಿ ದೋಚಿದ ಖಾಸಗಿ ಬ್ಯಾಂಕ್ ಮ್ಯಾನೇಜರ್ ಬಲೆಗೆ

ಬೆಂಗಳೂರು : ₹25ರಿಂದ ₹30 ಕೋಟಿ ಮೌಲ್ಯದ ವ್ಯವಹಾರ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ₹2.66 ಕೋಟಿ ಪಡೆದು ಬ್ಯಾಂಕ್ ಮ್ಯಾನೇಜರ್ ಒಬ್ಬ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಮೂವರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿನೋದ್ ಕುಮಾರ್, ಅರುಣ್ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ. ಹೆಸರಘಟ್ಟ ಶಾಖೆಯ ಆಕ್ಸಿಸ್ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದ ವಿನೋದ್ ಕುಮಾರ್ ಈ ವಂಚನೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಲಾಜಿಸ್ಟಿಕ್ಸ್ […]

ಕೆಮ್ಮಿನ ಸಿರಪ್ ಬೇಕಿಲ್ಲ, ಈ ನೈಸರ್ಗಿಕ ಮನೆಮದ್ದು ಕೆಮ್ಮಿನ ಸಿರಪ್ ಗಿಂತಲೂ ಒಳ್ಳೆಯ ಕೆಲಸ ಮಾಡುತ್ತೆ!

ಶೀತ ಮತ್ತು ಕೆಮ್ಮಿನ ಸಮಸ್ಯೆ ಎದುರಾದಾಗ ಸಿರಪ್ ಮೊರೆ ಹೋಗುವುದು ಸಾಮಾನ್ಯ. ಆದರೆ ಆರೋಗ್ಯ ಸಚಿವಾಲಯ ವೈದ್ಯರ ಶಿಫಾರಸ್ಸು ಇಲ್ಲದೇ ಕೆಮ್ಮಿನ ಸಿರಪ್ ಸೇವಿಸದಂತೆ ಸೂಚಿಸಿದೆ. ಇಂತಹ ಸಿರಪ್ ಗಳು ಹಾನಿಕಾರಕ ಎಂದೂ ಬಹಿರಂಗವಾಗಿದೆ. ಔಷಧಿಗಳಿಗಿಂತ ನೈಸರ್ಗಿಕ ಪರಿಹಾರಗಳಿಗೆ ಹೆಚ್ಚು ಆದ್ಯತೆ ನೀಡುವುದು ಬೆಸ್ಟ್. ಜೇನುತುಪ್ಪ, ಶುಂಠಿ ಮತ್ತು ತುಳಸಿಯಿಂದ ತಯಾರಿಸಲಾದ ಮನೆಮದ್ದುಗಳು ಸುಲಭವಾಗಿ ಲಭ್ಯವಾಗುವುದರ ಜೊತೆಗೆ ಕಡಿಮೆ ವೆಚ್ಚದ ಆಯ್ಕೆಗಳಾಗಿವೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಜೇನುತುಪ್ಪವು ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, […]