ಆತ್ರಾಡಿ ಸವ್ಯ ಸಾಚಿ ಶಿಶು ಮಂದಿರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಉಡುಪಿ: ಸವ್ಯ ಸಾಚಿ ಶಿಶು ಮಂದಿರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀಮತಿ ಪ್ರಸಾದಿನಿ ಹೆಗ್ಡೆ ಯವರು ಸರ್ವರನ್ನು ಸ್ವಾಗತಿಸಿದರು. ಶಿಶು ಮಂದಿರ ಅಧ್ಯಕ್ಷರಾದ ಕೃಷ್ಣ ಮೂರ್ತಿ ಪ್ರಭು ರವರ ಅದ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಪತಂಜಲಿ ಯೋಗ ಶಿಕ್ಷಣ ಸಮಿತಿ ಉಡುಪಿ ಇದರ ಜಿಲ್ಲಾ ಪ್ರಮುಖರಾದ ಶ್ರೀಮತಿ ವಾಣಿ ಮತ್ತು ಶ್ರೀಮತಿ ರೇಖಾ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಿದರು. ವೇದಿಕೆಯಲ್ಲಿ ಸತ್ಯಾನಂದ ನಾಯಕ್ ಆತ್ರಾಡಿ, ಬಾಲಕೃಷ್ಣ ಹೆಗ್ಡೆ ಬೀರ್ಬೇಟ್ಟು, ಶ್ರೀಮತಿ ಉಮಾ ಮಹೇಶ್ವರಿ ಉಪಸ್ಥಿತರಿದ್ದರು. […]
ಜೈಲಿನಲ್ಲಿ ಯೋಗ ಮಾಡಿದ ದರ್ಶನ್, ವೈರಲ್ ಆಯ್ತು ಫೋಟೋ!

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗಾಗಿ ವಿಶೇಷ ಯೋಗಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಮತ್ತು ಪವಿತ್ರ ಗೌಡ ಭಾಗವಹಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜೈಲಿನ ಎಲ್ಲಾ ಕೈದಿಗಳಿಗಾಗಿ ಸಾಮೂಹಿಕ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿತ್ತು. ಬೆನ್ನು ನೋವಿನ ಸಮಸ್ಯೆ ಇದೆ ಎಂದು ತಿಳಿಸಿದ್ದ ನಟ ದರ್ಶನ್ ಆರಂಭದಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಬಳಿಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿ […]
ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ನಲ್ಲಿ ಜೂ. 26ರಂದು ಓಪನ್ ಹೌಸ್ ಪ್ರವೇಶ ಮೇಳ: ಡಿಪ್ಲೋಮಾ ಕೋರ್ಸ್ ಕಲಿಯುವ ಅತ್ಯುತ್ತಮ ಅವಕಾಶ ನಿಮ್ಮದಾಗಿಸಿ

ಮಣಿಪಾಲ: ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ನಲ್ಲಿ 2026-27ನೇ ಸಾಲಿನ ಪ್ರವೇಶಾತಿಗಾಗಿ ಜೂನ್ 26ರಂದು (ಶುಕ್ರವಾರ) ವಿಶೇಷ ಓಪನ್ ಹೌಸ್ ಅಡ್ಮಿಷನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಿಯುಸಿ (ವಿಜ್ಞಾನ ವಿಭಾಗ) ಹಾಗೂ ಐಟಿಐ ಉತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗಳಿಗೆ ನೇರವಾಗಿ ದ್ವಿತೀಯ ವರ್ಷದ ಪ್ರವೇಶ (ಲ್ಯಾಟರಲ್ ಎಂಟ್ರಿ) ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ ವಿಭಾಗದಲ್ಲಿ ವಿವಿಧ ಆಯ್ಕೆಗಳು ಕಲ್ಪಿಸಲಾಗಿದೆ. ಮೊದಲ ಆಯ್ಕೆಯಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ […]
ವಿಶ್ವ ಯೋಗ ದಿನ: ಉಡುಪಿಯ ರಾಜಾಂಗಣದಲ್ಲಿ ನೂರಾರು ಮಂದಿಯಿಂದ ಸಾಮೂಹಿಕ ಯೋಗಾಭ್ಯಾಸ

ಉಡುಪಿ: 12ನೇ ವಿಶ್ವ ಯೋಗ ದಿನವನ್ನು ಭಾನುವಾರ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಉಡುಪಿ ಕೃಷ್ಣ ಮಠ, ಶಿರೂರು ಮಠ ಹಾಗೂ ಪತಂಜಲಿ ಯೋಗ ಪೀಠದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಯೋಗಪಟುಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಸಾಮೂಹಿಕ ಯೋಗಾಭ್ಯಾಸ ನಡೆಸಿದರು. ಕಾರ್ಯಕ್ರಮಕ್ಕೆ ಶಿರೂರು ಮಠದ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ವಿವಿಧ ಯೋಗ ಕೇಂದ್ರಗಳ ಯೋಗ ಸಾಧಕರು ಮತ್ತು ಯೋಗಾಸಕ್ತರು ಏಕಕಾಲದಲ್ಲಿ […]
ಉಡುಪಿ: ಪಟ್ಲ ಯು. ಎಸ್. ನಾಯಕ್ ಪ್ರೌಢ ಶಾಲೆಯಲ್ಲಿ’ ಅಂತರಾಷ್ಟ್ರೀಯ ಯೋಗ ದಿನಾಚರಣೆ’

ಉಡುಪಿ: ಪಟ್ಲ ಯು ಎಸ್ ನಾಯಕ್ ಪ್ರೌಢ ಶಾಲೆಯಲ್ಲಿ’ ಅಂತರಾಷ್ಟೀಯ ಯೋಗ ದಿನಾಚರಣೆ’ ಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ವಾರಣಾಸಿ ಯೋಗ ಕೇಂದ್ರದ ಯೋಗ ಗುರುಗಳಾದ ಶ್ರೀ ಪ್ರಕಾಶಾನಂದ ಗುರುಜಿಯವರು “ಸದೃಡವಾದ ದೖಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ದಿವ್ಯೌಷಧವಾಗಬಲ್ಲದು” ಎಂದು ಯೋಗದ ಮಹತ್ವದ ಬಗ್ಗೆ ತಿಳಿಸಿ ಒಂದು ಗಂಟೆ ಯೋಗಾಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ರೂರಲ್ ಎಜುಕೇಶನ್ ಸೊಸೖಟಿ(ರಿ,) ಪಟ್ಲ. ಇದರ ಅಧ್ಯಕ್ಷರಾದ ಪೆರ್ಣಂಕಿಲ ಶ್ರೀಶ ನಾಯಕ್, ಆಡಳಿತ ಮಂಡಳಿಯ ಡಾ. ಕೆ ನಾರಾಯಣ ಶೆಣೈ, […]