ಮಂಗಳೂರು: ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಮೆಟಾ ಜಾಹೀರಾತುಗಳ (Meta Ads) ಕುರಿತಾಗಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗಾಗಿ ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (MSDC) ವಿಶೇಷ ‘ಮೆಟಾ ಆಡ್ಸ್ ಮಾಸ್ಟರ್ಕ್ಲಾಸ್’ ಅನ್ನು ಆಯೋಜಿಸಿದೆ.
ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ ಬಿಸಿನೆಸ್ ವೇದಿಕೆಗಳಲ್ಲಿ ಪರಿಣಾಮಕಾರಿ ಜಾಹೀರಾತು ಅಭಿಯಾನಗಳನ್ನು ರೂಪಿಸುವುದು ಮತ್ತು ನಿರ್ವಹಿಸುವ ಕುರಿತು ಈ ತರಬೇತಿಯಲ್ಲಿ ಪ್ರಾಯೋಗಿಕ ಜ್ಞಾನ ನೀಡಲಾಗುತ್ತದೆ. ಕೇವಲ ಆರು ಗಂಟೆಗಳ ಅವಧಿಯ ಈ ಪ್ರಮಾಣೀಕೃತ ಆನ್ಲೈನ್ ಕೋರ್ಸ್ನಲ್ಲಿ ಭಾಗವಹಿಸುವವರು ಮೆಟಾ ಜಾಹೀರಾತುಗಳ ಮೂಲಭೂತ ಹಾಗೂ ಉನ್ನತ ತಂತ್ರಗಳನ್ನು ಕಲಿಯಲಿದ್ದಾರೆ.
ಯಾವ ಕ್ಲಾಸ್?
ಜೂನ್ 22ರಿಂದ 27ರವರೆಗೆ ಪ್ರತಿದಿನ ರಾತ್ರಿ 8ರಿಂದ 9 ಗಂಟೆಯವರೆಗೆ ತರಗತಿಗಳು ನಡೆಯಲಿದ್ದು, ಎಲ್ಲಿಂದ ಬೇಕಾದರೂ ಆನ್ಲೈನ್ ಮೂಲಕ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕೋರ್ಸ್ ಶುಲ್ಕವನ್ನು ₹349 ಎಂದು ನಿಗದಿಪಡಿಸಲಾಗಿದ್ದು, ತೃಪ್ತಿಯಾಗದಿದ್ದಲ್ಲಿ ಸಂಪೂರ್ಣ ಶುಲ್ಕ ಮರುಪಾವತಿಯ ಭರವಸೆಯನ್ನೂ ಸಂಸ್ಥೆ ನೀಡಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಆಸಕ್ತರು ಪೋಸ್ಟರ್ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾಗಿದ್ದು, 8296615560 ಹಾಗೂ 7975078498 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. ಹೆಚ್ಚಿನ ವಿವರಗಳಿಗೆ ಸಂಸ್ಥೆಯ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.

















