‘ನನ್ನ ಈ ಪ್ರಶ್ನೆಗಳಿಗೆ ಉತ್ತರ ಕೊಡಿ’ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ, ಪತ್ರದಲ್ಲೇನಿದೆ?

ಬೆಂಗಳೂರು: ರಾಜ್ಯದ ಗೃಹಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು, ಸಂಘಟನೆಯ ಕಾರ್ಯವೈಖರಿ, ಆರ್ಥಿಕ ಮೂಲಗಳು, ಕಾನೂನಾತ್ಮಕ ಸ್ಥಾನಮಾನ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ. ಪತ್ರದಲ್ಲಿ, ರಾಷ್ಟ್ರೀಯ ಸ್ವಯಂಸೇಕ ಸಂಘ ದೇಶದ ಅತಿದೊಡ್ಡ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳಲ್ಲಿ ಒಂದಾಗಿದ್ದು, ಅದರ ಚಟುವಟಿಕೆಗಳು ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿವೆ. ಹೀಗಾಗಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಂಘಟನೆ ತನ್ನ ಮೂಲಭೂತ ಮಾಹಿತಿಗಳನ್ನು ಬಹಿರಂಗಪಡಿಸಬೇಕೆಂದು ಸಚಿವರು ತಿಳಿಸಿದ್ದಾರೆ. […]
ವರ್ಷಕ್ಕೆ ಇಷ್ಟು ಸಿಲಿಂಡರ್ ಮಾತ್ರ ಸಿಗೋದು, ಇನ್ನು ಪ್ಲಾನ್ ಮಾಡ್ಕೊಂಡು ಬುಕ್ ಮಾಡಿ !

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಹಾಗೂ ಜಾಗತಿಕ ಉದ್ವಿಗ್ನತೆಗಳ ಹಿನ್ನೆಲೆ ಎಲ್ಪಿಜಿ ಗ್ಯಾಸ್ ಪೂರೈಕೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ದೇಶದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ತೈಲ ಮಾರುಕಟ್ಟೆ ಕಂಪನಿಗಳು ಸ್ಪಷ್ಟಪಡಿಸಿವೆ. ಈ ನಡುವೆ ಗೃಹಬಳಕೆಯ ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ವರ್ಷಕ್ಕೆ ಎಷ್ಟು ಸಿಲಿಂಡರ್ ಖರೀದಿಸಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ವರ್ಷಕ್ಕೆ 15 ಸಿಲಿಂಡರ್ ಮಿತಿ ಪ್ರಸ್ತುತ ನಿಯಮಗಳ ಪ್ರಕಾರ, 14.2 ಕೆಜಿ ಗೃಹಬಳಕೆಯ […]
ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ ಐಟಿ ಉದ್ಯೋಗಿ!

ಕಾರವಾರ: ರೀಲ್ಸ್ ಮಾಡುವ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ಐಟಿ ಉದ್ಯೋಗಿಯೊಬ್ಬರು ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಸಮುದ್ರತೀರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ಮೂಲದ 26 ವರ್ಷದ ಜೀವನ್ ಭಟ್ಟರಾಯಿ ಎಂಬ ಯುವಕ ಸಮುದ್ರದಲ್ಲಿ ಕೊಚ್ಚಿಹೋಗಿರುವ ವ್ಯಕ್ತಿ. ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಐದು ಮಂದಿ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಕುಮಟಾಕ್ಕೆ ಬಂದಿದ್ದು, ಕಳೆದ ಮೂರು ದಿನಗಳಿಂದ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದರು. ಭಾನುವಾರ ರೆಸಾರ್ಟ್‌ನಿಂದ ಚೆಕ್‌ಔಟ್ ಮಾಡುವ ಮುನ್ನ ಸ್ನೇಹಿತರೊಂದಿಗೆ ಕಡ್ಲೆ […]
ಮಣಿಪಾಲ: ಚಲಿಸುತ್ತಿದ್ದ ಶಾಲಾ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ- ತಪ್ಪಿದ ಭಾರೀ ಅನಾಹುತ

ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹಠಾತ್ ಹೃದಯಾಘಾತ ಉಂಟಾಗಿ ಬಸ್ ಡಿವೈಡರ್‌ಗೆ ಡಿಕ್ಕಿಯಾದ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ಕೂದಲೆಳೆಯಂತರದಲ್ಲಿ ತಪ್ಪಿದೆ.ಮಣಿಪಾಲದ ಮಾಧವ ಕೃಪಾ ಶಾಲೆಗೆ ಸೇರಿದ ಬಸ್ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕ ಸುರೇಶ್ ಸಣ್ಣಕ್ಕಿಬೆಟ್ಟು (54) ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ಬಸ್‌ನ ನಿಯಂತ್ರಣ ಕಳೆದುಕೊಳ್ಳುವ ಮುನ್ನವೇ ವಾಹನವನ್ನು ರಸ್ತೆ ಬದಿಗೆ ತರುವ ಪ್ರಯತ್ನ ನಡೆಸಿದರು.ಈ ವೇಳೆ ಬಸ್ ಡಿವೈಡರ್‌ಗೆ […]
ನಟಿ ಅನುಷ್ಕಾ ಶರ್ಮ ಧರಿಸಿದ್ದ ತುಳಸಿ ಕಂಠಿ ಮಾಲೆಗೆ ಈಗ ಭಾರೀ ಡಿಮ್ಯಾಂಡ್, ಅಷ್ಟಕ್ಕೂ ಬಾಲಿವುಡ್ ಬೆಡಗಿಯ ಈ ತುಳಸೀಮಾಲೆಯಲ್ಲಿ ಅಂತದ್ದೇನಿದೆ?

ಮುಂಬೈ: ನಟಿ ಅನುಷ್ಕಾ ಶರ್ಮ ಧರಿಸಿದ್ದ ತುಳಸಿ ಕಂಠಿ ಮಾಲೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅದರ ಪರಿಣಾಮವಾಗಿ ವಿವಿಧ ಬ್ರ್ಯಾಂಡ್‌ಗಳ ತುಳಸಿ ಮಾಲೆಗಳ ಬೇಡಿಕೆ ಮತ್ತು ಮಾರಾಟದಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ. ಇತ್ತೀಚೆಗೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಅನುಷ್ಕಾ ಶರ್ಮಾ ಧರಿಸಿದ್ದ ಗಾಢ ಬಣ್ಣದ ತುಳಸಿ ಕಂಠಿ ಮಾಲೆ ಅಭಿಮಾನಿಗಳ ಗಮನ ಸೆಳೆದಿತ್ತು. ಪಂದ್ಯ ಪ್ರಸಾರದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ಮಾಲೆಯ ಕುರಿತು ವ್ಯಾಪಕ ಚರ್ಚೆ ಆರಂಭವಾಗಿದ್ದು, ಅನೇಕರು ಅದೇ […]