15,000 ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ತಯಾರಿ: ಶಿಕ್ಷಕರಾಗುವ ಕನಸಿದ್ದರೆ ನೀವೂ ಪರೀಕ್ಷೆಗೆ ಸಿದ್ದರಾಗಿರಿ

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸುದ್ದಿ ಲಭ್ಯವಾಗಿದೆ. Karnataka School Education Department ಮುಂದಿನ 100 ದಿನಗಳೊಳಗೆ ಸುಮಾರು 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಿದ್ಧತೆ ನಡೆಸಿದ್ದು, ಈ ಸಂಬಂಧ ಇನ್ನೊಂದು ವಾರದೊಳಗೆ ಅಧಿಕೃತ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ. 15 ಸಾವಿರ ಶಿಕ್ಷಕರ ನೇಮಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಮೊದಲ ಹಂತದಲ್ಲಿ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ […]
ಮತ್ತೆ ಮ್ಯಾಗಿ ಸಂಕಷ್ಟದಲ್ಲಿ,ಕೀಟ ಪತ್ತೆಪ್ರಕರಣ,FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು!

ಭಾರತದ ಮನೆಮಾತಾಗಿರುವ ಮ್ಯಾಗಿ ನ್ಯೂಡಲ್ಸ್ Maggi Noodles ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮ್ಯಾಗಿಯೊಳಗೆ ಕೀಟ ಪತ್ತೆ, ಎಂದು ವಿಡಿಯೋ ವೈರಲ್ ಆದ ಬೆನ್ನಲ್ಲೇ, ಅಲ್ಲದೇ ಮ್ಯಾಗಿ ಮೇಲೆ ಗ್ರಾಹಕರ ದೂರಿನ ಆಧಾರದ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ Food Safety and Standards Authority of India, Nestlé Indiaಗೆ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ. ಮ್ಯಾಗಿ ನೂಡಲ್ಸ್ ಪ್ಯಾಕೆಟ್‌ನಲ್ಲಿ ಕೀಟ ಅಥವಾ ಲಾರ್ವಾ ಪತ್ತೆಯಾಗಿದೆ ಎಂಬ ಆರೋಪವೇ ಈ ಬೆಳವಣಿಗೆಗೆ ಕಾರಣವಾಗಿದೆ. […]
ಕಾಂಗ್ರೆಸ್ ಬಾಗಿಲು ಬಡಿಯುವ ಬರಗಾಲ ನನಗೆ ಬಂದಿಲ್ಲ: ಕಾಂಗ್ರೆಸ್ ಸೇರ್ಪಡೆ ವಂದತಿ ತಳ್ಳಿ ಹಾಕಿದ ಪ್ರಮೋದ್ ಮಧ್ವರಾಜ್!

ಉಡುಪಿ: ತಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂಬ ಸುದ್ದಿ ಸಂಪೂರ್ಣ ಆಧಾರರಹಿತವಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್ ಬಾಗಿಲು ಬಡಿಯುವ ಬರಗಾಲ ನನಗೆ ಬಂದಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಕುರಿತು ಆಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ‘ನಾನು ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕಾಗಿ ಸೇರಿಲ್ಲ. ಜನಸೇವೆಯ ಉದ್ದೇಶದಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಅಧಿಕಾರ ಅಥವಾ ಹುದ್ದೆಗಳು ಬಂದರೆ ಅದು ಹೆಚ್ಚುವರಿ ಜವಾಬ್ದಾರಿಯಷ್ಟೇ. ನನ್ನ […]
ಏಂಜೆಲ್ ಝುಂಬಾ ಫಿಟ್ನೆಸ್ ವತಿಯಿಂದ ಝುಂಬಾ ಬಾಲಿವುಡ್ ಮಾಸ್ಟರ್ ಕ್ಲಾಸ್

ಉಡುಪಿ: ಏಂಜೆಲ್ ಝುಂಬಾ ಮತ್ತು ಫಿಟ್ನೆಸ್ ಸ್ಟುಡಿಯೋ ವತಿಯಿಂದ “ಝುಂಬಾ ಬಾಲಿವುಡ್ ತಡ್ಕಾ ಮಾಸ್ಟರ್ ಕ್ಲಾಸ್” 14TH,ಜೂನ್ 2026ರಂದು ಬೆಳಿಗ್ಗೆ10:00 – 12;30 ಉಡುಪಿಯಲ್ಲಿ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಝುಂಬಾ ವಿಶೇಷ ಬಾಲಿವುಡ್ ತಡ್ಕಾ ಮಾಸ್ಟರ್ ಕ್ಲಾಸ್ ತರಗತಿಯನ್ನು ನಡೆಯಲಿದೆ. ಫಿಟ್ನೆಸ್ ಹಾಗೂ ನೃತ್ಯ ಪ್ರಿಯರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸಲು ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದ್ದು NON MEMBERS:Rs 250/- ,KIDS (NO AGE LIMIT):Rs 150/- ಎಂದು ತಿಳಿಸಲಾಗಿದೆ. ಆಸಕ್ತರು ಮುಂಚಿತವಾಗಿ ರಿಜಿಸ್ಟರ್ […]
ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ–ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ

ಉಡುಪಿ: ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ 80 ಬಡಗಬೆಟ್ಟು ಗ್ರಾಮದ ರಾಜೀವನಗರ ನಿವಾಸಿ ಜಗದೀಶ ಪೂಜಾರಿ (33) ಎಂಬಾತನನ್ನು ಪಿಐಟಿ–ಎನ್‌ಡಿಪಿಎಸ್ (PIT-NDPS) ಕಾಯ್ದೆಯಡಿ ಬಂಧಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯ ಆಧಾರದಲ್ಲಿ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರು ಬಂಧನ ಆದೇಶ ಹೊರಡಿಸಿದ್ದು, ಅದರಂತೆ ಜೂನ್ 12ರಂದು ಆರೋಪಿಯನ್ನು ಬಂಧಿಸಲಾಗಿದೆ. ಜಗದೀಶ ಪೂಜಾರಿ ವಿರುದ್ಧ ಮಣಿಪಾಲ ಹಾಗೂ ಸೆನ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಮಾದಕ ದ್ರವ್ಯ […]