ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕೆಎಸ್ಆರ್ ಟಿಸಿ ನಗರ ಬಸ್ ಸೇವೆ ಆರಂಭ : ಇಲ್ಲಿದೆ ಬಸ್ ವೇಳಾಪಟ್ಟಿ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಮಂಗಳೂರು ವಿಭಾಗವು ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಿಂದ ವಿವಿಧ ಭಾಗಗಳಿಗೆ ನಗರ ಬಸ್ ಸೇವೆಗಳನ್ನು ಆರಂಭಿಸಿದ್ದು, ರೈಲ್ವೆ ಪ್ರಯಾಣಿಕರು ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದೆ. ರೈಲು ನಿಲ್ದಾಣದಿಂದ ನಗರದ ವಿವಿಧ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಭಾಗಗಳಿಗೆ ಸುಗಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ಮಂಗಳೂರು-3 ಘಟಕ ಈ ಹೊಸ ಸೇವೆಯನ್ನು ಜಾರಿಗೊಳಿಸಿದೆ. ಕಟೀಲು ಮಾರ್ಗದ ಬಸ್ ಸೇವೆಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ […]
ರೈಲು ತಡವಾಯಿತೆಂದು ಈ ದಂಪತಿಗಳು ಸುಮ್ಮನೇ ಕೂರಲಿಲ್ಲ,ರೈಲ್ವೆಯಿಂದಲೇ ₹69 ಸಾವಿರ ಪರಿಹಾರ ವಸೂಲಿ ಮಾಡಿಯೇ ಬಿಟ್ಟರು!

ಸಾಮಾನ್ಯವಾಗಿ ರೈಲು ತಡವಾದಾಗ ಪ್ರಯಾಣಿಕರು ತೊಂದರೆ ಅನುಭವಿಸಿ ಸುಮ್ಮನಾಗಿಬಿಡುತ್ತಾರೆ. ಆದರೆ ರಾಜಸ್ಥಾನದ ದಂಪತಿಯೊಬ್ಬರು ರೈಲು ವಿಳಂಬದಿಂದ ಉಂಟಾದ ನಷ್ಟಕ್ಕೆ ನ್ಯಾಯಾಲಯದ ಮೊರೆ ಹೋಗಿ ₹69 ಸಾವಿರ ಪರಿಹಾರ ಪಡೆದಿರುವ ಘಟನೆ ಗಮನ ಸೆಳೆದಿದೆ. ರಾಜಸ್ಥಾನದ ಕೋಟಾ ನಿವಾಸಿಗಳಾದ ಅನಿಲ್ ರಾಣಾ ಮತ್ತು ಅನಿತಾ ರಾಣಾ ಅವರು 2017ರ ಡಿಸೆಂಬರ್‌ನಲ್ಲಿ ಕೇರಳ ಪ್ರವಾಸಕ್ಕೆ ಯೋಜನೆ ರೂಪಿಸಿದ್ದರು. ದೆಹಲಿಯಿಂದ ತಿರುವನಂತಪುರಕ್ಕೆ ವಿಮಾನ ಪ್ರಯಾಣಕ್ಕಾಗಿ ₹33,929 ವೆಚ್ಚದಲ್ಲಿ ಟಿಕೆಟ್ ಬುಕ್ ಮಾಡಿದ್ದರು. ದೆಹಲಿಗೆ ತಲುಪಲು ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ […]