ಬಿಜೆಪಿಗೆ ಗುಡ್ ಬೈ ಹೇಳಿದ ಅಣ್ಣಾಮಲೈ, ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಸೂಚನೆ!

ನವದೆಹಲಿ: ಕಳೆದ ಕೆಲವು ದಿನಗಳಿಂದ ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈ K. Annamalai ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ಊಹಾಪೋಹಗಳಿಗೆ ಇದೀಗ ಅಧಿಕೃತ ರೂಪ ಸಿಕ್ಕಿದೆ. ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಅವರು ಮಂಗಳವಾರ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾಹಿತಿಯ ಪ್ರಕಾರ, ಅಣ್ಣಾಮಲೈ ಅವರು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ Nitin Nabin ಅವರಿಗೆ ಐದು ಪುಟಗಳ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ […]

“ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ ಆಂಡ್ ಮ್ಯಾನೇಜೆಂಟ್ ಮತ್ತು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಕಾಲೇಜು ವಾರ್ಷಿಕೋತ್ಸವ ಆಚರಿಸಲಾಯಿತು”

ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ ಆಂಡ್ ಮ್ಯಾನೇಜೆಂಟ್ ಮತ್ತು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಕಾಲೇಜು ವಾರ್ಷಿಕೋತ್ಸವ ಆಚರಿಸಲಾಯಿತು, ಮುಖ್ಯ ಅತಿಥಿಯಾಗಿ ಮಾತನಾಡಿದ ಯುವ ಉಧ್ಯಮಿ ಹಂಗ್ರಿ ಶಾರ್ಕ್ ಮೀಡಿಯಾ ಸಂಸ್ಥಾಪಕ ಯುದಿಸ್ಮರ್ ನಾರಾಯಣ್ಮಾತನಾಡಿ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣದ ಕಡೆಗೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ತುಂಬಾ ಸಂತಸ ತಂದಿದೆ ಅದರ ಜೊತೆಗೆ ವೈಯಕ್ತಿಕವಾಗಿ ಸ್ವಂತ ಉದ್ಯೋಗವನ್ನು ಸ್ಥಾಪಿಸಿ ಒಂದಷ್ಟು ಜನರಿಗೆ ಉದ್ಯೋಗ ನೀಡುವ ವಿದ್ಯಾರ್ಥಿಗಳಾಗಬೇಕು. ಈ ದೇಶಕ್ಕೆ ನಮ್ಮದಾದ ಕೊಡುಗೆಯನ್ನು ನೀಡುವ ವ್ಯಕ್ತಿಗಳಾಗಬೇಕು ಎಂದರು. ಅಧ್ಯಕ್ಷತೆ […]

ಹೆಬ್ರಿಯ ಉದ್ಯಮಿ ಮನೆಯಲ್ಲಿ ಕಳ್ಳತನ- ಮೂವರು‌ ಆರೋಪಿಗಳ ಬಂಧನ

ಉಡುಪಿ: ಹೆಬ್ರಿಯ ಅನಂತನಗರದಲ್ಲಿರುವ ಉದ್ಯಮಿ ಕೀರ್ತನ್ ಪ್ರಭು ಅವರ ಮನೆಯಲ್ಲಿ ನಡೆದಿದ್ದ ಸುಮಾರು ₹60 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ಇತರೆ ಬೆಲೆಬಾಳುವ ವಸ್ತುಗಳ ಕಳ್ಳತನ ಪ್ರಕರಣವನ್ನು ಹೆಬ್ರಿ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡು ಮೂಲದ, ಪ್ರಸ್ತುತ ಕೇರಳದಲ್ಲಿ ವಾಸವಾಗಿರುವ ಸಲೀಂ, ಮೂಡುಬಿದಿರೆಯ ಮಿಜಾರು ನಿವಾಸಿ ಹರೀಶ್ ಶೆಟ್ಟಿ ಹಾಗೂ ಕೇರಳದ ಕಾಸರಗೋಡು ಮೂಲದ ಮಹಮ್ಮದ್ ಸಫ್ಘಾನ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಕೀರ್ತನ್ ಪ್ರಭು ಅವರ ಮನೆಗೆ ನುಗ್ಗಿದ್ದ […]

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಪ್ರಯಾಣಿಕನ ಜೀವ ಉಳಿಸಿದ ಆರ್‌ಪಿಎಫ್ ಇನ್ಸ್‌ಪೆಕ್ಟರ್

ಶಿವಮೊಗ್ಗ: ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ್ದ ಪ್ರಯಾಣಿಕನನ್ನು ಆರ್‌ಪಿಎಫ್ ಇನ್ಸ್‌ಪೆಕ್ಟರ್ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ನಡೆದಿದೆ. ಪ್ಲಾಟ್‌ಫಾರ್ಮ್ ಸಂಖ್ಯೆ 1ರಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯಾಣಿಕನೊಬ್ಬ ಯತ್ನಿಸಿದ ವೇಳೆ ಸಮತೋಲನ ಕಳೆದುಕೊಂಡು ಕೆಳಗೆ ಬೀಳುವ ಸ್ಥಿತಿಗೆ ತಲುಪಿದ್ದ. ಈ ವೇಳೆ ಪರಿಸ್ಥಿತಿಯನ್ನು ಗಮನಿಸಿದ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಬಿ.ಕೆ. ಪ್ರಕಾಶ್ ತಕ್ಷಣ ಸ್ಥಳಕ್ಕೆ ಧಾವಿಸಿ, ಅಪಾಯದಲ್ಲಿದ್ದ ಪ್ರಯಾಣಿಕನನ್ನು ಸುರಕ್ಷಿತವಾಗಿ ರೈಲು ಬೋಗಿಯೊಳಗೆ ತಳ್ಳುವ ಮೂಲಕ ಜೀವ ಉಳಿಸಿದ್ದಾರೆ. ಈ ಸಾಹಸಮಯ ರಕ್ಷಣಾ […]

ರೇಷ್ಮೆ ಸೀರೆ ಖರೀದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ: ಟಿಪ್ಸ್ ಅನುಸರಿಸಿ

ರೇಷ್ಮೆ ಸೀರೆ ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಮದುವೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಮಾರಂಭಗಳಲ್ಲಿ ರೇಷ್ಮೆ ಸೀರೆ ಧರಿಸುವುದು ವಿಶೇಷ ಆಕರ್ಷಣೆಯಾಗಿದೆ. ಆದರೆ ರೇಷ್ಮೆ ಸೀರೆ ಖರೀದಿಸುವಾಗ ಕೆಲವು ಪ್ರಮುಖ ಅಂಶಗಳನ್ನು ಗಮನಿಸಿದರೆ ಉತ್ತಮ ಗುಣಮಟ್ಟದ ಸೀರೆಯನ್ನು ಆಯ್ಕೆ ಮಾಡಬಹುದು. ರೇಷ್ಮೆಯ ಗುಣಮಟ್ಟ ಪರಿಶೀಲಿಸಿ ರೇಷ್ಮೆ ಸೀರೆ ಖರೀದಿಸುವಾಗ ಅದರ ಗುಣಮಟ್ಟವನ್ನು ಮೊದಲು ಪರಿಶೀಲಿಸಬೇಕು. ಶುದ್ಧ ರೇಷ್ಮೆಯು ನೈಸರ್ಗಿಕ ಹೊಳಪು ಮತ್ತು ಮೃದುವಾದ ಸ್ಪರ್ಶವನ್ನು ಹೊಂದಿರುತ್ತದೆ. ಕಡಿಮೆ ಗುಣಮಟ್ಟದ ಸೀರೆಗಳು ಬೇಗನೆ ಹಾಳಾಗುವ […]