ಮೊರಾರ್ಜಿ ದೇಸಾಯಿ ವಸತಿ ಶಾಲೆ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಡಾ.ಬಿ.ಆರ್ ಅಂಬೇಡ್ಕರ್, ಇಂದಿರಾ ಗಾಂಧಿ ಹಾಗೂ ನಾರಾಯಣಗುರು ವಸತಿ ಶಾಲೆಗಳಲ್ಲಿ 7,8,9 ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು ಅಗತ್ಯ ದಾಖಲೆಗಳೊಂದಿಗೆ ಜೂನ್ 10 ರೊಳಗೆ ವಸತಿ ಶಾಲೆಗಳ ಕಚೇರಿಗೆ ಸಲ್ಲಿಸಬಹುದಾಗಿದೆ. ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ:8277894199, 8970298710 ಅನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ […]
ಮಹಿಳೆಯ ಗರ್ಭಕೋಶದಿಂದ ಮಹತ್ವದ ಶಸ್ತ್ರಚಿಕಿತ್ಸೆ ನಡೆಸಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರ ತಂಡ

ಉಡುಪಿ: ಮಹಿಳೆಯ ಗರ್ಭಕೋಶದಿಂದ ಮಹತ್ವದ ಶಸ್ತ್ರಚಿಕಿತ್ಸೆ ನಡೆಸಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರ ತಂಡವು 8 ಕೆ.ಜಿ ಗ್ರಾತದ Fibroid Uterus ಗರ್ಭಕೋಶದ ಗಡ್ಡೆಯನ್ನು ತೆಗೆದಿದ್ದಾರೆ. ರೋಗಿಯು ಇದೀಗ ಚೇತರಿಸಿಕೊಳ್ಳುತ್ತಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ.ಶಶಾಂಕ್ ಕಿಣಿ, ಡಾ. ಜಾಸ್ಮಿನ್, ಡಾ.ಕವಿತಾ, ಡಾ.ಅಮೃತಾಂಶ್ ಇವರ ತಂಡ ಮತ್ತು ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ, ಡಾ.ರಾಜ್ ಗೋಪಾಲ್ ಭಂಡಾರಿ ಹಾಗೂ ಇವರ ಸಹಾಯದಲ್ಲಿ ಶುಶ್ರೂಷಕಧಿಕಾರಿ ರಕ್ಷಿತಾ, ಓ.ಟಿ […]
ಬ್ರಹ್ಮಾವರ: ವ್ಯಕ್ತಿ ನಾಪತ್ತೆ

ಉಡುಪಿ: ಬ್ರಹ್ಮಾವರ ಹೊಸಾಳ ಗ್ರಾಮದ ಬಾರ್ಕೂರು ನಿವಾಸಿ ಪ್ರತಾಪ್ ಶೆಟ್ಟಿ(42) ಎಂಬವರು ಏಪ್ರಿಲ್ 7 ರಂದು ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಬೆಂಗಳೂರಿಗೆ ಹೋಗದೆ ಏಪ್ರಿಲ 13 ರಂದು ಕಾಡೂರು ಹೊಳೆಯಲ್ಲಿ ಕಲ್ಲಿನ ಮೇಲೆ ಉಡುಪುಗಳು ಹಾಗೂ ಮೊಬೈಲ್ ಬಿಟ್ಟು ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು ಕನ್ನಡ, ಹಿಂದಿ, ತಮಿಳು ಮಾತಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ದೂ.ಸಂ: 0820-2461044, 9480805453 ಅನ್ನು […]
ಉಡುಪಿ: ವಿದ್ಯಾ ಟ್ಯುಟೋರಿಯಲ್’ನಲ್ಲಿ ಪ್ರವೇಶಾತಿ ಆರಂಭ.

ಉಡುಪಿ: ಉಡುಪಿಯ ಹೆಸರಾಂತ ವಿದ್ಯಾ ಟ್ಯುಟೋರಿಯಲ್ ಕಾಲೇಜ್ ನಲ್ಲಿ ವಿವಿಧ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಎಸ್.ಎಸ್.ಎಲ್.ಸಿ. ಪಾಸಾದವರು ಅಥವಾ ಪ್ರಥಮ ಪಿ.ಯು.ಸಿ ಫೇಲಾಧವರು ನೇರವಾಗಿ ದ್ವಿತೀಯ ಪಿ.ಯು.ಸಿ ಮಾಡಬಹುದು. 7,8 ಅಥವಾ 9 ನೇ ತರಗತಿ ಫೇಲಾದವರು ನೇರವಾಗಿ ಎಸ್.ಎಸ್.ಎಲ್.ಸಿ ಮಾಡಬಹುದು.ಇದಲ್ಲದೆ 8, 9 ಮತ್ತು 10 ನೇ ತರಗತಿಯ ಎಲ್ಲಾ ವಿಷಯಗಳು, ಪಿ.ಯು.ಸಿ ಯ ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್, ಬಿಸಿನೆಸ್ ಸ್ಟಡೀಸ್ ಹಾಗೂ ಕಂಪ್ಯೂಟರ್ ಸೈನ್ಸ್ ಮುಂತಾದ ವಿಷಯಗಳಿಗೆ ತರಬೇತಿ ನೀಡಲಾಗುವುದು. ಇಂದೇ ಭೇಟಿಯಾಗಿ ವಿದ್ಯಾ ಟ್ಯುಟೋರಿಯಲ್ […]
ಷೇರು ಹೂಡಿಕೆ ಹೆಸರಲ್ಲಿ ₹6.80 ಕೋಟಿ ವಂಚನೆ; ನಿವೃತ್ತ ಉದ್ಯೋಗಿಗೆ ಟೋಪಿ ಹಾಕಿದ ವಂಚಕರು!

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಗಳಿಸಿಕೊಡುವುದಾಗಿ ನಂಬಿಸಿ ಸೈಬರ್ ವಂಚಕರು 59 ವರ್ಷದ ವ್ಯಕ್ತಿಯೊಬ್ಬರಿಗೆ ₹6.80 ಕೋಟಿ ವಂಚಿಸಿರುವ ಘಟನೆ ದಕ್ಷಿಣ ಮುಂಬೈನ ಟಾರ್ಡಿಯೊ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಲಂಡನ್ ಮೂಲದ ಹಣಕಾಸು ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ಈ ವಂಚನೆ ನಡೆಸಲಾಗಿದೆ. ಜಾಲತಾಣದಲ್ಲಿ ಪ್ರಕಟವಾದ ಹೂಡಿಕೆ ಜಾಹೀರಾತನ್ನು ನೋಡಿ ನಿವೃತ್ತ ಉದ್ಯೋಗಿಯೊಬ್ಬರು ವಂಚಕರು ರಚಿಸಿದ್ದ ವಾಟ್ಸಪ್ ಗುಂಪಿಗೆ ಸೇರಿದ್ದರು. ಈ ಗುಂಪಿನ ಮೂಲಕ ಹೂಡಿಕೆ ಸಲಹೆಗಳನ್ನು ನೀಡಲಾಗುತ್ತಿದ್ದು, ಸಂಸ್ಥೆಯ ಮೂಲಕ ಹೂಡಿಕೆ […]