“ಕೋಟ ಮೂರ್ತೆದಾರರ ಸಹಕಾರಿ ಸಂಘ ಮಹಾಸಭೆ”

570 ಕೋಟಿ ರೂ. ವ್ಯವಹಾರ, 1.15 ಕೋಟಿ ನಿವ್ವಳ ಲಾಭ ಕೋಟ: ಮೂರ್ತೆದಾರರ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ 570 ಕೋಟಿ ರೂ. ವ್ಯವಹಾರ ನಡೆಸಿ ರೂ. 1.15 ಕೋಟಿ ನಿವ್ವಳ ಲಾಭ ಗಳಿಸಿದ್ದು. ಶೇ. 13 ಡಿವಿಡೆಂಡ್ ನ್ನು ಸಂಘದ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ಜರುಗಿದ ಸಂಘದ 35ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಘೋಷಿಸಿದರು. ಸಂಘದ 6 ಶಾಖೆಗಳ ಮೂಲಕ ರೂ.102.67 ಕೋಟಿ ಠೇವಣಿ ಸಂಗ್ರಹಿಸಿದ್ದು; ಕಳೆದ ಬಾರಿಗೆ ಹೋಲಿಸಿದರೆ […]
ಲಾರಿ-ಕಾರು ಅಪಘಾತ: ಕಾರ್ಕಳ ನಕ್ರೆಯ ಐವರು ಗಂಭೀರ

ಉಪ್ಪಿನಂಗಡಿ: ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಉಪ್ಪಿನಂಗಡಿಯ ಕೂಟೇಲು ಸಮೀಪ ನಡೆದಿದೆ. ಕಾರ್ಕಳದ ನಕ್ರೆ ಗ್ರಾಮದ ಕುಟುಂಬವೊಂದು ಸುಬ್ರಹ್ಮಣ್ಯಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಡುಗೆ ಅನಿಲ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಚಾಲಕ ದೀಪಕ್ (45), ಗುರುರಾಜ್ (46), ಧನುಷ್ (15), ಭಾರತಿ (48) ಹಾಗೂ ಗೀತಾ (55) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ರಕ್ಷಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ […]
“ಎಕ್ಸ್ಪರ್ಟ್ ಪಿಯು ಕಾಲೇಜು: ಜೆಇಇ ಎಡ್ವಾನ್ಸ್ಡ್’ನಲ್ಲಿ ಉತ್ತಮ ಫಲಿತಾಂಶ”

ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ಅಖಿಲ ಭಾರತ ಮಟ್ಟದ ಜೆಇಇ ಎಡ್ವಾನ್ಸ್ಡ್’ ಪರೀಕ್ಷೆಯ ಜನರಲ್ ಮೆರಿಟ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಸುಹಾಸ್ ಬಸನಗೌಡ ಬಾಲನಗೌಡ್ರ ಜನರಲ್ ಕೆಟಗರಿ ವಿಭಾಗದಲ್ಲಿ 2593 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.ಜನರಲ್ ಮೆರಿಟ್ ವಿಭಾಗದಲ್ಲಿ ಅರಳೆ ವಿರೂಪಾಕ್ಷಿ 7885ನೇ ರ‍್ಯಾಂಕ್, ನಿಖಿಲ್ ಭೂಷಣ್ ಶ್ರೀನಿವಾಸ್ 9150ನೇ ರ‍್ಯಾಂಕ್, ಪ್ರಖ್ಯಾತ್ ತಿರುಪತಿರಡ್ಡಿ ನೀಲಣ್ಣವರ್ 9806ನೇ ರ‍್ಯಾಂಕ್, ಕ್ಯಾಟಗರಿ ವಿಭಾಗದಲ್ಲಿ ಟಿ.ಶ್ರೀ ಸಾಯಿ ಕಾರ್ತಿಕ್ 318 ನೇ ರ‍್ಯಾಂಕ್, […]
ಕೃತಿ ಕೈಲಾರ್‌ಗೆ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯ ಗರಿ

ಉಪ್ಪಿನಂಗಡಿ: ಭರತನಾಟ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉಪ್ಪಿನಂಗಡಿಯ ಬಹುಮುಖ ಪ್ರತಿಭೆ ಕೃತಿ ಕೈಲಾರ್ ಅವರಿಗೆ ಪ್ರಸಾರ ಭಾರತಿ ದೂರದರ್ಶನದಿಂದ ‘ಬಿ’ ಗ್ರೇಡ್ ಕಲಾವಿದೆಯಾಗಿ ಮಾನ್ಯತೆ ದೊರೆತಿದೆ. ಉಪ್ಪಿನಂಗಡಿಯ ಕೈಲಾರ್ ರಾಜ ಗೋಪಾಲ ಭಟ್ ಮತ್ತು ಸತ್ಯೇಶ್ವರಿ ದಂಪತಿ ಪುತ್ರಿಯಾಗಿರುವ ಈಕೆ ಭರತ ನಾಟ್ಯ ಶಾಸ್ತ್ರ ಪ್ರವೀಣೆಯಾಗಿದ್ದು, ವಿವಿಧ ವೇದಿಕೆಗಳಲ್ಲಿ ತನ್ನ ನೃತ್ಯ ಪ್ರದರ್ಶನದ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಬಾಲ್ಯದಿಂದಲೇ ನೃತ್ಯ ಮಾತ್ರವಲ್ಲದೇ ಸಂಗೀತ, ಕ್ರೀಡೆ, ಯೋಗಾಸನ, ಓದು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿರುವ ಬಹುಮುಖ ಪ್ರತಿಭೆ ಕೃತಿ […]
ಬನ್ನಾಡಿ ರಾಜೀವ ಪೂಜಾರಿ ನಿಧನ

ಎನ್ ಆರ್ ಪುರ ನಿವಾಸಿ ಬನ್ನಾಡಿ ರಾಜೀವ ಪೂಜಾರಿ (66)ಯವರು ಜೂನ್ 1 ರಂದು ಸ್ವಗ್ರಹದಲ್ಲಿ ಅಕಾಲಿಕವಾಗಿ ನಿಧನ ಹೊಂದಿದರು. ಮೃತರು ಪತ್ನಿ ಪುತ್ರ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಎನ್ .ಆರ್. ಪುರದಲ್ಲಿ ಯಶಸ್ವಿ ಉದ್ಯಮಿಯಾಗಿ, ಹತ್ತು ಹಲವು ಸಂಘಟನೆಗಳಲ್ಲಿ, ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನರಸಿಂಹರಾಜಪುರ ಬಿಲ್ಲವ ಸಂಘದ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.