ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವ ಸಂಕಲ್ಪದೊಂದಿಗೆ ಕಟೀಲಿನಲ್ಲಿ ರಂಗ ಪೂಜೆ

ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಿನ್ನಿಗೋಳಿ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ ಮೇ 31ರಂದು ರಾತ್ರಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ರಂಗ ಪೂಜೆ ನೆರವೇರಿಸಲಾಯಿತು. ರಾಜ್ಯದ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ D. K. Shivakumar ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿ ಯಾವುದೇ ಅಡೆತಡೆಗಳಿಲ್ಲದೆ ಉತ್ತಮ ಆಡಳಿತ ನೀಡಲೆಂಬ ಸಂಕಲ್ಪದೊಂದಿಗೆ ಈ ಪೂಜೆ ಆಯೋಜಿಸಲಾಗಿತ್ತು. ಕಟೀಲು ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ಶ್ರೀ ದುರ್ಗಾ ಪರಮೇಶ್ವರಿಗೆ ಪ್ರಿಯವಾದ ರಂಗ ಪೂಜೆ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮದಲ್ಲಿ […]

IPL 2026: RCBಗೆಲುವಿನ ಬೆನ್ನಲ್ಲೇ ಪತ್ನಿ ಅನುಷ್ಕಾ ಜೊತೆ ಕೊಹ್ಲಿ ಸಖತ್ ಡ್ಯಾನ್ಸ್!

ಅಹಮದಾಬಾದ್: ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ.ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಸಂಭ್ರಮಾಚರಣೆಯಲ್ಲಿ ಕುಣಿದ ವಿಡಿಯೋ […]

ಲಂಡನ್ ನಲ್ಲಿ 10 ನಿಮಿಷದಲ್ಲಿ 1200 ರೂ ಗಳಿಸಿದ ಭಾರತದ ಯುವಕ: ವೈರಲ್ ವೀಡಿಯೋ ಇಲ್ಲಿದೆ

ಲಂಡನ್: ರಸ್ತೆಬದಿಯಲ್ಲಿ ಪ್ರವಾಸಿಗರ ಫೋಟೋಗಳನ್ನು ಕ್ಲಿಕ್ಕಿಸಿ ಮಾರಾಟ ಮಾಡುವ ಮೂಲಕ ಹಣ ಗಳಿಸಲು ಮಲಯಾಳಿ ಯುವಕನೊಬ್ಬ ನಡೆಸಿದ ವಿಶಿಷ್ಟ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಷ್ಣು ವಿಜಯಾಧರನ್ ಎಂಬ ಯುವಕ ಸೆಂಟ್ರಲ್ ಲಂಡನ್‌ನಲ್ಲಿ ಪ್ರವಾಸಿಗರ ಹಾಗೂ ಸ್ಥಳೀಯರ ಫೋಟೋಗಳನ್ನು ತೆಗೆದು ಪ್ರತಿ ಫೋಟೋಗೆ 5 ಪೌಂಡ್ (ಸುಮಾರು ₹540) ದರ ನಿಗದಿಪಡಿಸಿ ಮಾರಾಟ ಮಾಡಲು ಮುಂದಾಗಿದ್ದರು. ಈ ಪ್ರಯೋಗದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಲ್ಪ ಸಮಯದಲ್ಲಿ ಎಷ್ಟು ಹಣ ಗಳಿಸಬಹುದು ಎಂಬ ಸವಾಲನ್ನೂ ಮುಂದಿಟ್ಟಿದ್ದರು. ಈ […]

“ಅಧಿವಕ್ತ ಪರಿಷತ್‌ ವತಿಯಿಂದ ನ್ಯಾಯಧೀಶರಾಗಿ ಆಯ್ಕೆಯಾದವರಿಗೆ ಅಭಿನಂದನ ಕಾರ್ಯಕ್ರಮ.”

ಉಡುಪಿ: ಉಡುಪಿ ಜಿಲ್ಲಾ ವಕೀಲರ ಸಂಘದಿಂದ ಜೆ.ಎಮ್.ಎಫ್.ಸಿ ನ್ಯಾಯಧೀಶರಾಗಿ ಆಯ್ಕೆಯಾದ ಶ್ರೀ ಸುಕೇಂದ್ರ ಇವರಿಗೆ ಉಡುಪಿ ಜಿಲ್ಲಾ ಅಧಿವಕ್ತ ಪರಿಷತ್‌ ವತಿಯಿಂದ ಅಭಿನಂದಿಸಲಾಯಿತು. ಇವರು ಉಡುಪಿ ನ್ಯಾಯಾಲಯದಲ್ಲಿ ಯುವ ನ್ಯಾಯವಾದಿಯಾಗಿ ವೃತಿಮಾಡುತ್ತಿದ್ದು ಇದೀಗ ಉಡುಪಿ ಜಿಲ್ಲೆಯಲ್ಲಿಯೇ ಆಯ್ಕೆಯಾದ ಏಕೈಕ ನ್ಯಾಯದೀಶರಾಗಿರುತ್ತಾರೆ. ಅಧಿವಕ್ತ ಪರಿಷತ್‌ ಜಿಲ್ಲಾ ವತಿಯಿಂದ ಇವರಿಗೆ ಸನ್ಮಾನಿಸಿ ಅಭಿನಂದಿಸಿದ್ದು, ಈ ಸಂದರ್ಭದಲ್ಲಿ ಅಧಿವಕ್ತ ಪರಿಷತ್‌ ಅಧ್ಯಕ್ಷರಾದ ಶ್ರೀ ಸಂತೋಷ್‌ ಹೆಬ್ಬಾರ್‌ ರವರು ಪ್ರಾಸ್ತವಿಕ ಭಾಷಣ ಮಾತನಾಡಿದ್ದು, ಉಡುಪಿ ವಕೀಲರ ಸಂಘದ ಮಾಜಿ ಕಾರ್ಯದರ್ಶಿಯಾದ ಶ್ರೀ ರಾಜೇಶ್‌ […]

ಮಂಗಳೂರು: ಇಂದಿನಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ

ಮಂಗಳೂರು: ಮೀನುಗಳ ಸಂತಾನೋತ್ಪತ್ತಿ ಹಾಗೂ ಸಂರಕ್ಷಣೆಯ ಉದ್ದೇಶದಿಂದ ರಾಜ್ಯ ಸರ್ಕಾರವು ಇಂದಿನಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಿದೆ. ಈ ಅವಧಿಯಲ್ಲಿ ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕೆ ಇಳಿಯಲು ಅವಕಾಶವಿರುವುದಿಲ್ಲ. ಮಳೆಗಾಲವು ಮೀನುಗಳ ಸಂತಾನೋತ್ಪತ್ತಿಯ ಪ್ರಮುಖ ಕಾಲವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಯಾಂತ್ರಿಕ ದೋಣಿಗಳ ಸಂಚಾರವು ಮೀನುಗಳ ಸಂತಾನೋತ್ಪತ್ತಿಗೆ ಅಡ್ಡಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ತಿಂಗಳ ಕಾಲ ಮೀನುಗಾರಿಕೆ ಚಟುವಟಿಕೆಗಳು ಬಹುತೇಕ ಸ್ಥಗಿತಗೊಳ್ಳಲಿವೆ. ಆದರೆ ನಾಡದೋಣಿ ಹಾಗೂ ಸಾಂಪ್ರದಾಯಿಕ ಬಲೆಗಳನ್ನು […]