ಸಾಗರ ತಹಶೀಲ್ದಾರ್ ಆಗಿ ಡಾ. ಪ್ರತಿಭಾ ಆರ್ ಅಧಿಕಾರ ಸ್ವೀಕಾರ

ಸಾಗರ: ಕರ್ನಾಟಕ ಸರ್ಕಾರದ ವರ್ಗಾವಣೆ ಆದೇಶದಂತೆ ಬೆಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಪ್ರತಿಭಾ ಆರ್ ಅವರು ಮೇ 30ರಂದು ಸಾಗರ ತಾಲೂಕು ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.ಜನಪರ ಆಡಳಿತ, ಸಾಮಾಜಿಕ ಕಳಕಳಿ ಹಾಗೂ ಶೈಕ್ಷಣಿಕ ಸಾಧನೆಗಳ ಮೂಲಕ ಗುರುತಿಸಿಕೊಂಡಿರುವ ಡಾ. ಪ್ರತಿಭಾ ಆರ್ ಅವರು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ಅವರು ವಿವಿಧ ಉನ್ನತ ವಿದ್ಯಾರ್ಹತೆಗಳನ್ನು ಹೊಂದಿದ್ದು, ಶಿಕ್ಷಣ ಇಲಾಖೆಯಲ್ಲಿ ವಿಷಯ ಪರಿವೀಕ್ಷಕ ಹಾಗೂ ಡಯೆಟ್ […]
ಮಣಿಪಾಲ: ರೌಡಿ ಗಣೇಶ್ ಗೂಂಡಾ ಕಾಯ್ದೆಯಡಿ ಬಂಧನ: ಕಲಬುರ್ಗಿಯ ಕೇಂದ್ರ ಕಾರಾಗೃಹಕ್ಕೆ ರವಾನೆ

ಉಡುಪಿ: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಗಣೇಶ್ (32) ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದ್ದು, ಆತನನ್ನು ಬಂಧಿಸಿ ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಜಿಲ್ಲಾಡಳಿತ ಆದೇಶಿಸಿದೆ. ಬಡಗಬೆಟ್ಟು ಗ್ರಾಮದ ನೇತಾಜಿನಗರ 4ನೇ ಅಡ್ಡರಸ್ತೆ ನಿವಾಸಿಯಾಗಿರುವ ಗಣೇಶ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಹಲ್ಲೆ, ಅಕ್ರಮ ಕೂಟ, ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಕಳ್ಳತನ ಸೇರಿದಂತೆ ಒಟ್ಟು ಒಂಭತ್ತು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೂರು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದು, ನಾಲ್ಕು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. […]
ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಮುಂದೂಡಿಕೆ!

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಕರಾವಳಿಯ ಮಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಜೂನ್ 3ರಂದು ನಡೆಯಲಿದೆ ಎನ್ನಲಾಗಿತ್ತು, ಆದರೆ ಈ ದಿನಾಂಕವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಇದೇ ತಿಂಗಳೊಳಗೆ ಹೊಸ ದಿನಾಂಕ ನಿಗದಿಪಡಿಸಿ ಪರೀಕ್ಷಾರ್ಥ ಸಂಚಾರ ನಡೆಸುವ ಸಾಧ್ಯತೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ನೈಋತ್ಯ ರೈಲ್ವೆ ಇಲಾಖೆಯು ಜೂನ್ ತಿಂಗಳಲ್ಲಿ ವಂದೇ ಭಾರತ್ ರೈಲಿನ ಟ್ರಯಲ್ ರನ್ ನಡೆಸಲು ತಾತ್ಕಾಲಿಕ ಯೋಜನೆ ರೂಪಿಸಿದೆ. ಆರಂಭದಲ್ಲಿ ನಾಲ್ಕು […]
ಐಸಿಎಐ ಉಡುಪಿ ಶಾಖೆ (SIRC); ಹೊಸ ಕಾಯ್ದೆ ಬಗ್ಗೆ 2 ದಿನಗಳ ಕಾರ್ಯಾಗಾರ ಸಂಪನ್ನ

ಉಡುಪಿ: ಐಸಿಎಐ ಉಡುಪಿ ಶಾಖೆ (SIRC)ಯು 2025ರ ಆದಾಯ ತೆರಿಗೆ ಕಾಯ್ದೆ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉಡುಪಿಯ ಓಷನ್ ಪರ್ಲ್ ಟೈಮ್ಸ್ ಸ್ಕ್ವೇರ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಮಂಗಳೂರು ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಸಿ. ಬಿ. ಸುರೇಶ್ ಕುಮಾರ್, ಐಆರ್‌ಎಸ್ ಉದ್ಘಾಟಿಸಿ, ಹೊಸ ಆದಾಯ ತೆರಿಗೆ ಕಾಯ್ದೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಅಗತ್ಯತೆಯನ್ನು ಒತ್ತಿಹೇಳಿದರು. ಈ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು ಚಾರ್ಟರ್ಡ್ ಅಕೌಂಟೆಂಟ್‌ಗಳು ಹಾಗೂ ತೆರಿಗೆ ವೃತ್ತಿಪರರು ಭಾಗವಹಿಸಿದರು. ಹೊಸ ಕಾಯ್ದೆಯ ಪ್ರಮುಖ ಅಂಶಗಳ […]
“ಉಡುಪಿ: ಭಾರತ್ ಮಾರ್ಕೆಟಿಂಗ್ ಸಂಸ್ಥೆಗೆ ಯುವಕರು ಬೇಕಾಗಿದ್ದಾರೆ.”

ಉಡುಪಿ: ಉಡುಪಿಯ ಬನ್ನಂಜೆ ನಾರಾಯಣಗುರು ಸಂಕೀರ್ಣ ದಲ್ಲಿರು ಪ್ರತಿಷ್ಠಿತ ಭಾರತ್ ಮಾರ್ಕೆಟಿಂಗ್ ಸಂಸ್ಥೆಗೆ ಯುವಕರು ಬೇಕಾಗಿದ್ದಾರೆ. ವಿದ್ಯಾರ್ಹತೆ ಅವಶ್ಯಕತೆ ಇರುವುದಿಲ್ಲ. ಆಕರ್ಷಕ ವೇತನ ನೀಡಲಾಗುವುದು. ಆಸಕ್ತರು ಸಂಸ್ಥೆಗೆ ಬಂದು ಭೇಟಿಯಾಗಬಹುದು. ಸಂಪರ್ಕಿಸಿ: 9845460303