ಭಾರತದಲ್ಲಿ ಶೀಘ್ರವೇ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲಿದೆ ಆರ್ ಬಿ ಐ!

ನವದೆಹಲಿ: ಭಾರತದಲ್ಲಿ ಶೀಘ್ರದಲ್ಲೇ ₹100, ₹200 ಮತ್ತು ₹500 ಮುಖಬೆಲೆಯ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳು ಚಲಾವಣೆಗೆ ಬರಬಹುದೆಂಬ ಚರ್ಚೆಗಳು ಮತ್ತೆ ಜೋರಾಗಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪಾಲಿಮರ್ ನೋಟುಗಳ ಪರಿಚಯಕ್ಕೆ ಸಂಬಂಧಿಸಿದ ತನ್ನ ಬಹುಕಾಲದ ಯೋಜನೆಯನ್ನು ಪುನರುಜ್ಜೀವನಗೊಳಿಸಿದ್ದು, ಶೀಘ್ರದಲ್ಲೇ ಪೈಲಟ್ ಯೋಜನೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಇತ್ತೀಚೆಗೆ ನಡೆದ ಆರ್‌ಬಿಐ ಮಂಡಳಿಯ ಸಭೆಗಳಲ್ಲಿ ಪಾಲಿಮರ್ ಕರೆನ್ಸಿ ಕುರಿತು ಮಹತ್ವದ ಚರ್ಚೆಗಳು ನಡೆದಿವೆ. ಯೋಜನೆ ಯಶಸ್ವಿಯಾದರೆ ಭಾರತೀಯ ಕರೆನ್ಸಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ […]

ಉಡುಪಿ: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉಡುಪಿ: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು: ಆಸಕ್ತ ಅಭ್ಯರ್ಥಿಗಳು 7 ದಿನಗಳಲ್ಲಿ [email protected] ಗೆ ಇಮೇಲ್ ಮಾಡಿ ಅರ್ಜಿ ಸಲ್ಲಿಸಬಹುದು.

ನಾಳೆಯಿಂದ ಶಾಲೆ ಶುರು, ಹಬ್ಬದ ವಾತಾವರಣದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು: ಬೇಸಿಗೆ ರಜೆ ಮುಗಿದ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ನಾಳೆಯಿಂದ (ಜೂನ್ 1) 2026-27ನೇ ಶೈಕ್ಷಣಿಕ ವರ್ಷದ ತರಗತಿಗಳು ಪುನರಾರಂಭವಾಗಲಿವೆ. ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವನ್ನು ವಿಶೇಷವಾಗಿ ಆಚರಿಸುವಂತೆ ಶಿಕ್ಷಣ ಇಲಾಖೆ ಶಾಲೆಗಳಿಗೆ ಸೂಚನೆ ನೀಡಿದೆ. ಅದರಂತೆ ಶಾಲಾ ಆವರಣವನ್ನು ತಳಿರು-ತೋರಣ, ಹೂವುಗಳು ಹಾಗೂ ಆಕರ್ಷಕ ಅಲಂಕಾರಗಳಿಂದ ಸಿಂಗಾರ ಮಾಡಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಬೇಕು ಎಂದು ತಿಳಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಶಾಲೆಯ ಬಗ್ಗೆ ಉತ್ಸಾಹ ಮತ್ತು ಸಂತಸ ಮೂಡಿಸುವ ಉದ್ದೇಶದಿಂದ ಹಬ್ಬದ ಸಡಗರದ ವಾತಾವರಣವನ್ನು ನಿರ್ಮಿಸಲು […]

ಗಂಡನಿಲ್ಲದ ವೇಳೆ ಪ್ರೀತಿಸಿದ ಪ್ರಿಯಕರನ ಜೊತೆಗೆ ರೊಮ್ಯಾನ್ಸ್, ಆಮೇಲೇನಾಯ್ತು? ಈ ಚಿತ್ರದ ಕ್ಲೈಮ್ಯಾಕ್ಸ್ ಸಖತ್!

ಒಟಿಟಿ ವೇದಿಕೆಗಳಲ್ಲಿ ಥ್ರಿಲ್ಲರ್ ಸಿನಿಮಾಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ಸಾಲಿನಲ್ಲಿ ಮಲಯಾಳಂ ಭಾಷೆಯ Udal ಸಿನಿಮಾ ಗಮನ ಸೆಳೆಯುತ್ತಿದೆ. ರೋಚಕ ಕಥಾಹಂದರ ಹಾಗೂ ಅನಿರೀಕ್ಷಿತ ತಿರುವುಗಳಿಂದ ಕೂಡಿರುವ ಈ ಚಿತ್ರ ಥ್ರಿಲ್ಲರ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಕುಟುಂಬದ ಒಳಗಿನ ಸಂಘರ್ಷ, ದ್ವೇಷ ಮತ್ತು ಸೇಡಿನ ಸುತ್ತ ಹೆಣೆದಿರುವ ಕಥೆಯಲ್ಲಿ ಒಬ್ಬ ಮಹಿಳೆ ತನ್ನ ವೈಯಕ್ತಿಕ ಜೀವನದ ಸಂಕೀರ್ಣತೆಗಳ ನಡುವೆ ಸಿಲುಕಿಕೊಳ್ಳುತ್ತಾಳೆ. ಪರಿಸ್ಥಿತಿಗಳು ತೀವ್ರ ಸ್ವರೂಪ ಪಡೆದು ಒಂದು ಕೊಲೆ ನಡೆಯುತ್ತದೆ. ಬಳಿಕ ನಡೆಯುವ ಘಟನೆಗಳು […]

ಆಳ್ವಾಸ್‌ನಲ್ಲಿ ಪದವಿ ಪ್ರದಾನ ಸಮಾರಂಭ; ಪದವಿ ಪ್ರಮಾಣಪತ್ರಕ್ಕಿಂತ ಅದರ ಹಿಂದಿರುವ ಮೌಲ್ಯಗಳು ಶ್ರೇಷ್ಠ: ಡಾ. ಚಿನ್ನಪ್ಪ ಗೌಡ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶನಿವಾರ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಆಯೋಜಿಸಲಾದ ಪದವಿ ಪ್ರದಾನ ಸಮಾರಂಭದಲ್ಲಿ  ಆಳ್ವಾಸ್‌ನ ವಿವಿಧ ಶಿಕ್ಷಣ ಸಂಸ್ಥೆಗಳ 2,627 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕರ‍್ಯಕ್ರಮ ನಡೆಯಿತು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಪದವೀಧರರನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣದ ನಿಜವಾದ ಉದ್ದೇಶವು ಕೇವಲ ಪದವಿ ಪಡೆಯುವುದಲ್ಲ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಾಗಿದೆ. ಪದವಿ ಪ್ರಮಾಣಪತ್ರವು ಕೇವಲ ಒಂದು ಕಾಗದದ ತುಣುಕಾಗಿದ್ದು, ಅದಕ್ಕೆ […]