ಇನ್ನು ಭಾರತದಲ್ಲಿ ಹಾಲು ಇರುವ ಐಸ್ ಕ್ರೀಂಗಳನ್ನೇ ತಯಾರು ಮಾಡ್ತೇವೆ ಎಂದ ಕ್ವಾಲಿಟಿ ವಾಲ್ಸ್: ಹಾಗಾದ್ರೆ ಇಷ್ಟು ದಿನ ನಾವು ತಿಂದ ಐಸ್ ಕ್ರೀಂ ನಲ್ಲಿ ಏನಿತ್ತು?

ನವದೆಹಲಿ: ಜನಪ್ರಿಯ ಐಸ್‌ಕ್ರೀಮ್ ತಯಾರಿಕಾ ಸಂಸ್ಥೆ ಕ್ವಾಲಿಟಿ ವಾಲ್ಸ್ Kwality Wall’s ತನ್ನ ಎಲ್ಲಾ ಉತ್ಪನ್ನಗಳನ್ನು ಇನ್ನು ಮುಂದೆ ಸಂಪೂರ್ಣ ಹಾಲು ಆಧಾರಿತ ಐಸ್‌ಕ್ರೀಮ್‌ಗಳಾಗಿ ಮಾರಾಟ ಮಾಡುವುದಾಗಿ ಘೋಷಿಸಿದೆ. ಈ ಮೂಲಕ ಸಂಸ್ಥೆ ತನ್ನ “ಫ್ರೋಜನ್ ಡೆಸರ್ಟ್” ಮಾದರಿಯಿಂದ ಸಂಪೂರ್ಣವಾಗಿ ಹೊರಬಂದು ನೈಜ ಐಸ್‌ಕ್ರೀಮ್ ಉತ್ಪನ್ನಗಳತ್ತ ಹೆಜ್ಜೆ ಇಟ್ಟಿದೆ. ಈ ಹೇಳಿಕೆಯಿಂದ ಹಾಗಾದ್ರೆ ನಾವೆಲ್ಲಾ ಇಷ್ಟು ದಿನ ತಿಂದ ಐಸ್ ಕ್ರೀಂ ಗಳಲ್ಲಿ ಹಾಲಿನ ಅಂಶಗಳೇ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಸಂಸ್ಥೆಯ ಜನಪ್ರಿಯ ಬ್ರ್ಯಾಂಡ್‌ಗಳಾದ Magnum […]

ನಾಳೆಯಿಂದ ಬೆಂಗಳೂರು–ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ ಶುರು: ಪ್ರಯಾಣದ ಅವಧಿ 5 ಗಂಟೆ ಕಡಿಮೆಯಾಗುವ ನಿರೀಕ್ಷೆ

ಮಂಗಳೂರು: ಅಂತೂ ಇಂತೂ ಕರಾವಳಿ ಕರ್ನಾಟಕದ ಜನರ ಬಹುದಿನಗಳ ನಿರೀಕ್ಷೆಯಾಗಿದ್ದ ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಜೂನ್ 1ರಿಂದ ಪ್ರಾಯೋಗಿಕವಾಗಿ ಆರಂಭವಾಗಲಿದ್ದು, ಯಶಸ್ವಿ ಪರೀಕ್ಷೆಗಳ ಬಳಿಕ ವಾಣಿಜ್ಯ ಸಂಚಾರಕ್ಕೆ ಹಸಿರು ನಿಶಾನೆ ಸಿಗುವ ನಿರೀಕ್ಷೆಯಿದೆ. ಪ್ರಸ್ತುತ ಶಿರಾಡಿ ಘಾಟ್ ಮಾರ್ಗದ ಮೂಲಕ ಬೆಂಗಳೂರು ಮತ್ತು ಮಂಗಳೂರು ನಡುವೆ ರಸ್ತೆ ಪ್ರಯಾಣಕ್ಕೆ 8ರಿಂದ 10 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಆದರೆ ವಂದೇ ಭಾರತ್ ರೈಲು ಸೇವೆ ಆರಂಭವಾದರೆ ಈ ಅವಧಿ ಸುಮಾರು 5 ಗಂಟೆಗಳಿಗೆ ಇಳಿಯುವ […]

ಉಡುಪಿ: ಸರಕು ಸಾಗಾಟದ ಲಾರಿಗೆ ಹಿಂಬದಿಯಿಂದ ಟೆಂಪೋ ಡಿಕ್ಕಿ: ಚಾಲಕ ಸಾವು

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮೂಲ್ಕಿ ಸಮೀಪ ಸರಕು ಸಾಗಾಟದ ಲಾರಿಗೆ ಹಿಂಬದಿಯಿಂದ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಸುಕಿನ ಜಾವ ಸಂಭವಿಸಿದೆ.ಮೃತರನ್ನು ಶಿವಮೊಗ್ಗ ಮೂಲದ ಪ್ರಶಾಂತ್ ಪಿ. (29) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಟೆಂಪೋದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ವಾಹನದೊಳಗೆ ಸಿಲುಕಿಕೊಂಡಿದ್ದರು. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟೆಂಪೋ ಡಿಕ್ಕಿ ಹೊಡೆದಿರಬಹುದೆಂದು ಶಂಕಿಸಲಾಗಿದೆ. ಅಪಘಾತದ ಬಳಿಕ ಟೆಂಪೋದಲ್ಲಿ ಸಿಲುಕಿದ್ದ ಚಾಲಕನ ಮೃತದೇಹವನ್ನು ಹೊರತೆಗೆಯಲು ಸಾಕಷ್ಟು […]