ಸಿಎಂ ಸಿದ್ದು ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಬಿಕ್ಕಟ್ಟು ಕೊನೆಗೂ ಅಂತಿಮ ಹಂತ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಆಯೋಜಿಸಲಾಗಿದ್ದ ಹೈ-ವೋಲ್ವೇಜ್ ಉಪಹಾರ ಕೂಟದ ರಾಜಕೀಯ ಬೆಳವಣಿಗೆಗಳು ಇಡೀ ರಾಜ್ಯದ ಗಮನ ಸೆಳೆದಿವೆ. ದೆಹಲಿಯಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಡೆದ ಸುದೀರ್ಘ ಸಭೆಯ ಬಳಿಕ, ಹೈಕಮಾಂಡ್ ನೀಡಿದ 2.5 ವರ್ಷದ ಅಧಿಕಾರ ಹಂಚಿಕೆ ಸೂತ್ರಕ್ಕೆ ಸಿಎಂ ಸಿದ್ದರಾಮಯ್ಯ […]

ಮನೆಯಲ್ಲಿಯೇ ಕೂತು ನೋಡಿ “ದೃಶ್ಯಂ 3” OTT ರಿಲೀಸ್ ಡೇಟ್ ಫಿಕ್ಸ್?

ಬಹುನಿರೀಕ್ಷಿತ ದೃಶ್ಯಂ 3 Drishyam 3 ಸಿನಿಮಾ ಮೇ 21, 2026ರಂದು ಭರ್ಜರಿಯಾಗಿ ಬಿಡುಗಡೆಯಾಗಿ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಸಸ್ಪೆನ್ಸ್‌ ಕ್ರೈಮ್‌ ಥ್ರಿಲ್ಲರ್‌ ಪ್ರಿಯರ ಬಹುಪ್ರೀತಿಯ ಈ ಫ್ರಾಂಚೈಸಿ ಈಗ OTT ರಿಲೀಸ್‌ ವಿಚಾರದಲ್ಲೂ ಭಾರೀ ಕುತೂಹಲ ಹುಟ್ಟಿಸಿದೆ. ಮೋಹನ್ ಲಾಲ್ Mohanlal ಮತ್ತು ಮೀನಾ Meena ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ನಿರ್ದೇಶಕ ಜೀತು ಜೋಸೆಫ್ Jeethu Joseph ಮತ್ತೊಮ್ಮೆ ನಿರ್ದೇಶಿಸಿದ್ದಾರೆ. ಈಗಾಗಲೇ ‘ದೃಶ್ಯಂ’ ಮತ್ತು ದೃಶ್ಯಂ 2 Drishyam 2 OTT ಹಾಗೂ ಥಿಯೇಟರ್ […]

ಹೈಕಮಾಂಡ್ ಸೂಚನೆ ಕೊಟ್ರೂ ಇಂದು ಡಿಕೆಶಿ ಸಿಎಂ ಆಗೋದು ಕಷ್ಟ! ಇಲ್ಲಿದೆ ಪ್ರಮುಖ ಕಾರಣಗಳು

ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ತೀವ್ರಗೊಂಡಿದೆ. ಡಿ.ಕೆ.ಶಿವಕುಮಾರ್ D. K. Shivakumar ಅವರು ಮುಂದಿನ ಮುಖ್ಯಮಂತ್ರಿ ಆಗುವ ಸಾಧ್ಯತೆ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದರೂ, ತಕ್ಷಣವೇ ಅಧಿಕಾರ ಹಸ್ತಾಂತರವಾಗುವುದು ಅಸಾಧ್ಯ ಎನ್ನಲಾಗುತ್ತಿದೆ. ರಾಜ್ಯಪಾಲರ ಮುಂಬೈ ಪ್ರವಾಸ ಪ್ರಮುಖ ಅಡ್ಡಿ ಮುಖ್ಯಮಂತ್ರಿ ರಾಜೀನಾಮೆ ಸ್ವೀಕರಿಸುವುದು, ಹೊಸ ಸಿಎಂಗೆ ಆಹ್ವಾನ ನೀಡುವುದು ಹಾಗೂ ಪ್ರಮಾಣವಚನ ದಿನಾಂಕ ನಿಗದಿ ಮಾಡುವ ಪ್ರಕ್ರಿಯೆ ರಾಜ್ಯಪಾಲರ ಮೂಲಕವೇ ನಡೆಯಬೇಕು. ಆದರೆ ರಾಜ್ಯಪಾಲರು ಮುಂಬೈ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ತಕ್ಷಣದ ರಾಜಕೀಯ […]

ಮಂಗಳೂರಿನ 60ವಯಸ್ಸಿನ ಈ ಪೋರ 38 ದೇಶಗಳ ಬೈಕ್‌ ಯಾತ್ರೆಗೆ ಸಜ್ಜು!!

ಮಂಗಳೂರು: ಇಲ್ಲಿನ 60 ವರ್ಷದ ಈ ಉತ್ಸಾಹಿ ಬೈಕ್ ಸವಾರ ತನ್ನ ರಾಯಲ್ ಎನ್ ಫೀಲ್ಡ್ ಬೈಕ್ ಏರಿ ಹಲವು ದೇಶಗಳಲ್ಲಿ ಸಂಚರಿಸುವ ಪ್ಲಾನ್ ಹೊಂದಿದ್ದಾರೆ. ಅವರೇ ಶರತ್‌ ಎಕ್ಕೂರು. ತಮ್ಮ 60ನೇ ವಯಸ್ಸಿನಲ್ಲಿ ಯುರೋಪ್‌ ಮತ್ತು ಗಲ್ಫ್‌ ಸೇರಿದಂತೆ ಸುಮಾರು 38 ದೇಶಗಳಿಗೆ ಬೈಕ್‌ನಲ್ಲಿ ಪ್ರವಾಸ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಇದು ಅವರ ಎರಡನೇ ಅಂತಾರಾಷ್ಟ್ರೀಯ ಬೈಕ್‌ ಯಾತ್ರೆಯಾಗಿದ್ದು, ಮೇ 31ರಂದು ಮಂಗಳೂರಿನಿಂದ ಪ್ರಯಾಣ ಆರಂಭಿಸಲಿದ್ದಾರೆ. ಅವರು Royal Enfield Super Meteor 650 ಬೈಕ್‌ನಲ್ಲಿ […]

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಬಕ್ರೀದ್ ಆಚರಣೆ

ಉಡುಪಿ: ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬ(ಈದುಲ್ ಅಝಾ)ವನ್ನು ಸಂಭ್ರಮ, ಸಡಗರದಿಂದ ಗುರುವಾರ ಆಚರಿಸಿದರು. ಉಡುಪಿ ನಗರ, ಕಾಪು, ಬ್ರಹ್ಮಾವರ ಕುಂದಾಪುರ, ಬೈಂದೂರು ಹೆಬ್ರಿ, ಕಾರ್ಕಳ ತಾಲೂಕುಗಳ ಎಲ್ಲ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಮುಸ್ಲಿಂ ಬಾಂಧವರು ಬೆಳಗ್ಗೆ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಉಡುಪಿ ಜಾಮೀಯ ಮಸೀದಿಯಲ್ಲಿ […]