ಮಂಗಳೂರು: ಇಲ್ಲಿನ 60 ವರ್ಷದ ಈ ಉತ್ಸಾಹಿ ಬೈಕ್ ಸವಾರ ತನ್ನ ರಾಯಲ್ ಎನ್ ಫೀಲ್ಡ್ ಬೈಕ್ ಏರಿ ಹಲವು ದೇಶಗಳಲ್ಲಿ ಸಂಚರಿಸುವ ಪ್ಲಾನ್ ಹೊಂದಿದ್ದಾರೆ. ಅವರೇ ಶರತ್ ಎಕ್ಕೂರು. ತಮ್ಮ 60ನೇ ವಯಸ್ಸಿನಲ್ಲಿ ಯುರೋಪ್ ಮತ್ತು ಗಲ್ಫ್ ಸೇರಿದಂತೆ ಸುಮಾರು 38 ದೇಶಗಳಿಗೆ ಬೈಕ್‌ನಲ್ಲಿ ಪ್ರವಾಸ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಇದು ಅವರ ಎರಡನೇ ಅಂತಾರಾಷ್ಟ್ರೀಯ ಬೈಕ್ ಯಾತ್ರೆಯಾಗಿದ್ದು, ಮೇ 31ರಂದು ಮಂಗಳೂರಿನಿಂದ ಪ್ರಯಾಣ ಆರಂಭಿಸಲಿದ್ದಾರೆ.
ಅವರು Royal Enfield Super Meteor 650 ಬೈಕ್‌ನಲ್ಲಿ ಮಂಗಳೂರಿನ ಶಾಂತಿ ಕೆಥಡ್ರಿಯಲ್ ಚರ್ಚ್ ಬಳಿಯಿಂದ ಬೆಳಿಗ್ಗೆ ಪ್ರಯಾಣ ಆರಂಭಿಸಲಿದ್ದಾರೆ.
ಬೆಂಗಳೂರು, ಹೈದರಾಬಾದ್, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಮೂಲಕ ನೇಪಾಳ ಪ್ರವೇಶಿಸಿ ಅಲ್ಲಿಂದ ಟಿಬೆಟ್, ಚೀನಾ, ಕಜಕಿಸ್ಥಾನ್, ರಷ್ಯಾ, ಇರಾನ್, ಇರಾಕ್, ಸೌದಿ ಅರೇಬಿಯಾ ಸೇರಿದಂತೆ ಅನೇಕ ಯುರೋಪಿಯನ್ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಈ ಪ್ರವಾಸದಲ್ಲಿ France, Germany, Italy, Spain, Switzerland, Norway ಹಾಗೂ Turkey ಮೊದಲಾದ ರಾಷ್ಟ್ರಗಳು ಸೇರಿವೆ.
ಪ್ರತಿದಿನ ಸುಮಾರು 500 ಕಿ.ಮೀ. ಪ್ರಯಾಣಿಸುವ ಗುರಿ ಹೊಂದಿರುವ ಅವರು ಒಟ್ಟು 35 ಸಾವಿರದಿಂದ 40 ಸಾವಿರ ಕಿ.ಮೀ. ವರೆಗೆ ಸುತ್ತಾಟ ನಡೆಸಲಿದ್ದಾರೆ. ತಮ್ಮ ಬೈಕ್‌ನಲ್ಲಿ ಭಾರತದ ಧ್ವಜದ ಜೊತೆಗೆ ತುಳುನಾಡಿನ ಧ್ವಜವನ್ನೂ ಹೊತ್ತೊಯ್ಯಲಿದ್ದಾರೆ.
ಚೀನಾದಲ್ಲಿ ಸ್ಥಳೀಯ ಟೂರ್ ಗೈಡ್ ಸಹಾಯ ಪಡೆಯಲಿರುವ ಶರತ್ ಅವರು, ಸಾಧ್ಯವಾದರೆ Afghanistanಗೂ ಭೇಟಿ ನೀಡುವ ಯೋಜನೆ ಹೊಂದಿದ್ದಾರೆ. ಕೊನೆಯಲ್ಲಿ Omanನಲ್ಲಿ ಯಾತ್ರೆ ಮುಗಿಸಿ ಹಡಗಿನ ಮೂಲಕ ಭಾರತಕ್ಕೆ ಮರಳಲಿದ್ದಾರೆ.
ಈ ಹಿಂದೆಯೂ 2024ರಲ್ಲಿ ಅವರು ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ಬೈಕ್ ಯಾತ್ರೆ ನಡೆಸಿದ್ದು, “Say No To Drugs” ಸಂದೇಶದೊಂದಿಗೆ ದುಬೈ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು.

















