ಬಹುನಿರೀಕ್ಷಿತ ದೃಶ್ಯಂ 3 Drishyam 3 ಸಿನಿಮಾ ಮೇ 21, 2026ರಂದು ಭರ್ಜರಿಯಾಗಿ ಬಿಡುಗಡೆಯಾಗಿ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಪ್ರಿಯರ ಬಹುಪ್ರೀತಿಯ ಈ ಫ್ರಾಂಚೈಸಿ ಈಗ OTT ರಿಲೀಸ್ ವಿಚಾರದಲ್ಲೂ ಭಾರೀ ಕುತೂಹಲ ಹುಟ್ಟಿಸಿದೆ.
ಮೋಹನ್ ಲಾಲ್ Mohanlal ಮತ್ತು ಮೀನಾ Meena ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ನಿರ್ದೇಶಕ ಜೀತು ಜೋಸೆಫ್ Jeethu Joseph ಮತ್ತೊಮ್ಮೆ ನಿರ್ದೇಶಿಸಿದ್ದಾರೆ. ಈಗಾಗಲೇ ‘ದೃಶ್ಯಂ’ ಮತ್ತು ದೃಶ್ಯಂ 2 Drishyam 2 OTT ಹಾಗೂ ಥಿಯೇಟರ್ ಎರಡರಲ್ಲೂ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದವು.
ಇದೀಗ ವರದಿಗಳ ಪ್ರಕಾರ, ಅಮೆಜಾನ್ ಪ್ರೈಂ Amazon Prime Video ‘ದೃಶ್ಯಂ 3’ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಸಿನಿಮಾ ಜೂನ್ ಮೂರನೇ ವಾರ ಅಥವಾ ಕೊನೆಯ ವಾರದಲ್ಲಿ OTTಗೆ ಬರಬಹುದೆಂಬ ಮಾತು ಕೇಳಿಬರುತ್ತಿದೆ.
ಸಾಮಾನ್ಯವಾಗಿ ಥಿಯೇಟರ್ ಬಿಡುಗಡೆಯಾದ 4 ರಿಂದ 6 ವಾರಗಳ ಬಳಿಕವೇ ಸಿನಿಮಾಗಳು OTTಗೆ ಬರುತ್ತವೆ. ಆ ಲೆಕ್ಕದಲ್ಲಿ ನೋಡಿದರೆ, ‘ದೃಶ್ಯಂ 3’ ಜೂನ್ ಅಂತ್ಯದೊಳಗೆ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಹೆಚ್ಚಿದೆ.
ಕಥೆಯಲ್ಲಿ ಏನಿದೆ?
‘ದೃಶ್ಯಂ 2’ ಮುಗಿದಲ್ಲೇ ‘ದೃಶ್ಯಂ 3’ ಆರಂಭವಾಗುತ್ತದೆ. ಹೈಕೋರ್ಟ್ ವರುಣ್ ಕೊಲೆ ಪ್ರಕರಣವನ್ನು ವಜಾಗೊಳಿಸಿದ ಬಳಿಕ ಜಾರ್ಜ್‌ಕುಟ್ಟಿ ಕುಟುಂಬ ನಿರಾಳ ಜೀವನ ನಡೆಸುತ್ತಿರುವಂತೆ ಕಾಣುತ್ತದೆ. ಆದರೆ ಹೊಸ ತಿರುವುಗಳು ಮತ್ತೆ ಕಥೆಯನ್ನು ರೋಚಕ ಹಂತಕ್ಕೆ ಕೊಂಡೊಯ್ಯುತ್ತವೆ.
ಜಾರ್ಜ್‌ಕುಟ್ಟಿ ತನ್ನ ಜೀವನಾಧಾರಿತ ಕಥೆಯನ್ನು ಸಿನಿಮಾ ಮಾಡಿ ಯಶಸ್ಸು ಕಾಣುವ ಭಾಗವೂ ಕಥೆಯಲ್ಲಿ ಪ್ರಮುಖವಾಗಿದ್ದು, ಮಗಳು ಅಂಜುಗಾಗಿ ಮದುವೆ ಸಂಬಂಧ ಹುಡುಕುವ ಪ್ರಯತ್ನಗಳ ನಡುವೆ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ.

















