ಕೈಗಾರಿಕಾ ಜಗತ್ತಿಗೆ ಕರೆದೊಯ್ಯಲಿದೆ ಮಣಿಪಾಲ MSDC ಯ ಕೈಗಾರಿಕಾ ತರಬೇತಿ, ಇಂಟರ್ನ್‌ಶಿಪ್ ಕಾರ್ಯಕ್ರಮ, ನೀವೂ ಭಾಗವಹಿಸಿ ಅದ್ಬುತ ಕೌಶಲ್ಯ ಪಡೆಯಿರಿ

ಮಣಿಪಾಲ: ಯುವ ಜನತೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ CNC ಯಂತ್ರಗಳ ಕುರಿತ ಕೈಗಾರಿಕಾ ತರಬೇತಿ ಹಾಗೂ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಜೂನ್ 1 ರಿಂದ ಆಯೋಜಿಸಲಾಗಿದೆ. ಈ ತರಬೇತಿ ಒಂದು ತಿಂಗಳ ಅವಧಿಯದ್ದಾಗಿದ್ದು, CNC ಟರ್ನಿಂಗ್ ಸೆಂಟರ್ ಮತ್ತು CNC ವರ್ಟಿಕಲ್ ಮಷೀನಿಂಗ್ ಸೆಂಟರ್‌ಗಳ ಪ್ರೋಗ್ರಾಮಿಂಗ್, ಸಿಮ್ಯುಲೇಷನ್ ಹಾಗೂ ಕಾರ್ಯಾಚರಣೆ ಕುರಿತು ಇಲ್ಲಿ ಸಮಗ್ರ ತರಬೇತಿ ನೀಡಲಾಗುತ್ತದೆ.ಈ ಕಾರ್ಯಕ್ರಮದಲ್ಲಿ FANUC ಕಂಟ್ರೋಲರ್ ಬಳಸಿ CNC ಯಂತ್ರಗಳ ಪ್ರೋಗ್ರಾಮಿಂಗ್ […]

ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ನಲ್ಲಿ ಸ್ಪರ್ಧಾತ್ಮಕ ಕೋರ್ಸ್ ಗಳಿಗೆ ಶುರುವಾಗಿದೆ ಪ್ರವೇಶಾತಿ: ಬದುಕು ಕಟ್ಟಿಕೊಡುವ ಈ ಕೋರ್ಸ್ ಗಳನ್ನು ಆಯ್ಕೆ ಮಾಡಿ

ಮಣಿಪಾಲ: ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿರುವ Dr. T.M.A. Pai Polytechnic ನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಎಐಸಿಟಿಇ ಅನುಮೋದನೆ ಹಾಗೂ ಕರ್ನಾಟಕ ಸರ್ಕಾರದ ಡಿಟಿಇಗೆ ಸಂಯೋಜಿತವಾಗಿರುವ ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ತಾಂತ್ರಿಕ ಶಿಕ್ಷಣದಲ್ಲಿ ಗುಣಮಟ್ಟದ ಬೋಧನೆಗೆ ಹೆಸರಾಗಿದೆ. “ಇಂದು ಕಲಿಯಿರಿ, ನಾಳೆ ನಾಯಕತ್ವ ವಹಿಸಿರಿ” ಎಂಬ ಧ್ಯೇಯವಾಕ್ಯದೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಸಂಸ್ಥೆ ಒತ್ತು ನೀಡುತ್ತಿದೆ. ಯಾವೆಲ್ಲ ಕೋರ್ಸ್ ಗಳಿವೆ? ಯಾರು ಸೇರಬಹುದು? […]

ಕಾರು ಪ್ರಿಯರಿಗೆ ಶಾಕ್ ನೀಡಿದ Maruti Suzuki: ಜೂ. 1 ರಿಂದ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ Maruti Suzuki ತನ್ನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಜೂನ್ ತಿಂಗಳಿನಿಂದ ಅನ್ವಯವಾಗುವಂತೆ ಕಂಪನಿಯ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ₹30,000 ವರೆಗೆ ಹೆಚ್ಚಳ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ವಾಹನ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಮುಂಬೈನ ರಾಷ್ಟ್ರೀಯ ಷೇರುಪೇಟೆ (NSE)ಗೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ. ಈ ದರ ಏರಿಕೆ ಎಲ್ಲಾ ಮಾದರಿಗಳಿಗೂ ಒಂದೇ ರೀತಿಯಾಗಿರುವುದಿಲ್ಲ. […]

ಉಡುಪಿ: ಓವರ್ ಸ್ಪೀಡ್ ಪತ್ತೆಗೆ ಕ್ಯಾಮೆರಾ ಕಣ್ಗಾವಲು: ಹೆದ್ದಾರಿಯ 6 ಸ್ಥಳಗಳಲ್ಲಿ ಸ್ಪೀಡ್ ರಾಡಾರ್ ಕ್ಯಾಮರಾ ಅಳವಡಿಕೆ

ಉಡುಪಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿರುವ ಆರು ಸ್ಪೀಡ್ ರ್ಯಾಡರ್ ಕ್ಯಾಮೆರಾಗಳು ಕಳೆದ ಒಂದು ವಾರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 46,753 ವಾಹನಗಳನ್ನು ಪತ್ತೆ ಹಚ್ಚಿವೆ. ಈ ಸಂಬಂಧ ಇದುವರೆಗೆ 235 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ, ಕಾಪು ಠಾಣಾ ವ್ಯಾಪ್ತಿಯ ದಂಡತೀರ್ಥ, ಕೋಟ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ, ಗಂಗೊಳ್ಳಿ ಠಾಣಾ ವ್ಯಾಪ್ತಿಯ ತ್ರಾಸಿ, ಬೈಂದೂರು ಠಾಣಾ ವ್ಯಾಪ್ತಿಯ […]

ಜೂನ್ 10ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ “ವರಾಹ ಮಿಹಿರನ್” ಕಥಕ್ಕಳಿ ಪ್ರದರ್ಶನ

ಉಡುಪಿ: ಉಜ್ಜಯಿನಿ ರಾಜಮನೆತನವನ್ನು ಐತಿಹಾಸಿಕ ನವರತ್ನಗಳಲ್ಲಿ ಅಲಂಕರಿಸಿದ ಪೌರಾಣಿಕ ಖಗೋಳಶಾಸ್ತ್ರಜ್ಞ, ಜ್ಯೋತಿಷಿಯ ಜೀವನಾಧಾರಿತ “ವರಾಹ ಮಿಹಿರನ್” ಕಥಕ್ಕಳಿ ಪ್ರದರ್ಶನವು ಜೂನ್‌ 10ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸ್ವರ್ಣಮುಖಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಚೇತಲ್ಲೂರ್ ವಿಜಯಕುಮಾರ್ ಗುಪ್ತನ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಕೇರಳದ ಖ್ಯಾತ ಕಥಕ್ಕಳಿ ಕಲಾವಿದರು ಲವರಾಹಮಿಹಿರರ ಜ್ಯೋತಿಷ್ಯ ಪ್ರಜ್ಞೆ ಹಾಗೂ ಐತಿಹಾಸಿಕ ಭವಿಷ್ಯವಾಣಿಯನ್ನು ಆಧರಿಸಿದ […]